ವಿಜಯಪುರ: ಸಿಂದಗಿ ತಾಲೂಕಿನ ಮನ್ನಾಪುರ ಗ್ರಾಮದ ೭೩ ವರ್ಷ ವಯಸ್ಸಿನ ಸಾಹೇಬಗೌಡ ತಂದೆ ಶರಣಪ್ಪ ಮಲಘಾಣ ಎಂಬ ವ್ಯಕ್ತಿ ದಿನಾಂಕ ೧೦-೦೧-೨೦೨೩ ರಿಂದ ಕಾಣೆಯಾಗಿರುವ ಕುರಿತು ಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೋಲಿಸ್ ಸಬ್ ಇನ್ಸಪೆಕ್ಟರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯು ಅಂದಾಜು ೭೩ ವರ್ಷ ವಯಸ್ಸಿನವನಾಗಿದ್ದು, ೫.೫ ಫೂಟ್ ಎತ್ತರ, ಮೈಯಿಂದ ತೆಳ್ಳಗೆ, ಸಾದಗೆಂಪು ಮೈ ಬಣ್ಣ, ಉದ್ದು ಮುಖ, ಕನ್ನಡ ಭಾಷೆ ಬಲ್ಲವನಾಗಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ನೆಹರು ಶರ್ಟ, ಬಿಳಿ ಧೊತರ್ ಬಿಳಿ ಟೋಪಿ ಧರಿಸಿದ್ದನು. ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಕುರಿತು ಮಾಹಿತಿ ದೊರೆತದಲ್ಲಿ ಸಾರ್ವಜನಿಕರು ವಿಜಯಪುರ ಕಂಟ್ರೋಲ್ ರೂಂ. ದೂ: ೦೮೩೫೨-೨೫೦೮೪೪, ಸಿಂದಗಿ ಪೋಲಿಸ್ ಠಾಣೆ ದೂ: ೦೮೪೮೮-೨೨೧೩೩೩, ಇಂಡಿ ಡಿಎಸ್‌ಪಿ ದೂ:೦೮೩೫೯-೨೨೫೦೨೨ ಅಥವಾ ಸಿಂದಗಿ ಸಿಪಿಐ ದೂ:೦೮೪೮೮-೨೨೨೩೩೩ ಸಂಖ್ಯೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

