ಮುದ್ದೇಬಿಹಾಳ: ಭಗವದ್ಗೀತೆ ಎಂಬುದು ಎಂದಿಗೂ ಚಿರನೂತನವಾಗಿದ್ದು ವಿಶ್ವಕ್ಕೆ ಭಗವದ್ಗೀತೆಯ ಸಂದೇಶವನ್ನು ಸಾರಬೇಕಿದೆ ಎಂದು ತಾಳಿಕೋಟೆ ಬಾಲ ಭಾರತಿ ವಿದ್ಯಾಮಂದಿರದ ಕಾರ್ಯದರ್ಶಿ ಚಿದಂಬರ ಕರಮರಕರ ಹೇಳಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಉತ್ತರ ಕನ್ನಡ ಜೆಲ್ಲೆಯ ಶಿರಸಿಯ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮತ್ತು ಪವಾಡ ಬಸವೇಶ್ವರ ಭಕ್ತ ವೃಂದ ಹಾಗೂ ಚೇತನ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕ ಮಟ್ಟದ ಭಗವದ್ಗೀತಾ ಅಭಿಯಾನ ೨೦೨೩ ಸಪ್ತಾಹದಲ್ಲಿ ಅವರು ವಿಶೇಶ ಉಪನ್ಯಾಸ ನೀಡಿದರು.
ಶಾಲಾ ವರ್ಗಗಳಲ್ಲಿ ಭಗವದ್ಗೀತೆ ಕಂಠಪಾಠ ಮತ್ತು ಆಶಯಗಳನ್ನು ತಿಳಿಸಬೇಕು. ಭಾರತೀಯ ಸಂಸ್ಕೃತಿ ಪರಿಚಯ ಹೊಸ ಶಿಕ್ಷಣ ನೀತಿಯಿಂದ ತಿಳಿಯಬಹುದು ಎಂದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಬಿ ನಾವದಗಿ, ಜ್ಞಾನ ಭಾರತಿ ವಿದ್ಯಾ ಮಂದಿರದ ಅಧ್ಯಕ್ಷ ಬಿ.ಪಿ ಕುಲಕರ್ಣಿ, ಭಗವದ್ಗೀತೆ ಅಭಿಯಾನದ ಸಂಚಾಲಕ ರಾಮಚಂದ್ರ ಹೆಗಡೆ ಮಾತನಾಡಿ ಗೀತೆಯು ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದ್ದು ಇದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಗತ್ತಿಗೆ ಬೇಕಿದೆ. ಗೀತೆಯು ನಾವೆಲ್ಲ ಒಂದೇ ಎನ್ನುವ ಚಿಂತನೆಯನ್ನು ನೀಡುತ್ತ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುತ್ತದೆ. ಜಗತ್ತಿನ ಅತ್ಯಂತ ಪ್ರಾಚೀನ ಗ್ರಂಥ ಈ ಭಗವದ್ಗೀತೆ. ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವ ಸದುದ್ದೇಶದಿಂದ ೨೦೦೭ರಿಂದ ಸರ್ಣವಲ್ಲೀ ಸಂಸ್ಥಾನದ ಯತೀವರೇಣ್ಯರಾದ ಗಂಗಾಧರೇಂದ್ರ ಮಹಾಸ್ವಾಮಿಗಳು ಭಗವದ್ಗೀತಾ ಅಭಿಯಾನವನ್ನು ನಾಡಿನಾದ್ಯಂತ ಆರಂಭಿಸಿರುತ್ತಾರೆ. ನಾವೆಲ್ಲ ಅದರ ಪ್ರಯೋಜ ಪಡೆದುಕೊಳ್ಳೋಣ ಎಂದರು.
ಶಿಕ್ಷಕಿ ರಂಜಿತಾ ಹೆಗಡೆ ಮತ್ತು ವಿದ್ಯಾರ್ಥಿಗಳು ಭಗವದ್ಗೀತೆ ಪಠಣ, ಗೀತಗಾಯನವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚನ್ನಮಲ್ಲಪ್ಪ ಶರಣರು ವಹಿಸಿಕೊಂಡಿದ್ದರು. ಅಧ್ಯಕ್ಷತೆಯನ್ನು ಬಸವರಾಜ ಮೋಟಗಿ, ಮುಖ್ಯ ಅತಿಥಿಗಳಾಗಿ ಪ್ರಭು ಕಡಿ, ಚೇತನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಎಸ್.ಎಸ್.ಪೂಜಾರಿ, ಶಾಂತಾ ಅಡವಿ, ಅಶೋಕ ಗೌಡರ, ಕೆ.ಆರ್.ಪಾಟೀಲ್, ಬಿ.ಎಂ.ಲಮಾಣಿ, ಎಸ್.ಹೆಚ್.ತಳವಾರ, ಬಿ.ಆರ್.ಪಾಟೀಲ್, ಸಾವಿತ್ರಿ ನಾಯಕ, ವಿ.ಎಂ.ಪೂಜಾರಿ, ವಿ.ಎಂ.ಚವ್ಹಾಣ ಶಾಂತಾ ಭಟ್ಟ, ಲೀಲಾ ಭಟ್ಟ ಸೇರಿದಂತೆ ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

