ವಿಜಯಪುರ: ರಾಜ್ಯದಲ್ಲಿ ಕೇವಲ ಮಳೆಯ ಬರ ಬಿದ್ದಿಲ್ಲ, ಅಭಿವೃದ್ಧಿಯ ಬರವೂ ಸಿದ್ದರಾಮಯ್ಯ ಸರ್ಕಾರದಲ್ಲಿ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಪೂರ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅನುದಾನಿತ ಈಗಾಗಲೇ ಕೆಲಸ ಮಾಡುತ್ತಿರುವ ಅನುದಾನಿತ ಪದವಿ ಪೂರ್ವ ಉಪನ್ಯಾಸಕರುಗಳು ಕಡ್ಡಾಯವಾಗಿ ೨೦ ಗಂಟೆಗಳ ಕಾರ್ಯಭಾರ ನಿರ್ವಹಿಸಬೇಕು. ಸಮೀಪದ ಇನ್ನೊಂದು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದ್ದಲ್ಲಿ ಅಲ್ಲಿ ಹೋಗಿ ಕಾರ್ಯ ನಿರ್ವಹಿಸಬೇಕು ಎಂಬ ಆದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿರುವುದು ತುಘಲಕ್ ಆಡಳಿತ ಮಾದರಿ ಆದೇಶ ಎಂದು ಕಿಡಿಕಾರಿದರು.
ಉಪನ್ಯಾಸಕರು ತಾವು ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಯಿಂದ ಮತ್ತೊಂದು ಶಿಕ್ಷಣ ಸಂಸ್ಥೆಗೆ ಹೋಗಿ ಕೆಲಸ ಮಾಡುವುದು ಅಸಾಧ್ಯವಾದ ಕೆಲಸ. ಸರ್ಕಾರ ಏಕಾಏಕಿ ಈ ರೀತಿಯ ಆದೇಶದಿಂದ ಮುಂದಿನ ತಿಂಗಳು ನಮ್ಮ ಸಂಬಳ ಬರುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿ ಉಪನ್ಯಾಸಕರು ಕಾರ್ಯನಿರ್ವಹಿಸಬೇಕಾಗಿ ಬಂದಿದೆ. ವರ್ಷದಲ್ಲಿ ೩ ಬಾರಿ ಪರೀಕ್ಷೆ ನಡೆಸಬೇಕು ಎಂದು ಆದೇಶ ಮಾಡಿದೆ. ಕರ್ನಾಟಕದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಕವಲುದಾರಿಯಲ್ಲಿದೆ. ರಾಜ್ಯದಲ್ಲಿ ೧೨೩೦ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, ೭೫೦ ಅನುದಾನಿತ ಪ.ಪೂ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದರೆ, ಇನ್ನೂ ೪೫೦೦ ಅನುದಾನರಹಿತ ಪ.ಪೂ.ಕಾಲೇಜುಗಳು ಸರ್ಕಾರ ಅನುದಾನ ಕೊಡುತ್ತದೆ ಎಂದು ಜಾತಕಪಕ್ಷಿಗಳಂತೆ ಕಾಯುತ್ತಿವೆ. ಸರ್ಕಾರ ೧೯೯೫ ರ ನಂತರದ ಅನುದಾನ ವಿಸ್ತರಣೆ ಮಾಡಬೇಕು ಎನ್ನುವ ಕೂಗು ಇದೆ. ಅದನ್ನು ಮೊದಲು ಮಾಡಲಿ ಎಂದರು.
ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ೩೦೦೦ ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲಾಗಿದೆ. ಶಿಕ್ಷಣದ ಕುರಿತು ನಿಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಬೇಕು. ಕರ್ನಾಟಕ ಪ.ಪೂ.ಶಿಕ್ಷಣ ಇಲಾಖೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಕೂಡಲೇ ಅನುದಾನಿತ ಉಪನ್ಯಾಸಕರಿಗೆ ಕಾರ್ಯಭಾರ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎನ್ನುವ ಕೂಗು ಇದೆ. ಅದನ್ನು ಸರ್ಕಾರ ಪರಿಗಣಿಸಬೇಕು. ಕಾರ್ಯಭಾರ ಅವಧಿ ೧೫ ಇದ್ದದ್ದನ್ನು ೧೬ ಮಾಡಿ ಆದೇಶ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದರು. ಅವರು ಮಾಡಲಿ ಒಂದು ವೇಳೆ ಈ ಸರ್ಕಾರ ತೊಲಗಿ ನಮ್ಮ ಸರ್ಕಾರ ಬಂದರೆ ನಾವು ಖಂಡಿತ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ಉದ್ದೇಶದಿಂದ ಉಚಿತ ಯೋಜನೆಗಳನ್ನು ನೀಡುತ್ತಿದ್ದಾರೆ. ಅಭಿವೃದ್ಧಿ ಕುಂಟಿತಗೊಂಡಿದೆ. ಸಿದ್ದರರಾಮಯ್ಯ ಒಂದೇ ಒಂದು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿಲ್ಲ. ಕೇವಲ ಹಿಂದಿನ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟನೆ ಮಾಡತ್ತಿದ್ದರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವ ವ್ಯವಸ್ಥೆಯನ್ನೇ ಉಳಿಸಿಕೊಳ್ಳಲು ಸಾಧ್ಯವಾಗದೆ ಈ ರೀತಿ ಆಡಳಿತ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಾಹೇಬಗೌಡ ಗೌರಿ, ಪದವಿ ಪೂರ್ವ ಉನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಬಿ.ಹೆಬ್ಬಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

