ವಿಜಯಪುರ: ವಿವಿಧ ಗ್ರಾಮ ಪಂಚಾಯತಗಳ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಗ್ರಾಮ ಪಂಚಾಯತ ಸದಸ್ಯರ ಮಹಾ ಒಕ್ಕೂಟದಿಂದ ಮುಖ್ಯ ಕಾರ್ಯನಿರ್ವಾಹಕ ರಾಹುಲ ಸಿಂದೆ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಮ್.ಎಚ್. ಪಠಾಣ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಗಳ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಅಭಿವೃದ್ಧಿ ಅಧಿಕಾರಿಗಳ ಬರಗಾಲ, ಕಾಮಗಾರಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಸಲುವಾಗಿ ಸಮನ್ವಯ ಸಭೆ ಕರೆಯಬೇಕು. ಪ್ರತಿ ಪಂಚಾಯತಿಗೆ ಒಬ್ಬರಂತೆ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಬೇಕು. (ಸದ್ಯ ಒಬ್ಬರೆ ಎರಡು ಮೂರ ಪಂಚಾಯತಿಗೆ ಇರುವವರು), ಅಭಿವೃದ್ಧಿಯಲ್ಲಿ ಹಿಂದುಳಿದ ಗ್ರಾಮ ಪಂಚಾಯತಗಳಿಗೆ ೧೫ ನೇ ಹಣಕಾಸ, ಕ್ರಿಯಾಯೋಜನೆ ಹಾಗೂ ಕಾಮಗಾರಿ, ನರೇಗಾ ಕ್ರಿಯಾ ಯೋಜನೆ ಕಾಮಗಾರಿ ಆಗದ ಗ್ರಾಮ ಪಂಚಾಯತಿಗಳಿಗೆ ತಮ್ಮ ನಿರ್ದೇಶನ ನೀಡುವುದು. ಗೌರವಧನವನ್ನು ಬಿಡುಗಡೆ ಆದ ತಕ್ಷಣ ತ್ವರಿತ ಗತಿಯಲ್ಲಿ ಬಟವಡೆ ಮಾಡುವಂತೆ ಅಭಿವೃದ್ಧೀ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಚ. ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ವಾಲಿ, ಜಿಲ್ಲಾ ಕಾನೂನು ಸಲಹೆಗಾರರಾದ ಬಾಪುಗೌಡ.ಬಿ. ಪಾಟೀಲ, ಇಂಡಿ ತಾಲೂಕಾ ಒಕ್ಕೂಟದ ಅಧ್ಯಕ್ಷ ರಮೇಶ ಮಂಗಳೂರ, ಬಬಲೇಶ್ವರ ತಾಲೂಕಾ ಒಕ್ಕೂಟದ ಅಧ್ಯಕ್ಷರಾದ ವಿನೋದ ಚಿಕ್ಕರೆಡ್ಡಿ, ಹಣಮಾಪೂರ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ ಗಣಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

