ಮುದ್ದೇಬಿಹಾಳ: ಸಾಮಾಜಿಕ ಚಿಂತನೆ ಧರ್ಮೋಪದೇಶವನ್ನು ಇಡೀ ಜಗತ್ತಿನ ಜನತೆ ಒಪ್ಪಿಕೊಳ್ಳುತ್ತಿದ್ದಾರೆ. ಅಮೇರಿಕಾ, ಜಪಾನ, ರಶಿಯಾ ದೇಶಗಳಲ್ಲಿ ಭಾರತೀಯರನ್ನು ಬಸವಣ್ಣನವರ ನಾಡಿನವರು ಎಂದು ಗೌರವಿಸುತ್ತಾರೆ. ಬಸವಣ್ಣನವರು
ಸಾರಿದ ಸಂದೇಶ ಎಲ್ಲರಿಗೂ ಕಲ್ಯಾಣವಾಗುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಬಸವ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನದಲ್ಲಿ ಭಾರತ ಮುಂದಿದೆ. ಅದರೆ ಮಾನವೀಯ ಮೌಲ್ಯಗಳು ಇಲ್ಲ. ಇಂದಿನ ದಿನ ಮಹಾಪುರುಷರ ಜಯಂತಿಗಳನ್ನು ಆಯಾ ಜಾತಿಯವರೇ ಮಾಡುತ್ತಾರೆ. ದೇವ ಮಾನವರನ್ನ ಜಾತಿಗೆ ಸೀಮಿತಗೊಳಿಸಿದ್ದರಿಂದ. ಸಮಾಜದಲ್ಲಿ ಒಡಕು, ವಿರಸಗಳು ಮೂಡಿವೆ. ಇವುಗಳನ್ನ ತೊಡೆದು ಹಾಕಿ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಸಮಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಮಾತನಾಡಿ, ಪುರಾಣ ಪ್ರವಚನಗಳು ಜನತೆಯನ್ನ ಸನ್ಮಾರ್ಗದಲ್ಲಿ ನಡೆಸುತ್ತವೆ. ಕಾರಣ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದರು.
ಸಮಾಜ ಸೇವಕ ಸಿ.ಬಿ.ಅಸ್ಕಿ ಮಾತನಾಡಿದರು.
ಬಸವ ಪುರಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ.ನಾವದಗಿ, ರಾಜಕೀಯ ಮುಖಂಡರಾದ ಶಂಕರಗೌಡ ಹಿರೇಗೌಡರ, ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ಶರಣರು ಬದಕಿ ನಮಗೂ ಬದುಕಲು ಕಲಿಸಿದ್ದಾರೆ. ಬಸವಣ್ಣನವರು ಅಜ್ಞಾನ ಅಂಧಕಾರದ ವಿರುದ್ಧ ಹೋರಾಡಿದ್ದಾರೆ. ಎಲ್ಲರನ್ನೂ ಕಲ್ಯಾಣಕ್ಕೆ ಕರೆತಂದು ಶರಣರನ್ನಾಗಿಸಿದ್ದಾರೆ. ಆದರೆ ಸಧ್ಯದ ಪರೀಸ್ಥಿತಿಯಲ್ಲಿ ಅಧಿಕಾರಕ್ಕಾಗಿ ಸಮಾಜ ಸಮಾಜ ಒಡೆದು ಅಂಬೇಡ್ಕರ್ ರನ್ನು ಅವಮಾನಿಸುತ್ತಿದ್ದಾರೆ. ಇದೆಲ್ಲ ಕೊನೆಯಾಗಬೇಕು ಎಂದರು.
ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ವಿರೂಪಾಕ್ಷ ಮಹಾಸ್ವಾಮಿಗಳು ಪ್ರವಚನ ನೀಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಿ.ಸಿ.ಮೋಟಗಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

