ಸಿಂದಗಿ: ಶಹಾಪುರದ ಶ್ರೀ ಚಂದ್ರಕಾಂತ ಕರದಳ್ಳಿ ಪ್ರತಿಷ್ಠಾನದಿಂದ ಪ್ರತಿ ವರ್ಷದಂತೆ ಕೊಡಮಾಡುವ ಕರದಳ್ಳಿ ಸದ್ಭಾವನಾ ಪುರಸ್ಕಾರಕ್ಕೆ ೨೦೨೩ನೇ ಸಾಲಿಗೆ ಸಿಂದಗಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಕರದಳ್ಳಿ ತಿಳಿಸಿದ್ದಾರೆ.
ಆಯ್ಕೆ ಸಮಿತಿಯಲ್ಲಿ ವಿಮರ್ಶಕ ಸಿ.ಎಸ್. ಭೀಮರಾಯ, ಸಾಹಿತಿ ದೊಡ್ಡಬಸಪ್ಪ ಬಳೂರಗಿ ಹಾಗೂ ಪತ್ರಕರ್ತ ರವಿ ಹಿರೇಮಠ ಇದ್ದರು. ಜ.೧೯ ರಂದು ಶಹಾಪುರ ಪಟ್ಟಣದಲ್ಲಿ ಜರಗುವ ಲಿಂ.ಚಂದ್ರಕಾಂತ ಕರದಳ್ಳಿ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುವುದು. ಪ್ರಶಸ್ತಿ ಪತ್ರ, ಸ್ಮರಣಿಕೆ ಜತೆ ನಗದು ೫೦೦೦ ರೂ. ನೀಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

