ಬಸವನಬಾಗೇವಾಡಿ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯ ಸಹಯೋಗದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ೯೭೬ ಸಿವ್ಹಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು, ೩ ಬ್ಯಾಂಕ್ ಪ್ರಕರಣಗಳು, ೮೯೮ ಟ್ರಾಫಿಕ್ ಚಲನ್‌ಗಳು ಸೇರಿದಂತೆ ಒಟ್ಟು ೧,೮೭೭ ಪ್ರಕರಣಗಳನ್ನು ಹಿರಿಯ ಸಿವ್ಹಿಲ್ ನ್ಯಾಯಾಧೀಶರು, ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು, ಕಿರಿಯ ಸಿವ್ಹಿಲ್ ನ್ಯಾಯಾಧೀಶರು, ಹೆಚ್ಚುವರಿ ಕಿರಿಯ ಸಿವ್ಹಿಲ್ ನ್ಯಾಯಾಧೀಶರು ಇತ್ಯರ್ಥಪಡಿಸಿದರು.
ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೋಡೆ ಅವರು ೩೮೩ ಪ್ರಕರಣಗಳನ್ನು, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ತಯ್ಯಾಬಾ ಸುಲ್ತಾನ ಅವರು ೩೪೭ ಪ್ರಕರಣಗಳನ್ನು, ಸಿವ್ಹಿಲ್ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಅವರು ೫೧ ಪ್ರಕರಣಗಳನ್ನು, ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶೆ ಸೌಮ್ಯ ಹೂಲಿ ಅವರು ೧೯೬ ಪ್ರಕರಣಗಳನ್ನು ವಿಲೇವಾರಿ ಮಾಡಿದರು. ನಾಲ್ಕು ನ್ಯಾಯಾಲಯಗಳಲ್ಲಿ ೮೯೮ ಟ್ರಾಫಿಕ್ ಚಲನ್‌ಗಳು, ೩ ಬ್ಯಾಂಕ್ ಪ್ರಕರಣಗಳನ್ನು ವಿಲೇವಾರಿಯಾದವು.
ಲೋಕ ಅದಾಲತದಲ್ಲಿ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

