ದೇವರಹಿಪ್ಪರಗಿ: ಪುರಾಣ, ಪ್ರವಚನ, ಧರ್ಮಸಭೆಗಳಿಗೆ ಗ್ರಾಮಗಳಲ್ಲಿನ ಮಠಮಾನ್ಯಗಳು ಉತ್ತಮ ವೇದಿಕೆಯಾಗಿವೆ ಎಂದು ದೇವರಹಿಪ್ಪರಗಿ ಗದ್ದುಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಿವಾಳಖೇಡ ಗ್ರಾಮದಲ್ಲಿ ಶುಕ್ರವಾರ ನೂತನ ಶ್ರೀ ಸಿದ್ದಕೃಪಾ ಮಲ್ಲಿಕಾರ್ಜುನ ಮಹಾ ಮಠದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ಹಿಂದಿನಿಂದಲೂ ಮಠಗಳು ಆಧ್ಯಾತ್ಮಿಕ ಚಿಂತನೆಗಳ ಕೇಂದ್ರಗಳಾಗಿವೆ. ಇಂದು ಇಲ್ಲಿ ಆಧ್ಯಾತ್ಮಿಕ ತಾಣಕ್ಕೆ ಚಾಲನೆ ನೀಡುತ್ತಿರುವುದು ಅತ್ಯಂತ ಸಮಯೋಚಿತ ಎಂದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಧಾರ್ಮಿಕ ಚಿಂತನೆಗಳ ಮೂಲಕದ ನಮ್ಮತನ ಉಳಿಸಿಕೊಳ್ಳಬೇಕು. ಸಂತರು, ಶರಣರು, ಮಹಾಂತರ ಉದಾತ್ತ ಯೋಚನೆಗಳ ಮೂಲಕ ನಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.
ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಆಧ್ಯಾತ್ಮಿಕ ಬದುಕು ಉತ್ತಮ ಜೀವನ ರೂಪಿಸಿಕೊಡಲು ಸಹಕಾರಿಯಾಗಿದೆ. ನಾವೆಲ್ಲ ಶ್ರೀಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳೊಣ ಎಂದರು.
ದೇವರಹಿಪ್ಪರಗಿ ಪ್ರಗತಿ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವೈ.ಬಿ.ಪಾಟೀಲ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ ಮಾತನಾಡಿದರು.
ಬೆಳ್ಳೆರಿ ಶಿವಾನಂದಮಠದ ಬಸವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಹರನಾಳ ಬಸವಾನಂದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮನಗೂಳಿ ವಿರಕ್ತಮಠದ ವಿರತೇಶಾನಂದ ಸ್ವಾಮೀಜಿ, ಮುಳಸಾವಳಗಿ ಅಮೋಘಸಿದ್ದ ಮಠದ ನಿಂಗರಾಯ, ಚಿಕ್ಕರೂಗಿ ಈರಣ್ಣಶಾಸ್ತಿç ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಜ್ಞಾನಯೋಗಾಶ್ರಮದ ಸ್ವಾಮೀಜಿ ಹಾಗೂ ಬಾಲಗಾಂವ ಗುರುದೇವಾಶ್ರಮದ ಡಾ.ಅಮೃತಾನಂದ ಸ್ವಾಮೀಜಿ ಪ್ರವಚನ ನೀಡಿದರು. ಸಂಘಟಕರಾದ ಶ್ರೀಮಂತ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಫ.ಗು.ಸಿದ್ದಾಪುರ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಮುಖಂಡ ಸುರೇಶಗೌಡ ಪಾಟೀಲ(ಸಾಸನೂರ), ರಮೇಶ ಮಸಬಿನಾಳ, ಚನ್ನಪ್ಪ ಕಾರಜೋಳ, ಶರಣಗೌಡ ಪಾಟೀಲ, ಸಂಗನಗೌಡ ಬಿರಾದಾರ, ಸಾಹೇಬಗೌಡ ರೆಡ್ಡಿ, ಅಪ್ಪುಗೌಡ ಪಾಟೀಲ, ಮಲ್ಲಿಕಾರ್ಜುನ ಮಠ, ಆರ್. ಆರ್.ಮೂಲಿಮನಿ, ಪ್ರಕಾಶ ಗುಡಿಮನಿ, ಸರಿತಾ ನಾಯಕ, ಪ್ರಕಾಶ ಮಲ್ಲಾರಿ ಸೇರಿದಂತೆ ನಿವಾಳಖೇಡ ಗ್ರಾಮದ ಭಕ್ತಾಧಿಗಳು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

