ವಿಜಯಪುರ: ಡಿ.೦೯ರಂದು ಮಧ್ಯಾಹ್ನ ೧೨-೩೦ ಗಂಟೆಗೆ ಕಂದಗಲ್ ಹನಮಂತರಾಯ ರಂಗ ಮಂದಿರ ವಿಜಯಪುರದಲ್ಲಿ ಆದರ್ಶ ಶಿಕ್ಷಕರ ವೇದಿಕೆ ವಿಜಯಪುರ ವತಿಯಿಂದ ಶೈಕ್ಷಣಿಕ ಚಿಂತನಾಗೋಷ್ಠಿ ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಚನ್ನವೀರ ದೇವರು, ಸಂಸ್ಥಾನ ಹಿರೇಮಠ ಕುಂಟೋಜಿ ಇವರು ವಹಿಸಲಿದ್ದಾರೆ. ಉದ್ಘಾಟಕರಾಗಿ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಬಿ. ಪಾಟೀಲ ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಟಿ ಬೂಬಾಲನ್, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್, ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ, ಮಹಾಂತೇಶ ಬಿರಾದಾರ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಎಂ ಎಂ ಸಿಂಧೂರ ಜಂಟಿ ನಿರ್ದೇಶಕರು ಬೆಳಗಾಂವ, ಎನ್,ಎಚ್. ನಾಗೂರ್ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ, ಶ್ರೀಮತಿ ಪ್ರಮೋದಿನಿ ಬಳೊಲಮಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗ್ರಾಮೀಣ ವಲಯ ವಿಜಯಪುರ, ಬಸವರಾಜ್ ತಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಗರ ವಲಯ, ಶ್ರೀಮತಿ ಸಾಯಿರಾಬಾನು ಖಾನ್ ನಿವೃತ್ತ ಉಪ ನಿರ್ದೇಶಕರು ವಿಜಯಪುರ, ಸಿದ್ದಣ್ಣ ಸಕ್ರಿ ಆಯುಕ್ತರು ಭಾರತ್ ಸ್ಕೌಟ್ ಮತ್ತು ಗೈಡ್ಸ್, ಶರಣು ಶಬರದ ಅಧ್ಯಕ್ಷರು ಜಿಲ್ಲಾ ಯುವ ಪರಿಷತ್ ಉಪಸ್ಥಿತರಿರುವರು.
ಉಮೇಶ ಕೌಲಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲಿ ತಾಲೂಕು, ನಗರ, ಗ್ರಾಮೀಣ ಮಟ್ಟದ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತರಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ದೋರಣಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಡಿ.೯ ರಂದು ಶೈಕ್ಷಣಿಕ ಚಿಂತನಗೋಷ್ಠಿ, ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ
Related Posts
Add A Comment
