ದೇವರಹಿಪ್ಪರಗಿ: ಮಕ್ಕಳು ಸುಶಿಕ್ಷಿತ, ಸಂಸ್ಕಾರವಂತರಾಗಿ ರೂಪುಗೊಳ್ಳಲು ಮನೆಯ ಪರಿಸರ ಉತ್ತಮವಾಗಿರಬೇಕು ಎಂದು ಸದಯ್ಯನಮಠದ ವೀರಗಂಗಾಧರಶ್ರೀಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ೧೧ ನೇ ಕಾರ್ತಿಕೋತ್ಸವ ನಿಮಿತ್ಯ ಆರಂಭಗೊಂಡ ಗುಡ್ಡಾಪೂರ ದಾನಮ್ಮದೇವಿ ಪುರಾಣದಲ್ಲಿ ದಾನಮ್ಮ ಹಾಗೂ ಸೋಮೇಶ್ವರ ಮದುವೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಬದಲಾಗುತ್ತಿರುವ ಜಗತ್ತಿನಲ್ಲಿ ವೈಜ್ಞಾನಿಕ, ತಾಂತ್ರಿಕ ಅವಿಷ್ಕಾರಗಳು ಪರಿಣಾಮಕಾರಿಯಾಗಿದ್ದು, ಪ್ರತಿಯೊಬ್ಬರಲ್ಲಿ ಪರಿಣಾಮ ಉಂಟು ಮಾಡುತ್ತಿವೆ. ಈ ನಿಟ್ಟಿನಲ್ಲಿ ನಾವು ಬೆಳೆದು ಬಂದ ಪ್ರಕೃತಿ, ಪರಿಸರವನ್ನು ಮರೆಯಬಾರದು. ಇಂದಿನ ಮೊಬೈಲ್ ಯುಗದಲ್ಲಿ ಪಾಲಕರು, ಶಿಕ್ಷಕರು ಮಕ್ಕಳಿಗೆ ಉತ್ತಮವಾದ ನೈಜ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು, ಧಾರ್ಮಿಕ ರೀತಿ ನೀತಿಗಳನ್ನು ತಿಳಿಸಿಕೊಡುವುದು ಅಗತ್ಯವಾಗಿದೆ ಎಂದರು.
ಜಡಿಮಠದ ಜಡಿಸಿದ್ದೇಶ್ವರ ಸ್ವಾಮೀಜಿ ಪುರಾಣ ನೆರವೇರಿಸಿ, ಆಶೀರ್ವಚನ ನೀಡುತ್ತಾ, ಪಟ್ಟಣದ ಭಕ್ತರ ತನು, ಮನ, ಧನಗಳ ಮೂಲಕ ಕಳೆದ ೧೦ ವರ್ಷಗಳಿಂದ ಸಾಂಗವಾಗಿ ನಡೆದುಕೊಂಡು ಬಂದ ಕಾರ್ತಿಕೋತ್ಸವ ಹಾಗೂ ಪುರಾಣ ಕಾರ್ಯಕ್ರಮಗಳು ಮುಂದೆಯೂ ಹೀಗೆ ಸಾಗಲಿ. ಭಗವಂತ ಎಲ್ಲರಿಗೂ ಹೆಚ್ಚಿನ ಶಕ್ತಿ ನೀಡಲಿ ಎಂದರು.
ಸಿ.ಕೆ.ಕುದರಿ, ಪ್ರಭುದೇವ ಹಿರೇಮಠ, ಸೋಮು ಹಿರೇಮಠ, ಯಲಗೂರೇಶ ದೇವೂರ, ಬಾಬುಗೌಡ ಪಾಟೀಲ (ಜಿಡ್ಡಿಮನಿ), ಅಜ್ಜಯ್ಯ ಹಿರೇಮಠ, ನಿಂಬೆಣಪ್ಪ ಧುತ್ತರಗಾಂವಿ, ಪಿ.ಎಸ್.ಮಿಂಚನಾಳ, ಚನ್ನಯ್ಯ ಮಲ್ಲಿಕಾರ್ಜುನಮಠ,ವಿನೋದ ನಾಶಿಮಠ, ಶ್ರೀಶೈಲ ದೇಸಾಯಿ, ಮಡಿವಾಳಪ್ಪ ಮಣೂರ, ರಮೇಶ ಮಶಾನವರ, ತೇಜಪ್ಪ ಕಕ್ಕಳಮೇಲಿ, ಮಡಿವಾಳಪ್ಪಗೌಡ ಪಾಟೀಲ, ಧಾನು ಯರನಾಳ, ಶ್ರೀಶೈಲ ಮಲ್ಲಿಕಾರ್ಜುನಮಠ, ಅಪ್ಪೋಜಿ ದೇಸಾಯಿ, ಶಿವನಗೌಡ ಪಾಟೀಲ(ಯರನಾಳ), ಸೇರಿದಂತೆ ಮಹಿಳೆಯರು, ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

