ಆಲಮಟ್ಟಿ: ಗ್ರಾಮದಲ್ಲಿ ಯುವಕನ ಮೇಲೆ ಚೂರಿ ಇರಿದ ಘಟನೆ ಬುಧವಾರ ಸಂಜೆ ಜರುಗಿದೆ.
ಅಭಿಲಾಷ ಕಾಳೆ ಚಾಕು ಇರಿತಕ್ಕೆ ಒಳಗಾದ ಯುವಕ.
ಮುದ್ದೇಬಿಹಾಳ ಪಟ್ಟಣದ ನಾಲ್ವರು ಯುವಕರು ಆಲಮಟ್ಟಿ ಉದ್ಯಾನ ವೀಕ್ಷಣೆಗೆ ಆಲಮಟ್ಟಿ ಪೆಟ್ರೋಲ್ ಪಂಪ್ ನಿಂದ ರಾಕ್ ಉದ್ಯಾನಕ್ಕೆ ತೆರಳುತ್ತಿದ್ದ ಯುವತಿಯರ ಗುಂಪಿಗೆ ಚುಡಾಯಿಸಿದ್ದಾರೆ. ಆ ರೀತಿ ಮಾಡದಂತೆ ಅಭಿಲಾಷ ಸೇರಿದಂತೆ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರಿಂದ ಕುಪಿತಗೊಂಡ ಯುವಕರು ಮತ್ತು ಇವರ ಮಧ್ಯೆ ವಾಗ್ಯುದ್ಧ ನಡೆದಿದೆ.
ಸಂಜೆ ಆರೋಪಿಗಳು ಮರಳಿ ಆಗಮಿಸಿ ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿ ಇರುವ ಪ್ರವೇಶ ದ್ವಾರದ ಬಳಿ ಕುಳಿತಿದ್ದ ಅಭಿಷೇಕ ಕಾಳೆ ಗೆ ನಾಲ್ವರು ಸೇರಿ ಜಾತಿ ನಿಂದನೆ ಮಾಡಿ ಹೊಟ್ಟೆ ಮತ್ತೀತರ ಕಡೆ ಚಾಕು ಹಾಕಿದ್ದಾರೆ ಎಂದು ಗುರುವಾರ ಈ ಪ್ರಕರಣದ ತನಿಖೆಗೆ ಆಗಮಿಸಿದ್ದ ವಿಜಯಪುರ ಡಿವೈಎಸ್ಪಿ ಜಿ.ಎಚ್. ತಳಕಟ್ಟಿ ತಿಳಿಸಿದರು.
ಈ ಕುರಿತು ಆರೋಪಿಗಳಾದ ದೀಪಕ ಲಕ್ಷ್ಮಣ ರಾಠೋಡ, ಕಾರ್ತಿಕ ಮಂಜುನಾಥ ಪೇಟೇಕರ, ಮನೋಜ ಮುತ್ತಣ್ಣ ದೊಡಮನಿ, ಕಿಶೋರ ರಮೇಶ ರಾಠೋಡ ಅವರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಕೊಲೆ ಆರೋಪ ಹಾಗೂ ಜಾತಿ ನಿಂದನೆ ಪ್ರಕರಣ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
