ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದ ಸಿದ್ದೇಶ್ವರ ವೇದಿಕೆಯಲ್ಲಿ ಡಿ.೧೦ ರಿಂದ ೩೧ರವರೆಗೆ ಪ್ರತಿದಿನ ಸಂಜೆ ೬:೩೦ ರಿಂದ ೮ಗಂಟೆಯವರೆಗೆ ಬಸವ ಪುರಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಮ.ನಿ.ಪ್ರ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಡಿ.೧೦ ರಂದು ಉದ್ಘಾಟನೆ, ೧೩ರಂದು ಬಸವಣ್ಣನವರ ತೊಟ್ಟಿಲೋತ್ಸವ, ೧೮ರಂದು ಬಸವಣ್ಣನವರ ಕಲ್ಯಾಣಮಹೋತ್ಸವ ಹಾಗೂ ಸಾಮೂಹಿಕ ವಿವಾಹ, ೨೯ರಿಂದ ಶಿವಯೋಗ ಹಾಗೂ ಲಿಂಗಧಾರಣೆ ೩೧ರಂದು ಮಂಗಲೋತ್ಸವ. ೧೩ರಿಂದ೨೭ ರವರೆಗೆ ಬಸವ ಬೆಳಗಿನ ಸಂಚಾರ ಹೀಗೆ ವಿಶೇಶ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ತಾಲೂಕಿನ ಎಲ್ಲ ಮಹನೀಯರು, ಮಾತೆಯರು, ಯುವಕರು ಸೇರಿದಂತೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
