ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಸಂತ ಜ್ಞಾನೇಶ್ವರರ ಮಹಾರಾಜರ ಉತ್ಸವದ ಅಂಗವಾಗಿ ನಾಲ್ಕು ದಿನಗಳವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಪಟ್ಟಣದ ವಿಠಲ ಮಂದಿರದಲ್ಲಿ ಶುಕ್ರವಾರ ಸಂಜೆ ಭಜನೆಯೊಂದಿಗೆ ಪೋತಿ ಸ್ಥಾಪನಾ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಿಗ್ಗೆ ಪಾರಾಯಣ, ಸಂಜೆ ಪ್ರವಚನ, ರಾತ್ರಿ ಕೀರ್ತನೆ ಹಾಗೂ ಭಜನೆಯೊಂದಿಗೆ ಜಾಗರಣೆ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಭಾನುವಾರ ಬೆಳಗ್ಗೆ ದೇವಸ್ಥಾನದಲ್ಲಿ ಹರಿಪಾಠ ನಡೆಯಿತು. ಸಂಜೆ ಭಕ್ತರ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸೋಮವಾರ ಬೆಳಗ್ಗೆ ಕಾಲಾಕೀರ್ತನ ಕಾರ್ಯಕ್ರಮದ ನಂತರ ಭಕ್ತರು ಪ್ರಸಾದ ಸ್ವೀಕರಿಸಿದರು.
ಭಾನುವಾರ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ಮುಖಂಡರಾದ ಅಪ್ಪುಗೌಡ ಪಾಟೀಲ, ಸುಭಾಸಗೌಡ ಪಾಟೀಲ, ಬಾಬು ಅರಳೆಪ್ಪನವರ, ಶಿವಾಜಿ ಘೋರ್ಪಡೆ, ಸಂಭಾಜಿ ನಲವಡೆ, ಜೋತಿಬಾ ನಾಮನೆ, ಪಾಂಡುಗ ಬನಸೋಡೆ, ಯಲ್ಲಪ್ಪ ರೊಳ್ಳಿ, ರಾಜು ಬಣಕರ, ವಿಶ್ವನಾಥ ಗುಂಡ, ಪುಂಡಲೀಕ ಮಾಳಿ, ಬಸವರಾಜ ಚಿಮ್ಮಲಗಿ, ಮುರಳಿ ನುಲೆಣ್ಣವರ, ಶಿವಾಜಿ ಮೋರೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

