ದೇವರಹಿಪ್ಪರಗಿ: ಸಾಂಪ್ರದಾಯಿಕ ಛಟ್ಟಿ ಜಾತ್ರೆಯ ಅಂಗವಾಗಿ ರಾವುರಾಯನು ಪಲ್ಲಕ್ಕಿ ಉತ್ಸವದ ಮೂಲಕ ಮಲ್ಲಯ್ಯನ ದೇವಸ್ಥಾನ ಪ್ರವೇಶಿಸಿದನು.
ಪಟ್ಟಣದಲ್ಲಿ ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ನಂತರ ಜರುಗುವ ರಾವುತರಾಯನ ಪಲ್ಲಕ್ಕಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ಬೇಗನೆ ಆರಂಭಗೊಳ್ಳಬೇಕಾಗಿದ್ದ ಉತ್ಸವ ಕೆಲವು ಕಾರಣಗಳಿಂದ ವಿಳಂಬವಾಗಿ ಆರಂಭಗೊAಡಿತು. ಮಧ್ಯಾನ್ಹ ತಡವಾಗಿ ಮಲ್ಲಯ್ಯನ ದೇವಸ್ಥಾನ ತಲುಪಿದ ರಾವುತರಾಯನು ಪಲ್ಲಕ್ಕಿ ಉತ್ಸವ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳ ನಂತರ ದೇವಸ್ಥಾನದಲ್ಲಿ ಆಸೀನನಾದನು.
ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಷಷ್ಠಿಯವರೆಗೆ ಅಂದರೆ ಆರು ದಿನಗಳವರೆಗೆ ಇದ್ದು ನಂತರ ಮಂಗಳವಾರ ಮರಳಿ ತನ್ನ ಮೂಲದೇವಸ್ಥಾನಕ್ಕೆ ಮರಳುವನು. ಈ ಛಟ್ಟಿ ಜಾತ್ರೆಯ ಅಂಗವಾಗಿ ದಿ:೨೦ ಬುಧವಾರದವರೆಗೆ ಜಾನುವಾರಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಪ್ರತಿವರ್ಷದಂತೆ ನಡೆಯಲಿದ್ದು, ಈ ಬಾರಿ ವಿಜಯಪುರ ರಸ್ತೆಯಲಿರುವ ಗುರುಬಾಳಪ್ಪ ಯರಗಲ್ ಇವರ ಜಮೀನಿನಲ್ಲಿ ಜರುಗಲಿದೆ.
*ಕಾರಣಿಕರ ಹೇಳಿಕೆಗಳು:*
ಪ್ರತಿವರ್ಷವು ಛಟ್ಟಿ ಜಾತ್ರೆಯ ಸಂದರ್ಭದಲ್ಲಿ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಹೇಳಿಕೆಗಳನ್ನು ಹೇಳುವ ಪದ್ಧತಿಯಿದ್ದು, ಈ ವರ್ಷ ಅವರು ಹೇಳಿದಂತೆ, “ಬಿಳಿ ಕಾಳು ಮೇಲಾಯಿತು, ನಂತರ ಗೋಧಿ, ಹತ್ತಿ ಬೆನ್ನು ಹತ್ತಿದವು. ಯಾರು ನನ್ನಂತೆ (ದೇವರಂತೆ) ಇರುವುರೋ, ಅವರ ಪರ ನಾನಿರುವೆ. ಧರ್ಮ ಹಿಡಿದು ನಡೆದವರನ್ನು ಅಂಗೈಯಲ್ಲಿ ಲಿಂಗದಂತೆ ಕಾಪಾಡುವೆ. ನಿಮ್ಮ ನಿಮ್ಮ ನ್ಯಾಯ ತಂದು ನನ್ನ ಉಡೆಯಲ್ಲಿ ಹಾಕಬೇಡಿ, ಏಳು ಮಂದಿ ಅಕ್ಕ, ತಂಗಿಯರು ಅಗಸಿ ಬಾಗಿಲಲ್ಲಿ ಕುಳಿತಿದ್ದಾರೆ ಆದರೂ ಅದನ್ನು ಬಯಲು ಮಾಡಿ ತೋರಿಸುವೆ. ಯಾವುದೇ ಕಾರಣಕ್ಕೂ ಅವಸರ ಬೇಡ ನನ್ನ ಕುದುರೆ ಹತ್ತಿ ನಾನು ಬರುವೆ ಎದೆಗುಂದಬೇಡಿ ಎಂದು ನುಡಿಯಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

