ಇಂಡಿ: ರಾಷ್ಟ್ರ ಮಟ್ಟದ ಆದರ್ಶ ಶಿಕ್ಷಕರಾಗಿ ಗುರುತರ ಸೇವೆ ಸಲ್ಲಿಸಿ ಸಾಮಾಜಿಕ ನಾಟಕಕಾರರಾಗಿ ಜನ ಮನದಲ್ಲಿ ನೆಲೆ ನಿಂತವರು ಮೋಹನ ಚಂದ ಕಿರಣಗಿ ಅವರು ಎಂದು ಕನ್ನಡ ಸಾಹಿತ್ಯ ಪರಿಷತ್ತು ಇಂಡಿ ಘಟಕದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಅಭಿಪ್ರಾಯ ಪಟ್ಟರು. ಅವರು ಇಂಡಿಯ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ, ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ ಜರುಗಿದ ಎರಡನೇ ಉಪನ್ಯಾಸ ಮಾಲಿಕೆಯಲ್ಲಿ ಸಾಮಾಜಿಕ ನಾಟಕಕಾರ ಮೋಹನಚಂದ ಕಿರಣಗಿ ಅವರ ಬದುಕು ಬರಹ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಿ ತಾನು ಕೆಲಸ ಮಾಡುವ ಊರಿನ ಸ್ಥಿತಿಗತಿ ಸುಧಾರಿಸಲು ಪ್ರಯತ್ನಿಸಿದ ವ್ಯಕ್ತಿಗಳು. ಹಾಗೆಯೇ ಅಣ್ಣತಂಗಿ ಮತ್ತೂ ಆದರ್ಶ ಪ್ರೇಮ ಎಂಬಂಥ ಸಾಮಾಜಿಕ ನಾಟಕಗಳನ್ನು ರಚಿಸಿ ಅಭಿನಯಿಸಿ ಎಲ್ಲ ಹಳ್ಳಿಗಳ ಮನೆ ಮಾತಾಗಿದ್ದವರು ಕಿರಣಗಿ ಅವರು ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಜನಮಾನಸದಲ್ಲಿ ನೆಲೆ ಯೂರಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿ ಜಿ. ಆರ್. ಜಿ ಕಾಲೇಜಿನ ನಿವೃತ ಪ್ರಾಚಾರ್ಯರಾದ ಎ. ಎಸ್. ಗಾಣಿಗೇರ ಅವರು ಶ್ರೀರಂಗರ ಹಾದಿಯಲ್ಲಿ ನಡೆದವರು ಮೋಹನಚಂದ್ ಅವರು ಈ ನೆಲದ ಆಸ್ತಿ ಎಂದು ಹೇಳಿ ಭೀಮಾಂತರಂಗ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.
ಸಾಹಿತಿಗಳಾದ ಡಾ.ಚನ್ನಪ್ಪ ಕಟ್ಟಿ, ಡಾ. ರಾಜಶೇಖರ ಮಠಪತಿ, ಡಿ. ಎನ್.ಅಕ್ಕಿ, ರಾಚು ಕೊಪ್ಪ, ಸುಜಾತಾ ಬೀಳಗಿ,ಶಶಿಕಲಾ ಬಡಿಗೇರ, ಸಂಗನಗೌಡ ಹಚಡದ, ರವಿಕುಮಾರ ಅರಳಿ, ದಾನಯ್ಯ ಮಠಪತಿ, ಪ್ರಶಾಂತ ಕುಲಕರ್ಣಿ ಸೇರಿದಂತೆ ಹಲವಾರು ಜನ ಸಾಹಿತ್ಯ ಆಸಕ್ತರು ಹಾಜರಾಗಿದ್ದರು.
ಶಿಕ್ಷಕ ವಾಯ್.ಜಿ ಬಿರಾದಾರ ಸ್ವಾಗತಿಸಿ ಪರಿಚಯಿಸಿದರು, ಸಂತೋಷ ಬಂಡೆ ವಂದಿಸಿದರು. ಸಿ.ಎಂ ಬಂಡಗರ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment
