Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 23, 2026

ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕೊಲ್ಹಾರದಲ್ಲಿ ಎಲ್ಲ ಆಡಳಿತ ಕಚೇರಿಗಳ ಆರಂಭಕ್ಕೆ ಆಗ್ರಹ
(ರಾಜ್ಯ ) ಜಿಲ್ಲೆ

ಕೊಲ್ಹಾರದಲ್ಲಿ ಎಲ್ಲ ಆಡಳಿತ ಕಚೇರಿಗಳ ಆರಂಭಕ್ಕೆ ಆಗ್ರಹ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೊಲ್ಹಾರ: ಸ್ಥಳೀಯ ಪಟ್ಟಣವನ್ನು ತಾಲೂಕು ಕೆಂದ್ರವನ್ನಾಗಿ ಮಾಡಿ ಸುಮಾರು ೧೦-೧೨ ವರ್ಷಗಳೇ ಕಳೆದರೂ ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದ್ದು ಈ ತಾರತಮ್ಯವನ್ನು ಹೋಗಲಾಡಿಸಿ ಪರಿಪೂರ್ಣ ತಾಲೂಕು ಕಚೇರಿಗಳನ್ನು ಹೊಂದಿದ ಕೊಲ್ಹಾರ ತಾಲೂಕು ಕೇಂದ್ರವಾಗಲು ಸಚಿವರಾದ ಶಿವಾನಂದ ಎಸ್ ಪಾಟೀಲ ವಿಶೇಷ ಕಾಳಜಿವಹಿಸಬೇಕೆಂದು ಹಿರೇಮಠದ ಮುರುಘೇಂಧ್ರ ಮಹಾಸ್ವಾಮೀಜಿ ಹಾಗೂ ಕೊಲ್ಹಾರ ತಾಲೂಕು ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ ಆಗ್ರಹಿಸಿದರು.
ಈ ಕುರಿತು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂವತ್ತು ಹಳ್ಳಿಗಳನ್ನು ಹಂಚಿಕೆ ಮಾಡಿ ಜನಸಂಖ್ಯೆ ಆಧಾರದ ಮೇಲೆ ಕೊಲ್ಹಾರ ಪಟ್ಟಣವನ್ನು ಹೋರಾಟ ಸಮೀತಿಯವರ ನಿರಂತರ ಹೋರಾಟದ ಫಲವಾಗಿ ಹಿಂದಿನ ಸರಕಾರಗಳು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದ್ದವು ಅದರಂತೆ ಕೆಲವೇ ಕೆಲವು ತಾಲೂಕಾ ಆಡಳಿತದ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು ರೈತರಿಗೆ ಸಾರ್ವಜನಿಕರಿಗೆ ಅವಶ್ಯಕವಾದ ತಾಲೂಕಾ ಆಡಳಿತದ ಕಚೇರಿಗಳು ಪೂರ್ಣಪ್ರಮಾಣದಲ್ಲಿ ಬರದೇ ಇರುವದರಿಂದ ಜನರು ಈಗಲು ಮೂಲ ತಾಲೂಕು ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆಯನ್ನು ತಪ್ಪಿಸಲು ಇದೇ ಕ್ಷೇತ್ರವನ್ನು ಪ್ರತಿನಿಧಿಸುವ ಜನಪ್ರತಿನಿಧಿ ಸಚಿವ ಶಿವಾನಂದ ಎಸ್ ಪಾಟೀಲರು ಮುಂದಾಗಬೇಕೆಂದರು.
ತಾಲೂಕಾ ಆಡಳಿತದ ಸರಕಾರಿ ಕಚೇರಿಗಳನ್ನು ಪ್ರಾರಂಭಿಸಲು ಮತ್ತು ಮೂಲ ಸೌಕರ್ಯಗಳನ್ನು ದೊರಕಿಸಿಕೊಳ್ಳಲು ಪುನರ್ವಸತಿ ಕೆಂದ್ರವಾದ ಕೊಲ್ಹಾರ ಪಟ್ಟಣದಲ್ಲಿ ಕಟ್ಟಡಗಳು ಮತ್ತು ಜಾಗದ ಕೊರತೆಯೇನು ಇಲ್ಲ ಆದರೂ ಕೂಡ ಮೀನಾಮೇಷ ಎಣಿಸುತ್ತಿರುವುದು ಇಲ್ಲಿನ ಜನರ ಆಶಾಭಾವನೆಗೆ ದ್ರೋಹಬಗೆದಂತಾಗುತ್ತದೆ. ಆದ್ದರಿಂದ ತಾಲೂಕಿಗೆ ಅವಶ್ಯಕವಾಗಿರುವ ಕಚೇರಿಗಳನ್ನು ಸಿಬ್ಬಂದಿ ಸಮೇತ ಪ್ರಾರಂಭಿಸಬೇಕು ಪಕ್ಕದ ಬಬಲೇಶ್ವರ ಮತಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಎಂ.ಬಿ.ಪಾಟೀಲರು ಬಬಲೇಶ್ವರ, ತಿಕೋಟಾ ತಾಲೂಕಿಗೆ ಉಪ ನೋಂದಣಿ ಕಚೇರಿ ಮಂಜೂರಾಗಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ಕೊಟ್ಟಿದ್ದು ಅವರಷ್ಟೇ ಪ್ರಭಾವಿಗಳಾದ ಶಿವಾನಂದ ಪಾಟೀಲರು ಪ್ರತಿನಿಧಿಸುವ ಬಸವನ ಬಾಗೇವಾಡಿ ಮತಕ್ಷೇತ್ರದ ಕೊಲ್ಹಾರ ಪಟ್ಟಣದಲ್ಲಿ ಉಪನೊಂದಣಿ ಕಚೇರಿ ಸೇರಿದಂತೆ ತಾಲೂಕು ಕಚೇರಿಗಳು ಪ್ರಾರಂಭವಾಗಲು ಆಮೆ ನಡಿಗೆಯತ್ತ ಸಾಗಿರುವದು ಏಕೆ ಎನ್ನುವದು ಜನರಲ್ಲಿ ಜಿಜ್ಞಾಸೆ ಮೂಡುತ್ತಿದೆ ಎಂದರು.
ಗ್ರೇಡ್-೧ ತಹಶೀಲ್ದಾರ ಕಚೇರಿ ಸೇರಿದಂತೆ ಮೂಲ ತಾಲೂಕು ಕೇಂದ್ರದಿಂದ ಹೊಸದಾಗಿ ಪ್ರಾರಂಭವಾದ ತಾಲೂಕು ಕೇಂದ್ರದಲ್ಲಿ ತಾಲೂಕು ಆಡಳಿತದ ಎಲ್ಲ ಇಲಾಖೆಗಳ ಪ್ರಮುಖ ಹುದ್ದೆಗಳು ಹಾಗೂ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅಸಾಧ್ಯವಾಗಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಹಿಂದೆ ರಾಜಕೀಯ ಕೈವಾಡ ಇರಬಹುದು ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಆದ್ದರಿಂದ ಕೊಲ್ಹಾರ ತಾಲೂಕು ವ್ಯಾಪ್ತಿಯ ಹಾಗೂ ಪಟ್ಟಣ ಪಂಚಾಯತಿಯ ಜನಪ್ರತಿನಿಧಿಗಳು ನಾಗರಿಕರು ಮಹಿಳೆಯರು ಒಗ್ಗಟ್ಟಾಗಿ ಪರಿಪೂರ್ಣ ತಾಲುಕು ಕೇಂದ್ರವಾಗುವ ಕುರಿತು ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರನ್ನು ಮತ್ತು ನಮ್ಮ ಭಾಗದ ಶಾಸಕರಾದ ಸಚಿವ ಶಿವಾನಂದ ಪಾಟೀಲರನ್ನು ಭೇಟಿಯಾಗಲು ಸಿದ್ದರಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲು ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸಾರ್ವಜನಿಕರು ಮುಂದಾಗಬೇಕು ಎಂದು ಹೇಳಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 23, 2026

ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ

ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 23, 2026
    In ದಿನಪತ್ರಿಕೆ
  • ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ
    In (ರಾಜ್ಯ ) ಜಿಲ್ಲೆ
  • ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಉದ್ಯೋಗದ ಬದುಕಿಗೆ ಬೇಕಿವೆ ಕೌಶಲ್ಯಗಳು
    In ವಿಶೇಷ ಲೇಖನ
  • ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿ ಅಗತ್ಯ :ಕನ್ನೇರಿ ಶ್ರೀ
    In (ರಾಜ್ಯ ) ಜಿಲ್ಲೆ
  • ಸಿದ್ದಾಪುರ ಪಿಕೆಪಿಎಸ್ ಚುನಾವಣೆಯಲ್ಲಿ ಸವದಿ ಗೆಲುವು
    In (ರಾಜ್ಯ ) ಜಿಲ್ಲೆ
  • ಹೊರ್ತಿ ರೇವಣಸಿದ್ದೇಶ್ವರ ದೇಗುಲಕ್ಕೆ ರಾಜ್ಯಪಾಲರ ಭೇಟಿ
    In (ರಾಜ್ಯ ) ಜಿಲ್ಲೆ
  • ಆದಿ ಶಂಕರಾಚಾರ್ಯರ ಜಯಂತಿ ಭಕ್ತಿಭಾವದಿಂದ ಆಚರಣೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.