ಸಿಂದಗಿ: ವಕೀಲರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಕಳೆದ ವಾರ ಚಿಕ್ಕಮಗಳೂರು ಪೊಲೀಸರು ವಕೀಲರ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಕಲಬುರಗಿಯಲ್ಲಿ ವಕೀಲರೊಬ್ಬರ ಕೊಲೆಯಾಗಿದೆ. ಸರ್ಕಾರ ವಕೀಲರ ರಕ್ಷಣೆಗೆ ನಿಲ್ಲಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ. ದೊಡಮನಿ ಒತ್ತಾಯಿಸಿದರು.
ತಾಲೂಕು ಆಡಳಿತ ಸೌಧಕ್ಕೆ ಹೋಗಿ ಮನವಿ ಸಲ್ಲಿಸುವ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಹತ್ಯೆಗೈದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಬಳಿಕ ತಾಲೂಕು ಆಡಳಿತ ಸೌಧದವರೆಗೆ ಬೈಕ್ ರ‍್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು.
ಈ ವೇಳೆ ವಕೀಲರಾದ ಅರವಿಂದ ಕನ್ನೂರ, ಆರ್.ಡಿ.ಅಮ್ಯಾಗೋಳ, ಜಿ.ಜಿ.ಮಾರ್ಸನಳ್ಳಿ, ಎಸ್.ಎ. ಗಾಯಕವಾಡ, ಆರ್. ಎಂ.ಶಿರಬೂರ, ಎಂ.ಸಿ. ಯಾತನೂರ, ಎಸ್.ಬಿ. ಖಾನಾಪೂರ, ಎಸ್.ಎಮ್.ಕಾಚೂರ, ಶಶಿಧರ ಗಾಯಕವಾಡ ಸೇರಿದಂತೆ ತಾಲೂಕಿನ ಎಲ್ಲ ವಕೀಲರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

