Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ

ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ

ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವೃಕ್ಷತ್ಥಾನ್ ರನ್: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗಿ
(ರಾಜ್ಯ ) ಜಿಲ್ಲೆ

ವೃಕ್ಷತ್ಥಾನ್ ರನ್: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ನಾನಾ ಪದಕಗಳನ್ನು ಪಡೆದಿರುವ ಖ್ಯಾತನಾಮರು ನಗರದಲ್ಲಿ ಡಿಸೆಂಬರ್ 24 ರಂದು ನಡೆಯುವ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
ಈ ಸಲ ದೇಶದ ನಾನಾ ಭಾಗಗಳಿಂದ ಕ್ರೀಡಾಪಟುಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.  ಕರ್ನಾಟಕ ಮಾತ್ರವಲ್ಲ ದೇಶ, ವಿದೇಶಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡ ಹೆಸರಾಂತ ಮ್ಯಾರಾಥಾನ್ ಪಟುಗಳು ಕೂಡ ಪಾಲ್ಗೊಳ್ಳುತ್ತಿದ್ದಾರೆ.
ಯವಕರು, ಮಧ್ಯ ವಯಸ್ಕರು, ಹಿರಿಯರು, ಹಿರಿಯ ಮಹಿಳೆಯರೂ ಆನಲೈನ್ ಮೂಲಕ ಹೆಸರು ನೋಂದಾಯಿಸಿ ಇತರರೂ ಪಾಲ್ಗೊಳ್ಳಲು ಸ್ಪೂರ್ತಿ ನೀಡಿದ್ದಾರೆ.  72 ವರ್ಷದ ಹಿರಿಯ ಮಹಿಳೆ, ಸಾಫ್ಟವೇರ್ ಎಂಜಿನಿಯರ್, ವೃತ್ತಿಪರ ಮ್ಯಾರಾಥಾನ್ ಓಟಗಾರರು ಸೇರಿದಂತೆ ಸಾವಿರಾರು ಜನರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ.
ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳಲಿರುವ ಖ್ಯಾತನಾಮರ ಪರಿಚಯ ಇಲ್ಲಿದೆ.
*1.ಕಟಪಾಡಿ ಸುಲತಾ ಕಾಮತ*
ಉಡುಪಿಯ ಕಾಪುವಿನ ಹಿರಿಯ 72 ವರ್ಷ ವಯಸ್ಸಿನ ಹಿರಿಯ ಮಹಿಳೆ ಕಟಪಾಡಿ ಸುಲತಾ ಕಾಮತ ಬರಿಗಾಲ ಓಟಗಾರ್ತಿ ಎಂದೇ ಖ್ಯಾತಿ ಪಡೆದಿದ್ದಾರೆ.  ಬರಿಗಾಲಿನಲ್ಲಿ ಓಡುವ ಇವರು ಈಗಾಗಲೇ ದೇಶ ವಿದೇಶಗಳ ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡು ಅನೇಕ ಪದಕ ಜಯಿಸಿದ್ದು, ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೋಳ್ಳಲು ತಮ್ಮ ಹೆಸರು ನೋಂದಾಯಿಸಿದ್ದಾರೆ. 
*2.ಪ್ರಶಾಂತ ಹಿಪ್ಪರಗಿ*
ಪ್ರಶಾಂತ ಹಿಪ್ಪರಗಿ ಟ್ರಯಥ್ಲಾನ್ ಪಟುವಾಗಿದ್ದು, ಬ್ರಾಝಿಲ್ ನಲ್ಲಿ ನಡೆಯಲಿರುವ ಡಿಇಸಿಎ ಐರಾನಮನ್ 2023 ರನ್ ನಲ್ಲಿ ಪಾಲ್ಗೋಳ್ಳಲು ಅರ್ಹತೆ ಪಡೆದಿರುವ ಭಾರತದ ಏಕೈಕ ಓಟಗಾರರಾಗಿದ್ದಾರೆ. ಟ್ರಯಥ್ಲಾನ್ ಪಟುವಾಗಿರುವ ಅವರು ಈ ಬ್ರಾಝಿಲ್ ಡೆಕಾ ಐರಾನಮನ್ ನ ಮೂರು ಬಗೆಯ ಸ್ಪರ್ಧೆಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಇವರು 11 ದಿನಗಳಲ್ಲಿ 38 ಕಿ. ಮೀ. ಈಜು, 1800 ಕಿ. ಮೀ. ಸೈಕ್ಲಿಂಗ್ ಮತ್ತು 422 ಕಿ. ಮಿ. ಓಟವನ್ನು ಪೂರ್ಣಗೊಳಿಸುವ ಮೂಲಕ ಅವರು ಈಗಾಗಲೇ 19 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ನ್ನು ಪೂರ್ಣಗೊಳಿಸಿದ್ದಾರೆ.  ಇನ್ನು ಳಿದ ಸ್ಪರ್ದೆಗಾಗಿ ಅವರು ಬ್ರೆಝಿಲ್ ಗೆ ತೆರಳುತ್ತಿದ್ದು, ಡಿಸೆಂಬರ್ 24 ರಂದು ವಿಜಯಪುರಕ್ಕೆ ಆಗಮಿಸಿ ವೃಕ್ಷತ್ಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
*3.ಪ್ರೇರಣಾ ಶ್ರವಣ ಕುಮಾರ*
16 ವರ್ಷದ ಪ್ರೇರಣಾ ಅಂತಾರಾಷ್ಟ್ರೀಯ ಟ್ರಯಥ್ಲೀಟ್ ಆಗಿದ್ದು, 2022ರಲ್ಲಿ ಹಾಂಗಕಾಂಗ್ ನಲ್ಲಿ ನಡೆದ ಎಷಿಯಾ ಯುಥ್ ಟ್ರೈಯಥ್ಲಾನ್ ಚಾಂಪಿಯನಶಿಪ್ ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.  ಗುಜರಾತಿನಲ್ಲಿ 2022ರಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಟದಲ್ಲಿ ಟ್ರಯಥ್ಲಾನ್ ನಲ್ಲಿ ಪಾಲ್ಗೊಂಡಿದ್ದಾರೆ.  ರಾಷ್ಟ್ರೀಯ ಸೈಕ್ಲಿಂಗ್, 3 ಕಿ. ಮೀ, 5 ಕಿ. ಮೀ, 10 ಕಿ. ಮೀ ಓಟದಲ್ಲಿ ಪಾಲ್ಗೋಂಡು ಹೆಸರು ಮಾಡಿದ್ದಾರೆ. 
*4.ರಾಜಿಂದರ ಕೌರ*
53 ವರ್ಷದ ರಾಜಿಂದರ ಕೌರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಮತ್ತು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಬೆಳ್ಳಿಯ ಪದಕ ಪಡೆದ ಸಾಧಕಿಯಾಗಿದ್ದಾರೆ.  ಯುಎಸ್ ನ ಕ್ಲೆವಲ್ಯಾಂಡ್ ನಲ್ಲಿ ನಡೆದ ಟ್ರಯಥ್ಲಾನ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
*5.ಶೋಭಾ ನರೇಂದ್ರ ಕುಮಾರ ನಾಗಶೆಟ್ಟಿ*
ಸಿ.ಆರ್.ಡಿ.ಎಸ್. ಫೌಂಡೇಶನ್ ಸಂಸ್ಥಾಪಕರು ಹಾಗೂ ನಿರ್ದೇಶಕರಾಗಿರುವ ಶೋಭಾ ಮತ್ತು ನರೇಂದ್ರಕುಮಾರ ನಾಗಶೆಟ್ಟಿ ಅವರೂ ಕೂಡ ಈ ಮ್ಯಾರಾಥಾನ್ ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ. ಇವರು, ಕಳೆದ 25 ವರ್ಷಗಳಿಂದ ಮ್ಯಾರಾಥಾನ್, ಅಲ್ಟ್ರಾ ಮ್ಯಾರಾಥಾನ್ ಸೇರಿದಂತೆ ನಾನಾ ಸ್ಪರ್ಧೆಗಳಲ್ಲಿ ಪಾಲ್ಗೋಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ, ತಮ್ಮ ಫೌಂಡೇಶನ್ ಮೂಲಕ ಕರ್ನಾಟಕದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. 
*6.ವೆಂಟಕೇಶ ಅಡಿಗ**
ವೃತ್ತಿಯಂದ ಎಂಜಿನಿಯರ್ ಆಗಿರುವ ವೆಂಕಟೇಶ ಅಡಿಗ ಫಿಟ್ನೆಸ್ ಗೆ ಹೆಚ್ಚಿನ ಒತ್ತು ನೀಡುತ್ತಿರುವ ಮ್ಯಾರಾಥಾನ್ ಓಟಗಾರರಾಗಿದ್ದು, 5 ಕಿ. ಮೀ. ಯಿಂದ 50 ಕಿ. ಮೀ. ವರಗೆ ದೇಶಾದ್ಯಂತ ನಡೆದ ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದಾರೆ.  ಬೋಸ್ಟನ್ ನಲ್ಲಿ ನಡೆದ 3x ಮ್ಯಾರಾಥಾನ್ ಗೆ ಅರ್ಹತೆ ಪಡೆದಿರುವ ಅವರು, ಸ್ಪೋರ್ಟ್ಸ್ ಕೌನ್ಸಿಲ್ ಪ್ರಾರಂಭಿಸಿ ಓಟಗಾರರಿಗೆ ತರಬೇತಿ ನೀಡುತ್ತಿದ್ದಾರೆ. ಅವರೂ ಕೂಡ ಹೆಸರು ನೋಂದಾಯಿಸಿದ್ದು, ಈ ಬಾರಿ ವಿಜಯಪುರ ಮ್ಯಾರಾಥಾನ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 
*7.ಸಮೀರ ಜೋಶಿ*
ಅಲ್ಟ್ರಾ ಮ್ಯಾರಾಥಾನ್ ಓಟಗಾರ ಸಮೀರ ಜೋಶಿ ಕೂಡ ವಿಜಯಪುರ ವೃಕ್ಷತ್ಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೋಳ್ಳುತ್ತಿದ್ದಾರೆ.  ಬರ್ಲಿನ್ ಮತ್ತು ಚಿಕ್ಯಾಗೋದಲ್ಲಿ ನಡೆದ 2ನೇ ಹಿರಿಯರ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡು ಗಮನ ಸೆಳೆದಿದ್ದಾರೆ. 2014ರಲ್ಲಿ ಮ್ಯಾರಾಥಾನ್ ಮತ್ತು ಅಲ್ಟ್ರಾ ಮ್ಯಾರಾಥಾನ್, 2020ರಲ್ಲಿ ದೆಹಲಿ ಮ್ಯಾರಾಥಾನ್, ಇದೇ ವರ್ಷ ಬೆಂಗಳೂರಿನಲ್ಲಿ ನಡೆದ 50 ಕಿ. ಮೀ. ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡಿರುವ ಅವರು, ನಾನಾ ವಯೋಮಾನಗಳ ವಿಭಾಗದಲ್ಲಿ 10 ಕಿ. ಮೀ. ಮ್ಯಾರಾಥಾನ್ ನಲ್ಲಿಯೂ ಪಾಲ್ಗೋಂಡು ಗಮನ ಸೆಳೆದಿದ್ದಾರೆ.  ಇವರು ಕ್ರೀಡಾ ವಿಭಾಗದ ನಾನಾ ಸಂಸ್ಥೆಗಳಿಂದ ಮಾನ್ಯತೆ ಪಡೆದ ಕೋಚ್ ಕೂಡ ಆಗಿದ್ದಾರೆ. 
*8.ಅನಂತರಾಮ*
ಬೆಂಗಳೂರಿನ ಬಿ.ಎನ್ಐ ನಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ 64 ವರ್ಷದ ಅನಂತರಾಮ ಕೂಡ ಈ ಓಟದಲ್ಲಿ ಪಾಲ್ಗೋಳ್ಳುತ್ತಿರುವುದು ಗಮನಾರ್ಹವಾಗಿದೆ.  ಅನಂತ ಮ್ಯಾರಾಥಾನ್ ಓಟಗಾರರಾಗಿದ್ದು, ಸಿಟಿ ಆಫ್ ಮ್ಯಾರಾಥಾನ್ ಖ್ಯಾತಿಯ ಅಥೆನ್ಸ್ ನಲ್ಲಿಯೂ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡು ಹೆಸರು ಮಾಡಿದ್ದಾರೆ.  10 ಕಿ. ಮೀ., 54.1 ಕಿ. ಮೀ., 21 ಕಿ. ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.  ಅಲ್ಲದೆ, ಇತ್ತೀಚೆಗೆ ನಡೆದ ಲಧಾಕ್ ಮ್ಯಾರಾಥನ್ ನಲ್ಲಿ ಭಾಗವಹಿಸಿದ್ದಾರೆ. 
  *9.ಹರಿನಾಥ*
ಬೆಂಗಳೂರಿನ ರನ್ನಿಂಗ್ ಕ್ಲಬ್ ರಾಯಭಾರಿಯಾಗಿರುವ ಹರಿನಾಥ ಕೂಡ ವೃಕ್ಷತ್ಥಾನ್ ಹೆರಿಟೇಜ್ ರನ್- 2023ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ.  ದೇಶಾದ್ಯಂತ ನಾನಾ ಭಾಗಗಳಲ್ಲಿ ನಡೆದ ಮ್ಯಾರಾಥಾನ್, ಅಲ್ಟ್ರಾ ಮ್ಯಾರಾಥಾನ್ ಗಳನ್ನು ಓಟಗಾರ ಎಂದೇ ಹೆಸರು ಪಡೆದಿದ್ದಾರೆ.  ಕಳೆದ ಡಿಸೆಂಬರ್ 9 ಮತ್ತು 9 ರಂದು ಬೆಂಗಳೂರಿನಿಂದ ಶ್ರವಣ ಬೆಳಗೋಳವರೆಗೆ ಸುಮಾರು 150 ಕಿ. ಮೀ. ಓಡಿ ಗಮನ ಸೆಳೆದಿದ್ದಾರೆ. 
ಇವರಷ್ಟೇ ಅಲ್ಲ, ಇನ್ನೂ ಅನೇಕ ಹೆಸರಾಂತ ಓಟಗಾರರು ಪಾಲ್ಗೋಳ್ಳುತ್ತಿದ್ದಾರೆ.  ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆನಲೈನ್ ಮೂಲಕ *ttps://reg.myraceindia.com/MRTS/VHR2023* ತಮ್ಮ ಹೆಸರುಗಳನ್ನು ಡಿಸೆಂಬರ್ 13ರ ರೊಳಗೆ ನೋಂದಾಯಿಸಬಹುದಾಗಿದೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ

ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ

ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರವೂ ಮುಖ್ಯ :ಗುಂದಗಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯ ಬಜೆಟ್: ರಾಷ್ಟ್ರೀಯ ಮೀನುಗಾರರ ಸಂಘ’ ಸ್ವಾಗತ
    In (ರಾಜ್ಯ ) ಜಿಲ್ಲೆ
  • ಎತ್ತರ ನಿಯಂತ್ರಣ ಕಂಬ ಕುಸಿತ: ತಪ್ಪಿದ ಭಾರಿ ಅನಾಹುತ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿಗೆ ಡಬಲ್ ಗ್ಯಾರಂಟಿ ಬಜೆಟ್ :ಡಾ.ಹಾದಿಮನಿ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರ ಪಾತ್ರವೂ ಮುಖ್ಯ :ಗುಂದಗಿ
    In (ರಾಜ್ಯ ) ಜಿಲ್ಲೆ
  • ಕೇಂದ್ರದಿಂದ ಅಸಹಕಾರವಿದ್ದರೂ ವಿತ್ತೀಯ ಶಿಸ್ತು ಪಾಲನೆ :ಸಿಎಂ
    In (ರಾಜ್ಯ ) ಜಿಲ್ಲೆ
  • ವಿಕಲಚೇತನ ಹಾಗೂ ಗರ್ಭಿಣಿಯರಿಗೆ ಜನಗಣತಿಯಿಂದ ವಿನಾಯಿತಿ ನೀಡಿ
    In (ರಾಜ್ಯ ) ಜಿಲ್ಲೆ
  • ಕರುನಾಡು ಜನತೆಗೆ ವರವಾದ ಪಂಚ ಗ್ಯಾರಂಟಿ ಯೋಜನೆಗಳು
    In ವಿಶೇಷ ಲೇಖನ
  • ದಿವ್ಯಾಂಗರ ವಾಲಿಬಾಲ್ ನಲ್ಲಿ ಮಿಂಚಿದ ಯಮನಪ್ಪ
    In (ರಾಜ್ಯ ) ಜಿಲ್ಲೆ
  • ಮಕ್ಕಳೆ ಮೊಬೈಲ್‌ ಬಿಟ್ಟು ಪುಸ್ತಕ ಹಿಡಿಯಿರಿ :ಮಲ್ಲಿಬೊಮ್ಮ ಶ್ರೀ
    In (ರಾಜ್ಯ ) ಜಿಲ್ಲೆ
  • ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣದ ಬಜೆಟ್
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.