ಸಿಂದಗಿ: ವಿದ್ಯುತ್ ಕಳ್ಳತನ ಮಹಾ ಅಪರಾಧ ಎಂದು ಅನೇಕ ಬಾರಿ ಜನರಲ್ಲಿ ಅರಿವು ಮೂಡಿಸಿದರೂ ಸಹ ನೇರವಾಗಿ ಎಲ್‌ಟಿ ಲೈನ್‌ಗೆ ನಗರ ಪ್ರದೇಶದಲ್ಲೂ ಹುಕ್ಕು ಹಾಕಿಕೊಂಡ ಮಾಹಿತಿ ಕೇಳಿ ಬಂದಿತ್ತು. ಈ ರೀತಿಯ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಖಾಧಿಕಾರಿ ಶಾಂತೂ ಬಿರಾದಾರ ಹೇಳಿದರು.
ಶುಕ್ರವಾರದಂದು ನಗರದ ವಿವಿಧ ಪ್ರದೇಶಗಳಲ್ಲಿ ಅನಧಿಕೃತವಾಗಿ ವಿದ್ಯುತ್‌ನ್ನು ಬಳುಸುತ್ತಿರುವವರ ಕಾರ್ಯಾಚರಣೆಯಲ್ಲಿ ವೈಯರ್‌ಗಳನ್ನು ವಶಪಡಿಸಿಕೊಂಡು ಮಾತನಾಡಿದ ಅವರು, ವಿದ್ಯುತ್‌ನ್ನು ಸಾರ್ವಜನಿಕರು ಯಾವಾಗಲೂ ಮಿತವಾಗಿ ಬಳಸಬೇಕು. ಮೆನ್‌ಲೈನ್ ಅಥವಾ ಎಲ್‌ಟಿ ಲೈನ್ ತಂತಿಗಳ ಹತ್ತಿರ ಗಿಡ ಮರಗಳನ್ನು ಹಚ್ಚಬಾರದು. ವೈಯರ್‌ಮೆನ್‌ಗಳ ಜೊತೆ ಸಹಕಾರದಿಂದ ನಡೆದುಕೊಳ್ಳಿ. ತಮ್ಮ ಮನೆಯ ಮುಂಭಾಗ ಇರುವ ವಿದ್ಯುತ್ ಕಂಬಗಳಿಗೆ ಹಚ್ಚಿ ವಾಹನಗಳನ್ನು ನಿಲ್ಲಿಸಬಾರದು. ಹಾಗೂ ಮಕ್ಕಳನ್ನು ಕಂಬದ ಅಕ್ಕ ಪಕ್ಕ ಆಟವಾಡಲು ಬಿಡಬಾರದು ಎಂದು ಸಲಹೆ ನೀಡಿದರು.
ಈ ವೇಳೆ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿರುವ ಮನೆ ಮತ್ತು ಪಂಪಸೆಟ್ ಹಾಗೂ ವಿದ್ಯುತ್ ಬಾಕಿಯಿರುವ ವಾಯರಗಳನ್ನು ವಶಪಡಿಸಿಕೊಂಡರು.
ಈ ಕಾರ್ಯಾಚರಣೆಯಲ್ಲಿ ಲೈನ್ ಮ್ಯಾನಗಳಾದ ಪ್ರವೀಣ ಹಿರೇಕುರುಬರ, ಚಿದಾನಂದ ಮಾವೂರ, ಸಿದ್ದಲಿಂಗಯ್ಯ, ರಮೇಶ ನಾಗಶೆಟ್ಟಿ, ನಾಗಪ್ಪ ನೂಲಾನವರ, ಶೇಖಪ್ಪ ಅಂಗಡಿ, ಸುರೇಶ ಚಾಗಶೆಟ್ಟಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

