ದೇವರಹಿಪ್ಪರಗಿ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ದಾನಮ್ಮದೇವಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಲಾಯಿತು.
ಪಟ್ಟಣದಲ್ಲಿ ದಾನಮ್ಮನ ಕಳ್ಳಿ ಎಂದೇ ಕರೆಯಲ್ಪಡುವ ದಾನಮ್ಮದೇವಿಯ ನೂತನ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆ ದ್ವಿತೀಯ ಕಾರ್ತಿಕೋತ್ಸವದ ಅಂಗವಾಗಿ ಸ್ಥಳೀಯ ಸದಯ್ಯನಮಠದ ವೀರಗಂಗಾಧರ ಶ್ರೀಗಳ ನೇತೃತ್ವದಲ್ಲಿ ಶ್ರೀಶೈಲ ಸ್ಥಾವರಮಠ ದಂಪತಿಗಳು ಅಭಿಷೇಕ ನೆರವೇರಿಸಿದರು. ನಂತರ ೨೧೧ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯ ನೆರವೇರಿಸಲಾಯಿತು.
ನಂತರ ಮಹಾಪ್ರಸಾದ ವಿತರಿಸಲಾಯಿತು. ಸಾಯಂಕಾಲ ದೇವಾಲಯದ ಆವರಣದಾದ್ಯಂತ ನೆರೆದ ಭಕ್ತರು ದೀಪ ಬೆಳಗಿಸಿ ಭಕ್ತಿಭಾವದೊಂದಿಗೆ ಕಾರ್ತಿಕೋತ್ಸವ ಆಚರಿಸಿದರು.
ಕಾರ್ತಿಕೋತ್ಸವ ಸಮೀತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರಿ, ಉಪಾಧ್ಯಕ್ಷ ಶಿವಾನಂದ ಅತನೂರ, ಆನಂದ ಜಡಿಮಠ, ಅಶೋಕ ನಾಯ್ಕೋಡಿ, ಸದಯ್ಯ ಸ್ಥಾವರಮಠ, ಪರಮಾನಂದ ಹಳ್ಳಿ, ರಮೇಶ ಮಶಾನವರ, ಬಸವರಾಜ ಅತನೂರ, ರಾಜು ಈಳಗೇರ, ಲಕ್ಷ್ಮಣ ಬಿರಾದಾರ, ರವಿ ಮಣೂರ, ಸುರೇಶ ಕೊಣ್ಣೂರ ಸೇರಿದಂತೆ ಮಹಿಳೆಯರು, ಮಕ್ಕಳು, ಸ್ಥಳೀಯ ವ್ಯಾಪಾರಸ್ಥರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

