ಮಕ್ಕಳ ಸಾಹಿತಿ ಪ. ಗು.ಸಿದ್ದಾಪುರ ಅವರಿಗೆ ಸನ್ಮಾನಿಸಿದ ಕೆಪಿಸಿಸಿ ಪ್ರಚಾರ ಸಮೀತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಮತ
ವಿಜಯಪುರ: ನಾಡಿನ ಹಿರಿಯ ಮಕ್ಕಳ ಸಾಹಿತಿ, ಚಿಂತಕ, ಆದರ್ಶ ಶಿಕ್ಷಕ ಪ. ಗು.ಸಿದ್ದಾಪುರ ಅವರನ್ನು ಕೆಪಿಸಿಸಿ ಪ್ರಚಾರ ಸಮೀತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅವರು ಮುಳವಾಡ ಗ್ರಾಮದ ಅವರ ಸ್ವಗ್ರಹದಲ್ಲಿ ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ ಬಬಲೇಶ್ವರ ಅವರು, ಪ.ಗು.ಸಿದ್ದಾಪೂರ ಅವರಿಗೆ ಬಹಳ ಹಿಂದೆಯೇ ದೊರೆಯಬೇಕಿದ್ದ ರಾಜೋತ್ಸವ ಪ್ರಶಸ್ತಿ ತಡವಾಗಿಯಾದರೂ ಅವರ ಮುಡಿಗೇರಿರುವುದು ಅತ್ಯಂತ ಸಂತೋಷದ ಸಂಗತಿ. ಶ್ರೇಷ್ಠ ಸಾಹಿತಿಗೆ ದೊರೆತ ಶ್ರೇಷ್ಠ ಗೌರವ ಇದಾಗಿದೆ. ಸಿದ್ದಾಪುರ ಗುರುಗಳು ಪ್ರಶಸ್ತಿಯಿಂದ ದೊಡ್ಡವರಾದವರಲ್ಲ. ತಮ್ಮ ಸಾತ್ವಿಕ ಚಿಂತನೆಗಳು, ಆದರ್ಶ ಜೀವನದ ಮೂಲಕ ನಮ್ಮೆಲ್ಲರಿಗೂ ಮಾದರಿಯಾದವರು. ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪ್ರಶಸ್ತಿಯ ಗೌರವವನ್ನು ಹೆಚ್ಚು ಮಾಡಿದೆ ಎನ್ನುವುದು ನನ್ನ ಭಾವನೆ. ಅರ್ಹರಿಗೆ ಪ್ರಶಸ್ತಿ ದೊರೆತಾಗ ಆ ಪ್ರಶಸ್ತಿಯ ಮೌಲ್ಯ ಆ ವ್ಯಕ್ತಿಯ ವ್ಯಕ್ತಿತ್ವದಿಂದಾಗಿ ಹೆಚ್ಚಾಗುತ್ತದೆ. ಅಂತಹ ಶ್ರೇಷ್ಠ ವ್ಯಕ್ತಿತ್ವದ ಪ. ಗು ಸಿದ್ದಾಪುರ ಸರ್ ಶತಾಯುಷಿಗಳಾಗಲಿ, ಕನ್ನಡ ಸಾರಸ್ವತ ಲೋಕಕ್ಕೆ ಇನ್ನು ಉತ್ಕೃಷ್ಟ ಸಾಹಿತ್ಯ ಕೃತಿಗಳು ದೊರೆಯಲಿ ಎನ್ನುವುದು ನಮ್ಮೆಲ್ಲರ ಸದಾಶಯವಾಗಿದೆ ಎಂದು ಹೇಲಿದರು.
ಈ ವೇಳೆ ಸಾಹಿತಿ, ಚಿಂತಕ ಡಾ. ಮಹಾಂತೇಶ್ ಬಿರಾದಾರ, ಹೈನೋದ್ದ್ಯಮಿ ಸೋಮನಾಥ ಕಳ್ಳಿಮನಿ, ಹಿರಿಯರಾದ ಮಲ್ಲಯ್ಯ ಹಿರೇಮಠ ಉಪಸ್ಥಿತರಿದ್ದರು.

