ದೇವರಹಿಪ್ಪರಗಿ: ಮಾತು ಬಾರದೇ, ಕಿವಿ ಕೇಳದೇ ಇದ್ದರೂ ಜೀವನ ಸಾಗಿಸಬಹುದು. ಆದರೆ ಕಣ್ಣು ಕಾಣದೇ ಜೀವನ ನಡೆಸುವುದು ಅತ್ಯಂತ ಕಠಿಣಕರವಾಗಿದೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.
ಪಟ್ಟಣದಲ್ಲಿ ಭಾನುವಾರ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ನಲವತ್ತು ವರ್ಷದ ನಂತರ ಬಿ.ಪಿ. ಸಕ್ಕರೆ ಕಾಯಿಲೆಯಂತೆ ಕಣ್ಣಿನ ಸಮಸ್ಯೆಯು ಗಮನಾರ್ಹವಾಗಿ ಕಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ದೃಷ್ಟಿದೋಷ ಈಗೀಗ ಸಾಮಾನ್ಯವಾಗಿದ್ದು, ಇದರ ನಿಯಂತ್ರಣಕ್ಕಾಗಿ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದೇವರಹಿಪ್ಪರಗಿ ಪಟ್ಟಣದ ಹಿರಿಯ ವೈದ್ಯ ಆರ್.ಆರ್.ನಾಯಿಕ್ ಹಾಗೂ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡರು ಬಡವರ ಪಾಲಿಗೆ ಕಣ್ಣಾಗಿ ಜಿಲ್ಲೆಯ ವಿವಿಧೆಡೆ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಥಳೀಯ ಮಠಗಳ ಶ್ರೀಗಳು ಸಾನಿಧ್ಯ ವಹಿಸಿದ್ದರು. ಹಿರಿಯರಾದ ಬಾಳಾಸಾಹೇಬಗೌಡ ಪಾಟೀಲ ಹಾಗೂ ವೈದ್ಯ ಅಮರ ಸಾಲಕ್ಕಿ ವೇದಿಕೆಯಲ್ಲಿದ್ದರು.
ಶಿಬಿರದಲ್ಲಿ ಪಿ.ಎಸ್.ಮಿಂಚನಾಳ, ಬಾಬುಗೌಡ ಪಾಟೀಲ, ಬಂಡೆಪ್ಪ ಬಿರಾದಾರ, ನಾಗಪ್ಪ ವಡ್ಡೋಡಗಿ, ಭೋಜಪ್ಪ ಅತನೂರ, ಆನಂದ ಜಡಿಮಠ, ಸೋಮು ಹಿರೇಮಠ, ವಿನೋದ ನಾಶಿಮಠ, ವೀರೇಶ ಕುದರಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ನೂರಅಹ್ಮದ್, ಡಾ.ಸ್ವಾತಿ, ಡಾ.ಕಾರ್ತಿಕ, ಡಾ.ಸಮೀರಾ, ಸುನೀಲ.ಕೆ, ಅಜಯ ಸಾವಂತ್, ಸಂಗಮೇಶ ಪಾಟೀಲ, ಅಫ್ತಾಬ್, ವಿನಾಯಕ, ಅಕ್ಷಯ, ಪ್ರಶಾಂತ, ಬಾಪುರಾಯ, ಸುಪ್ರೀಯಾ, ಆಸ್ಕರ್ ಹಾಗೂ ಸಾರ್ವಜನಿಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

