ಇಂಡಿ: ತಾಲೂಕಿನ ಹಂಜಗಿ ಗ್ರಾಮದ ಸುಮಾರು ೨೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸುಮಾರು ೬ ಕಿ.ಮಿ ಪಾದಯಾತ್ರೆ ಮೂಲಕ ಇಂಡಿ ಕರ್ನಾಟಕ ರಸ್ತೆ ಸಾರಿಗೆ ಘಟಕದ ಮುಂದೆ ಒಂದು ಗಂಟೆ ಕಾಲ ಮುಷ್ಕರ ಮಾಡಿ ಘಟಕ ವ್ಯವಸ್ಥಾಪಕ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಮಾತನಾಡಿ, ಹಂಜಗಿ,ನಿಂಬಾಳ, ಕೊಳುರಗಿ ಮಾರ್ಗದ ಬಸ್ ಸರಿಯಾಗಿ ಸಮಯಕ್ಕೆ ಬರುವದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಬಸ್ ಗಾಗಿ ಕಾಲಹರಣ ಮಾಡುವ ಪರಿಸ್ಥಿತಿ ಪ್ರತಿನಿತ್ಯ ಇದೆ. ಮಕ್ಕಳ ಭವಿಷ್ಯದ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಠಿಯಿಂದ ಬಸ್ ಸರಿಯಾಗಿ ಓಡಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.
ಎಮ್.ಕೆ.ಶೇಖ, ರಮೇಶ ರಾಠೋಡ, ಇಸ್ಮಾಯಿಲ್ ಕುಣಬಿ, ಮಾಳಪ್ಪ ಪೂಜಾರಿ, ಕಿಸೀಮ ವಾಲಿಕಾರ, ವಿನೋದ ಕಾಳೆ, ನಿಂಗಪ್ಪ ಹಿರೇಕುರಬರ ಮುಂತಾದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

