ಕಲಕೇರಿ: ಸುಮಾರು ೨೦ ಸಾವಿರ ಜನಸಂಖ್ಯೆ ಹೊಂದಿ, ಒಂದು ತಾಲೂಕಿಗೆ ಬೇಕಾಗುವ ಎಲ್ಲಾ ಅರ್ಹತೆಗಳು ಇದ್ದಾಗ್ಯೂ ಕೂಡಾ ಇಲ್ಲಿಯವರೆಗೆ ಹೋಬಳಿಯೂ ಆಗದಿರುವುದು ಈ ಭಾಗದ ಜನಪ್ರತಿನಿಧಿಗಳ ಹಾಗೂ ಅಧಿಕಾರಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಭೋವಿ ಸಮಾಜದ ಮುಖಂಡರಾದ ಹಣಮಂತ ಹೋರಾಟ ಮಾತನಾಡಿದರು.
ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಕಲಕೇರಿ ಹೋಬಳಿ ಹೋರಾಟದ ಸಲುವಾಗಿ ಕರೆದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸೋಮವಾರದಂದು ಕಲಕೇರಿ ಬಂದ್‌ಗೆ ಕರೆ ನೀಡಿ ಮುಂದಿನ ಹೋರಾಟದ ಕುರಿತು ಚರ್ಚೆ ಮಾಡಲಾಯಿತು.
ಮಾಜಿ.ತಾ.ಪಂ ಸದಸ್ಯ ಲಕ್ಕಪ್ಪ ಬಡಿಗೇರ ಮಾತನಾಡಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ರಾಜ ಅಹಮ್ಮದ ಸಿರಸಗಿ, ಸುಧಾಕರ ಅಡಕಿ, ನಬಿಲಾಲ್ ನಾಯ್ಕೋಡಿ, ಎಂ.ಪಿ.ನದಾಫ, ಕಲಕೇರಿ ಹೋಬಳಿ ಆದರೆ ಕಲಕೇರಿ ಸೇರಿದಂತೆ ಸುತ್ತಮುತ್ತಲಿನ ಸುಮಾರು ೫೦ ಹಳ್ಳಿಗಳಿಗೆ ಇಷ್ಟೇಲ್ಲಾ ಅನುಕೂಲ ಆಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಮುಖಂಡರಾದ ದೇವಿಂದ್ರ ಜಂಬಗಿ, ಪರಶುರಾಮ ಕುದರಕಾರ, ಅನೀಲ ಬಡಿಗೇರ, ಪರಶುರಾಮ ಬೇಡರ, ರಮೇಶ ಹೆಂಡಿ, ಕಾಸೀಂ ನಾಯ್ಕೋಡಿ, ಚಂದ್ರಕಾಂತ ಬಡಿಗೇರ, ಲಾಳೇಮಶಾಕ ನಾಯ್ಕೋಡಿ, ಶರಣು ಕವದಿ, ಸುನೀಲ ಪಾಟೀಲ, ಹಸನ ನಾಗಾವಿ, ಪ್ರಕಾಶ ಯರನಾಳ, ಪ್ರಕಾಶ ಗುಮಶೆಟ್ಟಿ, ಯಮನೂರಿ ಸಿಂದಗೀರಿ, ಈರಗಂಘಿ ಬಡಿಗೇರ, ಚಾಂದ ಪಾಷಾ ಹವಾಲ್ದಾರ, ಮಹಮ್ಮದ ಕೆಂಬಾವಿ, ವಿಶ್ವನಾಥ ರಾಠೋಡ, ಶಿವರಾಯ ಮೋಪಗಾರ, ದಾವಲಸಾಬ್ ಬನಹಟ್ಟಿ, ಬಿ.ಎಲ್ ಕಾಚಪುರ, ಎಸ್.ಎಂ.ಬಿರಾದಾರ, ಸಲೀಂ ನಾಯ್ಕೋಡಿ, ಮೇಹಬೂಬ ಮೇಲಿನಮನಿ, ಹಾಜಿಪಾಶಾ ಜಾಗೀರದಾರ, ಮಹದೇವ ಲಿಂಗದಳ್ಳಿ, ವಿನೋದ ಛಲವಾದಿ, ದವಲ ನಾಯ್ಕೋಡಿ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

