ವಿಜಯಪುರ: ಕ್ರೀಡಾಸಕ್ತರಿಗೆ ಸಾಮೂಹಿಕವಾಗಿ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ನಡೆದ ರಾಜ್ಯ ಮಟ್ಟದ ಮುಕ್ತ ಟೆನಿಸ್ ಬಾಲ್ ಹಾಗೂ ಕ್ರಿಕೇಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಕೂಟದಲ್ಲಿ ತಂಡ ಗೆಲ್ಲಬಾರದು ಬದಲಾಗಿ ಕ್ರೀಡೆ ಗೆಲ್ಲಬೇಕು. ಉತ್ತಮ ಪ್ರದರ್ಶನ ನೀಡಿ ಮುನ್ನಡೆಯಬೇಕು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ ಕ್ರೀಡಾ ಸ್ಪರ್ಧಾಳುಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಡಾ.ಸಂದೀಪ ಸಜ್ಜನ, ಶಿವಾನಂದ ಮಾಸ್ತಹೋಳಿ, ಹರೀಶ ಪೂಜಾರ, ಎಂ.ಬಿ.ಬಳ್ಳಾರಿ, ಜುಬೇರ ಕೇರೂರ, ಸಿ.ಐ.ರಾಠೋಡ, ಮಹ್ಮದಯಾಸೀನ್ ಮೊಮಿನ್, ಎ.ಎ.ಸಿಂದಗಿಕರ, ಹೇಮಂತ ಕುಲಕರ್ಣಿ, ಮಹೇಶ ನಾವಲಗಿ, ಸುನೀಲ ರೂಡಗಿ, ಸುರೇಮದ್ರ ಮಾನಕರ, ಸಂತೋಷ ದೇವಲಾಪುರ, ಅಜಯ ಉತ್ನಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

