ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠದ ವತಿಯಿಂದ ಲಿಂ.ರುದ್ರಮುನಿ ಶಿವಾಚಾರ್ಯರ ೪೬ ನೆಯ ಪುಣ್ಯಾರಾಧನೆಯ ನಿಮಿತ್ಯವಾಗಿ ಶ್ರೀ ಅಮೋಘಸಿದ್ದೇಶ್ವರ ಪುರಾಣ ಕಾರ್ಯಕ್ರಮ ಡಿ.೦೯-೨೦ರವೆರೆಗೆ ಪ್ರತಿದಿನ ರಾತ್ರಿ ೮ಗಂಟೆಗೆ ಯಂಕಂಚಿಯ ಕುಂಟೋಜಿ ಹಿರೇಮಠದಲ್ಲಿ ಜರುಗಲಿದೆ ಎಂದು ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ತಿಳಿಸಿದ್ದಾರೆ.
ಡಿ.೦೯ ರಂದು ಪುರಾಣ ಉದ್ಘಾಟನೆ ನಡೆಯಲಿದೆ. ಪ್ರವಚನಕಾರರಾಗಿ ಯಂಕಂಚಿಯ ಪಂಡಿತ ವೀರಭದ್ರಯ್ಯ ಶಾಸ್ತ್ರಿ ಆಗಮಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಮುದೋಳ (ಬಿ)ಯ ಗಂಜಿಗಟ್ಟಿ ಮಠದ ಡಾ.ವೈಜನಾಥ ಶಿವಲಿಂಗ ಶಿವಾಚಾರ್ಯರು, ಮಳ್ಳಿ ಹಿರೇಮಠದ ರುದ್ರಮುನಿ ಶಿವಾಚಾರ್ಯರು, ರೋಡಗಿ ವಿರಕ್ತಮಠದ ಅಭಿನವ ಶಿವಲಿಂಗೇಶ್ವರ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ತಾಳಿಕೋಟೆಯ ಸಿದ್ದಲಿಂಗದೇವರು, ಡೋಣಿ ಕಡಕೋಳ ಮಠದ ರಾಜಗುರು ಮಹಾಲಿಂದ ಸ್ವಾಮಿಗಳು ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಸಮ್ಮುಖವನ್ನು ಕೋರವಾರ ಶ್ರೀಮಠದ ಮುರಘೇಂದ್ರ ಶ್ರೀಗಳು, ನಾಲತವಾಡದ ಗುರುಸ್ವಾಮಿಗಳು ರಾಮಗಿರಿ ಹಿರೇಮಠ, ಚಬನೂರದ ಜೋತಿಷ್ಯರತ್ನ ರಾಮಲಿಂಗ ಶ್ರೀಗಳು, ಖಾನಾಪೂರದ ಕಲ್ಯಾಣದಯ್ಯ ಶ್ರೀಗಳು, ಹೊನ್ನಳ್ಳಿ ವೀರಘಂಟೇಶ್ವರ ಮಠದ ಗುರಲಿಂಗಯ್ಯ ಶ್ರಿಗಳು, ಅಲ್ಲಾಪೂರ ಕಲ್ಯಾಣ ಮಠದ ಮಲ್ಲಯ್ಯ ಸ್ವಾಮಿಗಳು, ಯಂಕಂಚಿಯ ಹೌದಸಿದ್ದ ಒಡೆಯರು ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಯಂಕಂಚಿಯ ಮುದ್ದಣ್ಣ ಒಡೆಯರು ಹಾಗೂ ಸಿಂದಗಿ ಉದ್ದಿಮೇದಾರ ವೇಂಕಟೇಶ ಗುತ್ತೇದಾರ, ಚಿಕ್ಕರೂಗಿಯ ಈರಣ್ಣ ಶಾಸ್ತ್ರಿಗಳು ನೇರವೇರಿಸಲಿದ್ದಾರೆ.
ಡಿ.೧೮ರಂದು ಶಿವದೀಕ್ಷಾ ಅಯ್ಯಾಚಾರ ಜರುಗುವುದು. ಡಿ.೧೯ರಂದು ಧರ್ಮಸಭೆ, ವಿವಿಧ ಕಲಾ ತಂಡಗಳಿಂದ ಸಂಗೀತ ಸೇವೆ. ಡಿ.೨೦ರಂದು ಲಿಂ.ರುದ್ರಮುನಿ ಶಿವಾಚಾರ್ಯರ ಕತೃಗದ್ದುಗೆಗೆ ರಾದ್ರಾಭಿಷೇಕ, ಕುಂಭಮೇಳ, ಕಳಸ, ಕನ್ನಡಿ ವಾದ್ಯ ವೇದಗಳೊಂದಿಗೆ ಪುರಾಣ ಮೆರವಣಿಗೆ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

