ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.
ಸದರಿ ಲೋಕ ಅದಾಲತ್ ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು ೬೧೮೨ ಬಾಕಿ ಇರುವ ಪ್ರಕರಣಗಳಲ್ಲಿ ೧೯೦೫ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಸದರಿ ಪ್ರಕರಣಗಳಲ್ಲಿ ಒಟ್ಟು ೬೯೩ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅದರಲ್ಲಿ ಅಪರಾಧ ಪ್ರಕರಣಗಳು, ಎಂವಿಸಿ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೆಂಟೇನೆನ್ಸ್ ಪ್ರಕರಣಗಳು, ಪಾಲು ವಾಟ್ನಿ ದಾವೆಗಳು, ಎಲ್‌ಎಸಿ ಇಪಿ ಪ್ರಕರಣಗಳು, ಎಮ್‌ವಿಸಿ ಇಪಿ ಪ್ರಕರಣಗಳು, ಅಪರಾಧ ದಂಡ ಪ್ರಕರಣಗಳು, ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಯಿತು.
ಮತ್ತು ಪೂರ್ವದಾವೆ ಪ್ರಕರಣಗಳಲ್ಲಿ, ಕಂದಾಯ ಇಲಾಖೆಯ ಕಂದಾಯ ಅದಾಲತ್ ಪ್ರಕರಣಗಳು, ಬ್ಯಾಂಕಿನ ಪ್ರಕರಣಗಳು, ಬಿ ಎಸ್‌ಏನ್‌ಎಲ್ ಪ್ರಕರಣಗಳು, ಅರಣ್ಯ ಇಲಾಖೆಯ ಹಾಗೂ ಅಬಕಾರಿ ಇಲಾಖೆಯ ಪ್ರಕರಣಗಳು ಸೇರಿ ಒಟ್ಟು ೩೨೬೧ ಪ್ರಕರಣಗಳಲ್ಲಿ ೫೫೯ ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಸದರಿ ಮೇಲ್ಕಾಣಿಸಿದ ಪ್ರಕರಣಗಳನ್ನು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ನಿಂಗಪ್ಪ ಗರಗ ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀ ಸಂಪತಕುಮಾರ ಬಳೂಲಗಿಡದ ಇವರು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಿದರು.
ನ್ಯಾಯಾಂಗ ಸಂಧಾನಕಾರರಾಗಿ ಯಮನಪ್ಪ ಹಾಗೂ ಬಿಪಿ ಮ್ಯಾಗೇರಿ ವಕೀಲರುಗಳು, ಸರಕಾರಿ ವಕೀಲ ಬಸವರಾಜ ಆಹೇರಿ ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮತ್ತು ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಹಾಗೂ ನ್ಯಾಯಾಲಯದ ಸಿಬ್ಬಂದಿ ಅರವಿಂದ ಕುಂಬಾರ, ಶಿರಸ್ತೇದಾರ ಎಸ್‌ಎಸ್ ಚಕ್ರಮನಿ, ಸುರೇಶ ಬಳಗಾನೂರ, ಎಮ್‌ಎಫ್.ಜೇವರ್ಗಿ, ಸಿಬ್ಬಂದಿಗಳಾದ ಎ.ಆರ್.ಮುಜಾವರ, ಪ್ರಸನ್ನ ಎಸ್, ವಿ.ಸಿ ಶಿವಣಗಿ, ಅಮಿದಾ ನದಾಫ್, ಎಮ್.ಎಸ್ ಸಾಲಿಮಠ, ಜ್ಯೋತಿ ಹೆಬ್ಬಾಳ, ಪಿ.ಎಲ್.ಗಾಯಕವಾಡ, ಕಾವೇರಿ ರಾಠೋಡ, ಮಹಾಂತೇಶ್ ಹಚರೆಡ್ಡಿ, ನರ್ಮದಾ ಮರೋಳ, ಜ್ಯೋತಿ ಹೆಬ್ಬಾಳ, ರಾಜೇಶ್ವರಿ, ಮಧು ಧರ್ಮಗಿರಿ, ಎಸ್.ಎಸ್ ಹರನಾಳ, ಚೆನ್ನಮ್ಮ ಬಾಗೇವಾಡಿ, ಬಿ.ಎಮ್ ಮುಂದಿನಮನಿ. ಆಯ್.ಎಸ್ ಹಗಟಗಿ. ಎಮ್. ಎ ಲಿಂಗಸೂರ. ಏನ್.ಬಿ ಮುದ್ನಾಳ, ಪಿ.ಬಿ ಗೌಡರ, ಕುಮಾರಿ ಹಸೀನಾ ಅನಂತಪೂರ, ಶ್ರೀದೇವಿ ರಾಜೂರ್, ಎಸ್.ಎಂ ಕಿಣಗಿ. ಆಯ್.ಎಸ್ ಹಗಟಗಿ. ಎಲ್.ಎಸ್ ಮೇಟಿ, ರವಿ ನಾಲತವಾಡ ಸೇರಿದಂತೆ ಎಲ್ಲ ನ್ಯಾಯವಾದಿಗಳು ನ್ಯಾಯಾಲಯ ಸಿಬ್ಬಂದಿಗಳು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

