ವಿಜಯಪುರ: ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ಬೆಂಗಳೂರಿನ ರಾಜಭವನದಲ್ಲಿ ಡಿ.೭ರಂದು ನಡೆದ ಸಮಾರಂಭದಲ್ಲಿ ೨೦೨೨ನೇ ಸಾಲಿನಲ್ಲಿ ಅತಿ ಹೆಚ್ಚು ಧ್ವಜ ನಿಧಿ ಸಂಗ್ರಹ ಮಾಡಿದ ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ನೀಡಲಾಗಿದೆ.
ಸಮಾರಂಭದಲ್ಲಿ ವಿಜಯಪುರ ಜಿಲ್ಲೆ ಅತಿ ಹೆಚ್ಚು ನಿಧಿ ಸಂಗ್ರಹ ಮಾಡಿದ್ದರಿಂದ ಲೆಫ್ಟಿನೆಂಟ್ ಜನರಲ್ ಬಿ.ಕೆ.ರೆಪ್ಸವಾಲ್, ಎ.ವಿ.ಎಸ್.ಎಂ. ವಿ.ಎಸ್.ಎಂ. ಕಮಾಂಡೆಂಟ್ ಎ.ಎಸ್.ಸಿ. ಸೆಂಟರ್ ಮತ್ತು ಕಾಲೇಜ್ ಬೆಂಗಳೂರು ಇವರಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಪ್ರಶಸ್ತಿ ಪಾರಿತೋಷಕವನ್ನು ಸ್ವೀಕರಿಸಿದ್ದಾರೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

