ಬಸವನಬಾಗೇವಾಡಿ: ಪಟ್ಟಣದ ನ್ಯಾಯವಾದಿಗಳು ನ್ಯಾಯವಾದಿಗಳ ಮೇಲೆ ಆಗುತ್ತಿರುವ ಹಲ್ಲೆ,ಹತ್ಯೆ ಮತ್ತು ದೌರ್ಜನ್ಯಗಳಂತಹ ಕೃತ್ಯಗಳನ್ನು ಖಂಡಿಸಿ ಮತ್ತು ಸರ್ಕಾರ ಕೂಡಲೇ ನ್ಯಾಯವಾದಿಗಳ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿ ಮಂಗಳವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ನ್ಯಾಯವಾದಿಗಳ ಸಂಘದಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಸಲ್ಲಿಸಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ನ್ಯಾಯಾಲಯದಿಂದ ಮುದ್ದೇಬಿಹಾಳ ರಸ್ತೆಯಲ್ಲಿರುವ ಮಿನಿವಿಧಾನಸೌಧದವರೆಗೆ ನ್ಯಾಯವಾದಿಗಳು ನ್ಯಾಯಾಲಯ ಕಲಾಪದಿಂದ ಸ್ವಯಂಪ್ರೇರಿತವಾಗಿ ದೂರ ಉಳಿದು ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಎಸ್.ಗುರಡ್ಡಿ, ಸಂಘದ ಕಾರ್ಯದರ್ಶಿ ರವಿ ರಾಠೋಡ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಸ್.ಬಿದರಕುಂದಿ, ನ್ಯಾಯವಾದಿಗಳಾದ ಪಿ.ಎಂ.ಕಂದಗಲ್ಲ, ಮಂಜುನಾಥ ಬಿರಾದಾರ, ಆರ್.ಎನ್.ಮ್ಯಾಗೇರಿ, ಶಿಲ್ಪಾ ಮುಚಖಂಡಿ, ಕುಮಾರ ಚವ್ಹಾಣ, ಎಂ.ಪಿ.ಪತ್ತಾರ, ಎಂ.ಬಿ.ಜಂಬಲದಿನ್ನಿ, ವೈ.ಎನ್.ಲೆಂಕನ್ನವರ, ಆರ್.ಬಿ.ಗಣಕುಮಾರ, ಎಂ.ಬಿ.ಮೇಟಿ, ಐ.ಎ.ಪರಮಗೊಂಡ, ವೈ.ಎರ್.ಬುದ್ನಿ, ಎಸ್.ಬಿ.ಪಾಟೀಲ, ಸಮೀರ ಕೊರಬು, ನದಾಫ ಎ,.ಎನ್.ಎಂ.ಸಜ್ಜನ, ಲಕ್ಷ್ಮಣ ಉಪ್ಪಾರ, ಈರಣ್ಣ ವಡವಡಗಿ, ಸುರೇಶ ಕೋಲಕಾರ, ಸುನೀಲ ರಾಠೋಡ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

