ಮುದ್ದೇಬಿಹಾಳ: ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಬೇಕಾಗುವ ಮೂಲಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಶಾಲಾ ಮಕ್ಕಳಿಗೆ ಉನ್ನತ ದರ್ಜೆಯ ತರಬೇತಿ ಕಲ್ಪಿಸಲು ಜಂಟಿಯಾಗಿ ಶ್ರಮಿಸುತ್ತಿರುವ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಎಸ್.ಡಿ.ಎಂ.ಸಿಯವರ ಕಾರ್ಯ ನಾಡಿಗೆ ಮಾದರಿಯಾಗಿದೆ ಶಿಕ್ಷಣ ಸಂಯೋಜಕ ಎಚ್.ಎ.ಮೇಟಿ ಹೇಳಿದರು.
ತಾಲೂಕಿನ ಬಸರಕೋಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಪ್ಲೇ ಸ್ಕೂಲ್ ಮಾದರಿಯ ನಲಿಕಲಿ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು
ಕಾರ್ಪೋರೇಟ್ ಮಾದರಿಯಲ್ಲಿ ಸರಕಾರಿ ಶಾಲೆಯನ್ನು ಕಟ್ಟಿ ಬೆಳೆಸಲು ಬಸರಕೋಡದಲ್ಲಿ ನಡೆದ ಆಂದೋಲನ ರಾಜ್ಯಕ್ಕೆ ಮಾದರಿಯಾಗಿದ್ದು ಹಳೆಯ ವಿದ್ಯಾರ್ಥಿಗಳ ಪಾಲುದಾರಿಕೆಯಿಂದ ಉತ್ಕೃಷ್ಠ ಮಾನವ ಸಂಪನ್ಮೂಲ ನಿರ್ಮಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಸಮಾಜ ಕಲ್ಯಾಣಾಧಿಕಾರಿ ಆರ್.ಬಿ.ಪಂಪಾಗೋಳ ಮಾತನಾಡಿ, ಆಧುನಿಕತೆಯ ಪ್ರಭಾವ ಮತ್ತು ಆಂಗ್ಲ ವ್ಯಾಮೋಹದ ಹೊಡೆತಕ್ಕೆ ಸಿಲುಕಿ ತನ್ನ ಗತವೈಭವ ಕಳೆದುಕೊಂಡ ಸರ್ಕಾರಿ ಶಾಲೆಗಳಿಗೆ ಮರುಜೀವ ಕೊಡಲು ಹಳೆ ವಿದ್ಯಾರ್ಥಿಗಳು ಮನಪೂರ್ವಕ ಕೈಜೋಡಿಸುವುದು ಸಧ್ಯ ಅಗತ್ಯ ಎಂದರು.
ನಿವೃತ್ತ ಉಪ ತಹಶಿಲ್ದಾರ ಡಿ.ಬಿ.ಬೇಲಾಳ,
ಚಿಂತಕ ಅರವಿಂದ ಕೊಪ್ಪ ಮಾತನಾಡಿದರು.
ವಿಶ್ರಾಂತ ವೈಧ್ಯಾಧಿಕಾರಿ ಡಾ. ಎಸ್.ವ್ಹಿ ಒಡ್ಡೋಡಗಿ, ವಲಯ ಸಂಪನ್ಮೂಲ ವ್ಯಕ್ತಿ ಅಮರೇಶ ಕಸಬೇಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಚಾಂದಬಾಷಾ ಮಾಳನೂರ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ರಶ್ಮಿ ಕೊಪ್ಪ, ಮೊಹನಂದ ಬಾಗಲಕೋಟ, ಬಿಲಾಲ ಗೊಳಸಂಗಿ, ಬಸವರಾಜ ಡಮನಾಳ ಸೇರಿದಂತೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು. ರೇಣುಕಾ ಚಿತ್ತವಾಡಗಿ, ಕುಮಾರಸ್ವಾಮಿ, ಮಹದೇವ ಹೊಳಿ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

