ಆರೋಗ್ಯ ಕೇಂದ್ರದಲ್ಲಿ ಡಾ.ಶ್ರೀಶೈಲ ಹುಕ್ಕೇರಿ ಮೇಲಿನ ಹಲ್ಲೆಗೆ ವೈದ್ಯಾಧಿಕಾರಿಗಳ ಸಂಘ ಖಂಡನೆ
ವಿಜಯಪುರ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಶ್ರೀಶೈಲ ಹುಕ್ಕೇರಿ ಆಡಳಿತ ವೈದ್ಯಾಧಿಕಾರಿಯ ಮೇಲೆ ಸಾರ್ವಜನಿಕರಿಂದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘ (ರಿ) ಜಿಲ್ಲಾ ಶಾಖೆ, ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿ.ಪಂ.ವಿಜಯಪುರ ಇವರಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿಯನ್ನು ಸಲ್ಲಿಸಿ ವೈದ್ಯಾಧಿಕಾರಿಯ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಸಾಂಕೇತಿಕವಾಗಿ ಧರಣಿ ಮಾಡಲಾಯಿತು.
ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮನವಿ ಸ್ವೀಕರಿ ನಮ್ಮ ಸಂಘಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಇನ್ನು ಮುಂದೆ ವೈದ್ಯರ ಮೇಲೆ ಅಥವಾ ಸಿಬ್ಬಂದಿಯ ಮೇಲೆ ಹಲ್ಲೆಯಾದರೆ ಆಸ್ಪತ್ರೆಯನ್ನು ಬಂದ್ ಮಾಡಿ ಧರಣಿ ನಡೆಸುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಡಾ.ಕೇ.ಡಿ. ಗುಂಡಬಾವಡಿ, ಡಾ. ಎಸ್.ಎಲ್. ಲಕ್ಕಣ್ಣವರ, ಡಾ. ಶಶಿಕಾಂತ ಬಾಗೇವಾಡಿ, ಅಧ್ಯಕ್ಷರಾದ ಡಾ.ಸಿ.ಎಮ್.ತಾಳಿಕೋಟಿ ಪ್ರಾಥಮಿಕ ಆರೋಗ್ಯ ಕೇಂದ್ರ ರೋಣಿಹಾಳ, ಕಾರ್ಯದರ್ಶಿ ಡಾ.ಬಿ.ಎಸ್. ಕಮದಾಳ ಪ್ರಾ.ಆ.ಕೇಂ.ಉಕ್ಕಲಿ, ಜಂಟಿ ಕಾರ್ಯದರ್ಶಿ ಡಾ.ವಿಜಯಕುಮಾರ ಕಟಕಧೋಂಡ, ಉಪಾಧ್ಯಕ್ಷರಾದ ಡಾ.ಪರಶುರಾಮ ದೇವಮಾನೆ, ಖಜಾಂಚಿ ಸಂತೋಷ ಶೆಟ್ಟಿ, ಮಹಿಳಾ ವೈದ್ಯಾಧಿಕಾರಿಗಳ ಪ್ರತಿನಿಧಿಗಳಾದ ಡಾ.ನಂದಿನಿ ಡಿ. ಡಾ.ಶೈಲಜಾ ಶಿವಶರಣ, ಅಂತರಿಕ ಲೆಕ್ಕ ಪರಿಶೋಧಕರಾದ ಡಾ.ಸಾಬೀರ ಪಟೇಲ, ಡಾ. ಅನೀಲ ಶೇಗುಣಸಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಡಾ.ಪ್ರಶಾಂತ ಧುಮಗೊಂಡ, ಡಾ.ಕೃಷ್ಣಕುಮಾರ ಜಾಧವ ಇನ್ನಿತರರು ಉಪಸ್ಥಿತರಿದ್ದರು.

