Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕ್ರಾಂತಿಕಾರಕ ಕವಿ ಸಾಹಿತಿ ಡಾ.ಬುದ್ದಣ್ಣ ಹಿಂಗಮಿರೆ

ಎಸ್ಟಿ (ನಾಯಕ) ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ

ಸುಡುವ ಸೂರ್ಯನಿಗೊಂದು ಪತ್ರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಉತ್ತರ ಕರ್ನಾಟಕವನ್ನು ಸರ್ಕಾರ ಕಡೆಗಣಿಸಿದೆ :ಕುಲಕರ್ಣಿ
(ರಾಜ್ಯ ) ಜಿಲ್ಲೆ

ಉತ್ತರ ಕರ್ನಾಟಕವನ್ನು ಸರ್ಕಾರ ಕಡೆಗಣಿಸಿದೆ :ಕುಲಕರ್ಣಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಆಲಮಟ್ಟಿ: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸಲು ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿ ಸರ್ಕಾರ ಅಧಿವೇಶನ ನಡೆಸುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಯಾವ ಶಾಸಕರೂ ಚಕಾರ ಎತ್ತುತ್ತಿಲ್ಲ. ಸರ್ಕಾರವು ಕೂಡಾ ಉತ್ತರ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಿದೆ. ಕೇವಲ ಕಾಟಾಚಾರಕ್ಕೆ ಅಧಿವೇಶನ ನಡೆಸುವುದಾದರೂ ಏತಕ್ಕೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಬುಧವಾರ ಆಲಮಟ್ಟಿಯ ಪ್ರವಾಸಿ ಮಂದಿರದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರದ ನಾಡು ಖ್ಯಾತಿಯ ಉತ್ತರಕರ್ನಾಟಕವನ್ನು ಹಸಿರು ನಾಡಾಗಿಸಲು ಆಲಮಟ್ಟಿ ಜಲಾಶಯಕ್ಕೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿ ೬೦ವರ್ಷ ಕಳೆಯುತ್ತಾ ಬಂದರೂ ಇನ್ನೂವರೆಗೆ ಬರದ ನಾಡು ಖ್ಯಾತಿಯ ಜಿಲ್ಲೆಗಳಲ್ಲಿ ಇನ್ನೂವರೆಗೆ ಸಮರ್ಪಕವಾಗಿ ನೀರಾವರಿಯಾಗದೇ ಇರುವದು ಜನರಿಂದ ಚುನಾಯಿತರಾಗಿರುವ ಶಾಸಕರು, ಸಂಸದರುಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ ಎಂದು ಖಾರವಾಗಿ ಮಾತನಾಡಿದರು.
ರಾಜ್ಯದ ಶೇ.೬೫ರಷ್ಟು ಕೃಷಿ ಜಮೀನನ್ನು ನೀರಾವರಿಗೊಳಪಡಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕುರಿತು ಮೌನವಾಗದೇ ಪ್ರಗತಿಯ ಬಗ್ಗೆ ಮೌನ ಮುರಿದು ಮಾತನಾಡಿರಿ ವಿಧಾನ ಸಭೆ, ವಿದಾನಪರಿಷತ್ ಸದಸ್ಯರುಗಳೇ ಎಂದು ನುಡಿದರು.
ಕೋಟ್ಯಾಂತರ ಹಣ ಖರ್ಚು ಮಾಡಿ ಅಧಿವೇಶನದಲ್ಲಿ ರೈತರ ಹಾಗೂ ಜನಸಾಮಾನ್ಯರ ಗಂಭೀರ ಸಮಸ್ಯೆಯನ್ನು ಚರ್ಚಿಸದೆ ಸರ್ಕಾರ ತವಡು ಕುಟ್ಟುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಹರಿ ಹಾಯ್ದರು.
ಜಲಾಶಯದ ನೀರಿನ ಮಟ್ಟವನ್ನು ೫೨೪.೨೫೬ ಕ್ಕೆ ನಿಲ್ಲಿಸಲು ನ್ಯಾಯಮೂರ್ತಿ ಬೃಜೇಶಕುಮಾರ ಅವರ ನೇತೃತ್ವದ ೨ನೇ ಅಂತರರಾಜ್ಯ ಕೃಷ್ಣಾ ಜಲ ವಿವಾದ ನ್ಯಾಯಾಧೀಕರಣವು ೨೦೧೦ ಐತೀರ್ಪು ನೀಡಿದ್ದು, ೨೦೧೩ರಲ್ಲಿ ಅಂತಿ ತೀರ್ಪು ಪ್ರಕಟಿಸಿದೆ. ೨೦೧೩ ರಿಂದ ೨೦೧೮ರವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸ್ವಲ್ಪ ಸಮಾಧಾನ ಎಂಬಂತೆ ಕಾಲುವೆಗಳ ನಿರ್ಮಾಣ ಮಾಡಲಾಯಿತು. ಯೋಜನೆ ಆರಂಭವಾಗಿ ೬೦ ವರ್ಷಗಳು ಆಗುತ್ತಾ ಬಂದರು ಮೂಲ ಆಶೆ ಈಡೇರುತ್ತಿಲ್ಲ, ಈಗಲಾದರೂ ನಡೆದಿರುವ ಅಧಿವೇಶನದಲ್ಲಿ ಚರ್ಚಿಸಿ ೫೨೪.೨೫೬ ನೀರು ನಿಲ್ಲಿಸಲು ತಗಲುವ ಅನುದಾನವನ್ನು ಬಿಡುಗಡೆ ಮಾಡಬೇಕು. ಸಿವ್ಹಿಲ್ ಕಾಮಗಾರಿ, ಪುನರ್ವಸತಿ, ಪುನರ್ ನಿರ್ಮಾಣ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಯೋಜನೆಯನ್ನು ಪೂರ್ಣಗೊಳಿಸಬೇಕು, ಜಲಾಶಯದ ನೀರಿನ ಮಟ್ಟ ಹೆಚ್ಚಿಸುವದರಿಂದ ಇನ್ನು ೧ ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನು ಮುಳುಗಡೆ ಹೊಂದುತ್ತವೆ. ಸುಮಾರು ೨೨ಹಳ್ಳಿಗಳು ಮುಳುಗಡೆ ಹೊಂದುತ್ತಿವೆ, ಇನ್ನುಳಿದಂತೆ ಈ ಹಿಂದೆ ಮುಳುಗಡೆ ಹೊಂದಿರುವ ಗ್ರಾಮಗಳ ಜಮೀನುಗಳು ಬಾಧಿತಗೊಳ್ಳುತ್ತವೆ. ಈ ಭಾಗದ ರೈತರು ಗುಳೆ ಹೋಗುವದನ್ನು ತಪ್ಪಿಸಲು ಸರ್ಕಾರ ಅಗತ್ಯಕ್ರಮಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ಹೊನಕೇರಪ್ಪ ತೆಲಗಿ, ಗುರಲಿಂಗಪ್ಪ ಪಡಸಲಗಿ, ಬಸಯ್ಯ ಮಠ, ಈರಣ್ಣ ದೇವರಗುಡಿ, ಮೋಹನಗೌಡ ಪಾಟೀಲ, ಹನಮಂತ್ರಾಯ ಗುಣಕಿ ಮೊದಲಾದವರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕ್ರಾಂತಿಕಾರಕ ಕವಿ ಸಾಹಿತಿ ಡಾ.ಬುದ್ದಣ್ಣ ಹಿಂಗಮಿರೆ

ಎಸ್ಟಿ (ನಾಯಕ) ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ

ಸುಡುವ ಸೂರ್ಯನಿಗೊಂದು ಪತ್ರ

ಸರ್ಕಾರದ ಸಾಧನೆಗೆ ಮತದಾರರ ಮನ್ನಣೆ :ಸಚಿವ ಶಿವಾನಂದ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕ್ರಾಂತಿಕಾರಕ ಕವಿ ಸಾಹಿತಿ ಡಾ.ಬುದ್ದಣ್ಣ ಹಿಂಗಮಿರೆ
    In ವಿಶೇಷ ಲೇಖನ
  • ಎಸ್ಟಿ (ನಾಯಕ) ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ಸುಡುವ ಸೂರ್ಯನಿಗೊಂದು ಪತ್ರ
    In ವಿಶೇಷ ಲೇಖನ
  • ಸರ್ಕಾರದ ಸಾಧನೆಗೆ ಮತದಾರರ ಮನ್ನಣೆ :ಸಚಿವ ಶಿವಾನಂದ
    In (ರಾಜ್ಯ ) ಜಿಲ್ಲೆ
  • ಮೇ.೨೪ ರಂದು ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
    In (ರಾಜ್ಯ ) ಜಿಲ್ಲೆ
  • ಮಕ್ಕಳೇ ಪ್ರಭುದ್ದ ಭಾರತದ ಆಸ್ತಿ :ಪಿಎಸೈ ಮಹೇಶ ಸಂಕ
    In (ರಾಜ್ಯ ) ಜಿಲ್ಲೆ
  • ಪ.ಬಂಗಾಳದಲ್ಲಿ ಬಿಜೆಪಿ ಗೆಲುವು: ಕಾರ್ಯಕರ್ತರಲ್ಲಿ ಹೆಚ್ಚಿದ ಆತ್ಮವಿಶ್ವಾಸ
    In (ರಾಜ್ಯ ) ಜಿಲ್ಲೆ
  • ಭಕ್ತರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಶಕ್ತಿ ಮಹಾಗುರುಗಳಿಗಿದೆ
    In (ರಾಜ್ಯ ) ಜಿಲ್ಲೆ
  • ವಿದ್ಯಾರ್ಥಿಗಳಲ್ಲಿ ಕುಂಠಿತವಾಗುತ್ತಿರುವ ಕ್ರೀಡಾಸಕ್ತಿ :ಬಿರಾದಾರ
    In (ರಾಜ್ಯ ) ಜಿಲ್ಲೆ
  • ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸೇತುಬಂಧ ಸಹಕಾರಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.