Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 23, 2026

ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ರೈತರಿಗೆ ನ್ಯಾಯಯುತ ವಿದ್ಯುತ್ ಸಂಪರ್ಕ ಕಲ್ಪಿಸಿ : ಕೆಂಗನಾಳ
(ರಾಜ್ಯ ) ಜಿಲ್ಲೆ

ರೈತರಿಗೆ ನ್ಯಾಯಯುತ ವಿದ್ಯುತ್ ಸಂಪರ್ಕ ಕಲ್ಪಿಸಿ : ಕೆಂಗನಾಳ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವನಬಾಗೇವಾಡಿ: ಪಟ್ಟಣದಲ್ಲಿ ಅಖಂಡ ೧೮೮ ದಿನದ ಹೋರಾಟದ ಫಲವಾಗಿ ಬಸವನಬಾಗೇವಾಡಿ ವಿದ್ಯುತ್ ವಿಭಾಗೀಯ ಕಚೇರಿ ದಿ.೧೨.೧೨.೨೦೧೨ ರಂದು ಆದೇಶ ಸಿಕ್ಕಿತು. ಇದರಿಂದಾಗಿ ೨೯೭ ಗ್ರಾಮಗಳ ಜನರು ವಿಜಯಪುರಕ್ಕೆ ಹೋಗಿ ಬರುವುದನ್ನು ತಪ್ಪಿಸಿದಂತಾಗಿದೆ. ಇಂದಿಗೆ ಈ ಕಚೇರಿಯು ಹತ್ತು ವರ್ಷದ ಹಿಂದೆ ಆದೇಶದೊಂದಿಗೆ ಆರಂಭವಾಗಿ ಇಂದಿಗೆ ಹನ್ನೊಂದು ವರ್ಷಕ್ಕೆ ಕಾಲಿಡುತ್ತಿದ್ದರೂ ಜನರಿಗೆ ಈ ಕಚೇರಿಯ ಸೌಲಭ್ಯಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಎಂದು ರೈತಪರ, ಜನಪರ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.
ಸೋಮವಾರ ದೂರವಾಣಿ ಮೂಲಕ ಮಾತನಾಡಿದ ಅವರು, ಪಟ್ಟಣದಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಇಲ್ಲದ ಪರಿಣಾಮವಾಗಿ ಜನರು ಜಿಲ್ಲಾ ಕೇಂದ್ರ ವಿಜಯಪುರಕ್ಕೆ ತಮ್ಮ ಕೆಲಸಗಳಿಗಾಗಿ ಅಲೆದಾಡುವ ಪರಿಸ್ಥಿತಿಯಿತ್ತು. ಅಲ್ಲದೇ ದೂರದ ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ ತಾಲೂಕಿನ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಜನರು ವಿದ್ಯುತ್ ಕೆಲಸಗಳಿಗಾಗಿ ವಿಜಯಪುರದಲ್ಲಿರುವ ವಿಭಾಗೀಯ ಕಚೇರಿಗೆ ಹೋಗುವ ಪರಿಸ್ಥಿತಿಯಿತ್ತು. ಜನರ ಅಲೆದಾಡುವದನ್ನು ಮನಗಂಡು ಅವರ ಕೆಲಸಗಳು ಸುಲಭವಾಗಿ ಬೇಗನೇ ಆಗುವ ಉದ್ದೇಶದಿಂದ ಹೆಸ್ಕಾಂ ಇಲಾಖೆಯು ಬಸವನಬಾಗೇವಾಡಿಯಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಆರಂಭಿಸುವಂತೆ ಆಗ್ರಹಿಸಿ ೧೮೮ ದಿನಗಳ ಕಾಲ ಹೋರಾಟ ಮಾಡಿದ ಫಲವಾಗಿ ಇಲಾಖೆಯು ಕಚೇರಿ ಸ್ಥಾಪನೆಗೆ ಆದೇಶ ನೀಡಿತು. ಜನರಿಗೆ ತುಂಬಾ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಾನು ನಿರಂತರವಾಗಿ ಹೋರಾಟ ಮಾಡಿದ ಫಲವಾಗಿ ಕಚೇರಿ ಆರಂಭವಾಗಿ ಹನ್ನೊಂದು ವರ್ಷ ಗತಿಸಿದರೂ ಇಂಧನ ಇಲಾಖೆಯ ಸಚಿವರು, ಜನಪ್ರತಿನಿಧಿಗಳ, ಅಧಿಕಾರಿಗಳ ಬೇಜಬ್ದಾರಿಯಿಂದ ರೈತರಿಗೆ ಸಿಗಬೇಕಾದ ಮೂಲ ಸೌಕರ್ಯಗಳನ್ನು ಸರಿಯಾಗಿ ಸಿಗುತ್ತಿಲ್ಲ. ರೈತರು ಅಕ್ರಮ-ಸಕ್ರಮ ಯೋಜನೆಯಲ್ಲಿ ಹಣ ತುಂಬಿದರೂ ಇದುವರೆಗೂ ಸರಿಯಾಗಿ ಮೂಲಭೂತ ಸೌಲಭ್ಯ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯತನ ಎದ್ದು ಕಾಣುತ್ತಿದೆ. ಇದರಿಂದಾಗಿ ಇಲಾಖೆಗೆ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಹಲವಾರು ಅಧಿಕಾರಿಗಳು ಸ್ಥಾನಿಕ ಸ್ಥಳದಲ್ಲಿ ಇರದೇ ಬೇರೆಡೆಯಿಂದ ಬಂದು ಹೋಗುವದರಿಂದಾಗಿ ರೈತರಿಗೆ, ಜನರಿಗೆ ಬಹಳ ಅನಾನೂಕೂಲತೆಯಾಗುತ್ತಿದೆ. ಇಲಾಖೆಯ ಸಿಬ್ಬಂದಿಗಳು ಸಹ ರೈತರಿಗೆ, ಜನರಿಗೆ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದರಿಂದಾಗಿ ಅವರ ಕೆಲಸಗಳು ನೆನೆಗುದಿಗೆ ಬೀಳುತ್ತಿವೆ. ಕೂಡಲೇ ಇಂಧನ ಸಚಿವರು, ಅಧಿಕಾರಿಗಳು ಇದರ ಕಡೆಗೆ ಗಮನ ಹರಿಸಬೇಕಿದೆ ಎಂದ ಅವರು, ಈಚೆಗೆ ೨೨.೦೯.೨೦೨೩ ರಂದು ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನದನ್ವಯ ರೈತರಿಗೆ ಸಿಗಬೇಕಾದ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಕೂಡಲೇ ರೈತರಿಗೆ ನ್ಯಾಯಯುತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ನ್ಯಾಯ ಒದಗಿಸಬೇಕು. ಈ ಕುರಿತು ಬೆಳಗಾವಿಯ ಅಧಿವೇಶನದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 23, 2026

ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ

ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 23, 2026
    In ದಿನಪತ್ರಿಕೆ
  • ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ
    In (ರಾಜ್ಯ ) ಜಿಲ್ಲೆ
  • ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಉದ್ಯೋಗದ ಬದುಕಿಗೆ ಬೇಕಿವೆ ಕೌಶಲ್ಯಗಳು
    In ವಿಶೇಷ ಲೇಖನ
  • ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿ ಅಗತ್ಯ :ಕನ್ನೇರಿ ಶ್ರೀ
    In (ರಾಜ್ಯ ) ಜಿಲ್ಲೆ
  • ಸಿದ್ದಾಪುರ ಪಿಕೆಪಿಎಸ್ ಚುನಾವಣೆಯಲ್ಲಿ ಸವದಿ ಗೆಲುವು
    In (ರಾಜ್ಯ ) ಜಿಲ್ಲೆ
  • ಹೊರ್ತಿ ರೇವಣಸಿದ್ದೇಶ್ವರ ದೇಗುಲಕ್ಕೆ ರಾಜ್ಯಪಾಲರ ಭೇಟಿ
    In (ರಾಜ್ಯ ) ಜಿಲ್ಲೆ
  • ಆದಿ ಶಂಕರಾಚಾರ್ಯರ ಜಯಂತಿ ಭಕ್ತಿಭಾವದಿಂದ ಆಚರಣೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.