ವಿಜಯಪುರ: ನಗರದ ಮರಾಠಾ ವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವನ್ನು ಆಯೋಜಿಸಿದ ಜಿಲ್ಲಾ ಪಂಚಾಯತ ವಿಜಯಪುರ ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ದಿ ಶಿಕ್ಷಕರ ಕಲ್ಯಾಣ ನಿಧಿ, ಬೆಂಗಳೂರು ಹಾಗೂ ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಕರ ಇಲಾಖೆ ವಿಜಯಪುರ ರವರಿಂದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ-೨೦೨೩-೨೪ ಸಾಲಿನ ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲೆಯ ಅಲ್ -ಅಮಾನ್ ಬಾಲಕರ ಉರ್ದು ಪ್ರೌಢಶಾಲೆ, ವಿಜಯಪುರ ಶಿಕ್ಷಕರಾದ ಎಸ್.ಬಿ. ವಾಲಿಕಾರ ಶಿಕ್ಷಕ (ಕಲಾವಿದರು) ಭಾಗವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ನಮ್ಮ ಜಿಲ್ಲೆಯ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಹಾಗೂ ಈ ಕಾರ್ಯಕ್ರಮದಲ್ಲಿ ಎನ್.ಎಚ್. ನಾಗೂರ (ಡಿ.ಡಿ.ಪಿ.ಐ) ಹಾಗೂ ವಿಷಯ ಪರೀವೀಕ್ಷಕಿ ಶ್ರೀಮತಿ ಎಸ್.ಎ. ಅಳ್ಳಗಿ, ವಿ.ಆರ್. ಹಿರೇಮಠ ಡಿವೈಎಸ್ಪಿ, ಶ್ರೀಮತಿ ಟಿ.ಸಿ. ಕೋಲಾರ ಹಾಗೂ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ ಹಾಗೂ ಜಿಲ್ಲಾ ನೌ.ಸ. ಖಜಾಂಚಿ ಜುಬೇರ ಕೆರೂರ, ಪ್ರಾ.ಶಾ.ಶಿ.ಸ.ಜಿಲ್ಲಾದ್ಯಕ್ಷ ಶಿವರಾಜ ಬಿರಾದಾರ, ಎನ್.ಪಿ.ಎಸ್. ಅದ್ಯಕ್ಷ ಮಲ್ಲನಗೌಡ ಹಡಲಗೇರಿ ಮಹಾಂತೇಶ ಅಂಗಡಿ ಇನ್ನಿತರರು ಉಪಸ್ಥಿತರಿದ್ದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಶಾಲೆಯ ಶಿಕ್ಷಕರಾದ ಎಸ್.ಬಿ. ವಾಲಿಕಾರ ರವರಿಗೆ ಶಾಲೆಯ ವತಿಯಿಂದ ಹಾಗೂ ಸಂಸ್ಥೆಯ ಅದ್ಯಕ್ಷರಾದ ಎ.ಎಮ್. ಬಾಗವಾನ, ಕಾರ್ಯದರ್ಶಿ ಕೆ.ಎಸ್. ಸಾಂಗ್ಲಿಕರ, ನಿರ್ದೇಶಕರಾದ ಅತೀಕ ನಾಲಬಂದ, ಮುಖ್ಯ ಶಿಕ್ಷಕಿ ಶ್ರೀಮತಿ ಎನ್.ಬಿ. ಜಾಗೀರದಾರ ಹಾಗೂ ಶಿಕ್ಷಕ ವೃಂದ ಹಾಗೂ ಎಲ್ಲ ವಿದ್ಯಾರ್ಥಿಗಳು ಸಂಸ್ಥೆಯವರು ಅಭಿನಂದನೆ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment
