ಸಿಂದಗಿ: ಇಂದಿನ ಯಾಂತ್ರಿಕ ಯುಗವು ಮಾನವೀಯ ಮೌಲ್ಯಗಳಿಂದ ನಮ್ಮನ್ನು ದೂರ ಮಾಡಿದೆ. ಇಂತಹ ಆದ್ಯಾತ್ಮಿಕ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ನಾಲತವಾಡದ ಶ್ರೀಗುರು ಸ್ವಾಮಿಗಳು ಹೇಳಿದರು.
ಶನಿವಾರದಂದು ತಾಲೂಕಿನ ಯಂಕಂಚಿ ಸಂಸ್ಥಾನ ಹಿರೇಮಠದಲ್ಲಿ ಲಿ.ಶ್ರೀ ರುದ್ರಮುನಿ ಶಿವಾಚಾರ್ಯರ ೪೬ನೆಯ ಪುಣ್ಯಾರಾದನೆಯ ನಿಮಿತ್ಯವಾಗಿ ಹಮ್ಮಿಕೊಂಡ ಶ್ರೀ ಅಮ್ಮೋಘ ಸಿದ್ದೇಶ್ವರರ ಪುರಾಣವನ್ನು ಪ್ರಾರಂಭಿಸಿ ಮಾತನಾಡಿದ ಅವರು, ಅಮೋಘ ಸಿದ್ದೇಶ್ವರರು ಒಬ್ಬ ಪವಾಡ ಪುರುಷರು ಅಂತಹ ಮಹಾನ ಶರಣರ ಸಂದೇಶ, ಜೀವನ ಚರಿತ್ರೆ ಇಂದಿನ ಯುವ ಪೀಳಿಗೆಗೆ ತುಂಬಾ ಅವಶ್ಯಕವಾಗಿದೆ. ಶ್ರೀಮಠದ ಪೂಜ್ಯರು ಈ ಸುಂದರ ಪ್ರವಚನವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.
ಈ ವೇಳೆ ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ಚಿಕ್ಕರೂಗಿಯ ಈರಣ್ಣ ಶಾಸ್ತ್ರೀಗಳು ಮಾತನಾಡಿ, ಎಲ್ಲ ಸದ್ಭಕ್ತರು ಇದರ ಪಡೆದುಕೊಳ್ಳಬೇಕು. ಏಕೆಂದರೆ ಇಂದಿನ ದಿನಮಾನಗಳಲ್ಲಿ ಪುರಾಣ ಪ್ರವಚನ ಆಲಿಸುವುದರಿಂದ ಹಾಗೂ ಶರಣ ಸಂತರ ಜೀವನದ ಆದರ್ಶವನ್ನು ಪಾಲಿಸಿಕೊಂಡು ಅನುಸರಿಸಿಕೊಂಡು ಸಾಗಿದರೆ ನಮ್ಮ ಬದುಕು ಬಂಗಾರವಾಗುವದರಲ್ಲಿ ಸಂಶಯವಿಲ್ಲ. ಮಾನವ ಪ್ರತಿ ಕ್ಷೇತ್ರದಲ್ಲೂ ಅಪ್ಪಟ ಸಾಧನೆ ಮಾಡಿದ್ದಾನೆ. ಆದರೆ ತನ್ನನ್ನೇ ತಾನು ತಿಳಿಯುವಲ್ಲಿ ಹಿಂದೆ ಬಿದ್ದಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂತಹ ಸತ್ಸಂಗದಿಂದ ಸುಂದರ ಜೀವನ ಕಟ್ಟಕೊಳ್ಳಲು ಸಾದ್ಯವಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಭಿನವ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಪುರಾಣಿಕರಾದ ವೀರಭದ್ರಯ್ಯ ಸ್ವಾಮಿಗಳು ಅಮೋಘ ಸಿದ್ದೇಶ್ವರರ ಜೀವನ ಚರಿತ್ರೆಯನ್ನು ಪ್ರಾರಂಭಿಸಿದರು.
ಈ ವೇಳೆ ಕಲ್ಲಯ್ಯ ಪಡದಳ್ಳಿ ಅವರು ಸಂಗೀತ ಹಾಗೂ ಯಡ್ರಾಮಿಯ ಪ್ರಾಣೇಶ ಅವರು ತಬಲಾ ನುಡಿಸಿ ಭಕ್ತರ ತನುಮನ ತಣಿಸಿದರು. ಪುರಾಣದಲ್ಲಿ ವಿವಿಧ ಮಾಠಾಧೀಶರು, ಗ್ರಾಮದ ಸುತ್ತಮುತ್ತಲಿನ ಶ್ರೀಮಠದ ಭಕ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

