ದೇವರಹಿಪ್ಪರಗಿ: ಉಡಿ ತುಂಬುವಂಥ ಕಾರ್ಯಕ್ರಮದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆ ನಮ್ಮ ಸಂಪ್ರದಾಯದ ಪಾಲನೆ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಜಡಿಮಠದ ಜಡಿಸಿದ್ಧೇಶ್ವರ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಗುಡ್ಡಾಪೂರ ಶ್ರೀದಾನಮ್ಮದೇವಿ ಪುರಾಣದ ಅಂಗವಾಗಿ ಜರುಗಿದ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಿಳೆ ಹಿಂದೆ, ಇಂದು, ಎಂದಿಗೂ ಮಮತೆ, ಮಮಕಾರದ ಮಾತೃ ಸ್ವರೂಪಿ. ಅಂತೆಯೇ ನಮ್ಮ ನೆಲದ ಸಂಪ್ರದಾಯ, ಸಂಸ್ಕೃತಿಗಳನ್ನು ಪಾಲಿಸಿ ಮುಂದುವರೆಸಿಕೊಂಡು ಹೋಗುವಲ್ಲಿ ಅವಳು ಸದಾ ಮುಂದು, ಅಂತೆಯೇ ಅವಳಿಗೆ ಪೂಜ್ಯನೀಯ ಸ್ಥಾನ ನೀಡಿದ್ದೇವೆ. ಎಂದು ಹೇಳುತ್ತಾ ಇಂದಿನ ಉಡಿ ತುಂಬುವ ಕಾರ್ಯದಲ್ಲಿ ಪಟ್ಟಣದ ಬಹುತೇಕ ಮಾತೆಯರು ಭಾಗವಹಿಸಿ ಯಶಸ್ವಿಗೊಳಿಸಿದ್ದು ಅತ್ಯಂತ ಸಂತೋಷದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಇಂದ್ರಾಬಾಯಿ ಕುದರಿ, ಸಾವಿತ್ರಿ ಹಿರೇಮಠ, ಮಹಾದೇವಿ ಪಾಟೀಲ, ನಿರ್ಮಲಾ ಯಾಳಗಿ, ರೇಣುಕಾ ಪಾಟೀಲ, ಪ್ರೇಮಾ ಬುದ್ನಿ, ದ್ರಾಕ್ಷಾಯಣಿ ಸೌದಿ, ಭಾರತಿ ಪಾಟೀಲ, ಸುರೇಖಾ ಬುದ್ನಿ, ಮಂಜುಳಾ ಕಕ್ಕಳಮೇಲಿ, ಭಾರತಿ ಬುದ್ನಿ, ಲಕ್ಷ್ಮೀ ಸಾಸಾಬಾಳ, ವಿಜಯಲಕ್ಷ್ಮಿ ಬುದ್ನಿ, ಗಂಗವ್ವ ಒಣರೋಟ್ಟಿ, ಮಾಯಾ ಪಾಟೀಲ, ಸುವರ್ಣಾ ನಾಶೀಮಠ ಸೇರಿದಂತೆ ಹಲವರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

