ಸಿಂದಗಿ: ಸಮಾಜದ ಪ್ರತಿಯೋಬ್ಬ ವ್ಯಕ್ತಿಗೂ ಸಂಸ್ಕೃತಭಾಷೆ ಪರಿಚಯವಾಗಬೇಕು. ಸಂಸ್ಕೃತದ ಬಗ್ಗೆ ಆಸಕ್ತಿ ಮೂಡಬೇಕು. ಇದು ನಮ್ಮ ದೇಶದ ಭಾಷೆ ಎಂದು ಸಿಂದಗಿಯ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಹ ನಿರ್ದೇಶಕ ಅಶೋಕ ವಾರದ ಹೇಳಿದರು.
ಪಟ್ಟಣದ ಶ್ರೀ ಸಾತವಿರೇಶ್ವರ ಸಭಾಭವನದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಶ್ರೀ ಪದ್ಮರಾಜ ಸಂಸ್ಕೃತ ವೇದ ಪಾಠಶಾಲೆ ಇವುಗಳ ಸಹಯೋಗದಲ್ಲಿ ಡಿ.೫-ಡಿ.೧೪ರವರೆಗೆ ಆಯೋಜಿಸಿರುವ ಸಂಸ್ಕೃತ ಪಾಠಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿರುವ ಪುನಶ್ಚೇತನ ಶಿಬಿರದ ಅಂಗವಾಗಿ ಸಂಸ್ಕೃತ ಭಾಷೆಯ ಅಭಿವೃದ್ದಿ ಹಾಗೂ ಪ್ರಚಾರದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ಡಾ. ಮಲ್ಲನಗೌಡ ಎಸ್. ಮಾತನಾಡಿ, ಸಂಸ್ಕೃತ ಭಾಷೆಯ ಬಳಕೆಯಿಂದ ನಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ. ಸಂಸ್ಕಾರ ಬರುತ್ತದೆ. ಇಂದಿನ ದಿನಮಾನಗಳಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆತು ಪಾಶ್ವಾತ್ಯ ಸಂಸ್ಕೃತಿ ಕಡೆಗೆ ಯುವ ಜನಾಂಗ ಗಮನ ಹರಿಸುತ್ತಿದೆ, ಆದರೆ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲವಕ್ಕೂ ನಮ್ಮ ಹಿಂದಿನ ಪರಂಪರೆಯೇ ಕಾರಣವಾಗಿದೆ. ಸಂಸ್ಕೃತವನ್ನು ಕಲಿತು ಸಂಸ್ಕೃತದಲ್ಲಿಯೇ ಮಾತನಾಡುವುದರ ಮೂಲಕ ಪೋಷಣೆ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಯೋಜನ ಸಹಾಯಕರು ವಾಲ್ಮಿಕಿರಾವ್ ಮಾತನಾಡಿದರು.
ಸಂಸ್ಕೃತ ಭಾಷಾ ಅಭಿವೃದ್ದಿ ಮತ್ತು ಪ್ರಚಾರದ ಜಾಥಾವು ಶ್ರೀ ಸಾತವೀರೇಶ್ವರ ಸಭಾಭವನದಿಂದ ಟಿಪ್ಪು ಸುಲ್ತಾನ ವೃತ್ತಕ್ಕೆ ಸಾಗಿ ಅಲ್ಲಿಂದ ಡಾ.ತೋಂಟದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ ಸಾಗಿ ಶ್ರೀ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಾರಂಗಮಠ ತಲುಪಿತು.
ಜಾಥಾದಲ್ಲಿ ಮಲ್ಲಣ್ಣ, ಜಗದೀಶ ಕರೆಪ್ಪನವರ, ಬಿ.ಬಿ.ರ‍್ಯರ್, ಚನ್ನಬಸವರಾಜ ಕತ್ತಿ, ವಿರೇಶ ಸ್ತಾವರಮಠ ಮತ್ತು ಬೆಳಗಾವಿ ಧಾರವಾಡ, ಮೈಸೂರ ವಲಯಗಳ ಸುಮಾರು ೧೫ ಜಿಲ್ಲೆಗಳ ಅನುದಾನಿತ ಮತ್ತು ಅನುದಾನರಹಿತ ಸಂಸ್ಕೃತ ಪಾಠಶಾಲೆಯ ಸುಮಾರು ೨೫೦ ಕ್ಕೂ ಶಿಕ್ಷಕರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

