ಸಿಂದಗಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರಿನ ಸಂಸ್ಕೃತ ನಿರ್ದೇಶನಾಲಯ ಹಾಗೂ ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆಯ ಇವರ ಸಹಯೋಗದೊಂದಿಗೆ ಸೇತುಬಂಧ ೦೩-೦೪ನೆಯ ಸಾಲಿನ ಪುನಶ್ಚೇತನ ಶಿಬಿರ ಹಾಗೂ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ವಿಶೇಷ ತರಬೇತಿ ಸಮಾರೋಪ ಸಮಾರಂಭವನ್ನು ಡಿ.೧೪ರಂದು ಬೆಳಿಗ್ಗೆ ೯ಗಂಟೆಗೆ ಸಾತವಿರೇಶ್ವರ ಸಭಾಭವನದಲ್ಲಿ ಜರುಗಲಿದೆ ಎಂದು ಸಂಯೋಜಕ ಡಾ.ಮಲ್ಲನಗೌಡ ಎಸ್. ತಿಳಿಸಿದ್ದಾರೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳಲಿದ್ದಾರೆ. ಸಾನಿಧ್ಯವನ್ನು ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಕನ್ನೊಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರುಣ ಶಹಾಪೂರ, ಅಧ್ಯಕ್ಷತೆಯನ್ನು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪಾಲಯ್ಯ ಸಿ, ಪ್ರಮಾಣ ಪತ್ರ ವಿತರಣೆಯನ್ನು ವಿಜಯಪುರ ಬಿ.ಎಲ್.ಡಿ.ಇ ಸೊಸೈಟಿ, ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪ್ರಾಂಶುಪಾಲರಾದ ಡಾ.ಸಂಜಯ್ ಕಡ್ಲಿಮಟ್ಟಿ ನೀಡಲಿದ್ದಾರೆ ಎಂದು ಬೆಂಗಳೂರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವೆ ಡಾ. ರೂಪಾಶ್ರೀ ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
