ಮುದ್ದೇಬಿಹಾಳ: ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಎಲ್ಲಂದರಲ್ಲಿ ದ್ವಿಚಕ್ರ ವಾಹನಗಳಿಗೆ ಕರ್ಕಶ ಶಬ್ಧಮಾಡುವ ಸೈಲೆನ್ಸ್ರ್ ಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದವರಿಗೆ ಇಲ್ಲಿನ ಪಿಎಸ್‌ಐ ಸಂಜೀವ್ ತಿಪರೆಡ್ಡಿ ಮತ್ತೊಮ್ಮೆ ಶಾಕ್ ನೀಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯೇ ಕರ್ಕಶ ಶಬ್ಧ ಮಾಡುವ ಸೈಲೆನ್ಸ್ರ್ ಗಳನ್ನು ಕಳಚುವಂತೆ ಮತ್ತು ಕಳಚದವರಿಗೆ ಸೂಕ್ತ ಶಿಕ್ಷೆ ವಿಧಿಸುವದಾಗಿ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದರು. ಇದಕ್ಕೆ ಕ್ಯಾರೇ ಎನ್ನದ ಎರಡು ಕರ್ಕಶ ಶಬ್ಧ ಮಾಡುವ ವಾಹನಗಳನ್ನು ಗುರುವಾರ ಸೀಸ್ ಮಾಡಿದ್ದಾರೆ. ಠಾಣೆಯಲ್ಲಿಯೇ ಶಬ್ಧ ಮಾಡುವ ಸೈಲೆನ್ಸ್ರ್ ಗಳನ್ನು ಕಳಚಿಸಿ ದಂಡದ ಬಿಸಿ ಮುಟ್ಟಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಿಎಸ್‌ಐ ಸಂಜೀವ, ಇಂತಹ ಅನ್ನೂ ಹಲವು ಪುಂಡರ ವಾಹನಗಳು ಪೊಲೀಸರ ಕಣ್ತಪ್ಪಿಸರ ಕಣ್ತಪ್ಪಿಸಿ ಅಲ್ಲಲ್ಲಿ ಓಡಾಡುತ್ತಿವೆ. ನಮ್ಮ ಸಿಬ್ಬಂದಿ ತಂಡ ಈಗಾಗಲೇ ಈ ಪುಂಡರಿಗೆ ಬಲೆ ಬೀಸಿದೆ. ಸಿಕ್ಕಲ್ಲಿ ಯಾರೇ ಇದ್ದರೂ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಕೈಗೊಂಡು ನೇರವಾಗಿ ನ್ಯಾಯಾಲಯಕ್ಕೇ ಕಳುಹಿಸುವದಾಗಿ ಮತ್ತು ಈ ರೀತಿ ಕಾನೂನು ಬಾಹಿರವಾದ ಸೈಲೆನ್ಸ್ರ್ ಗಳನ್ನು ಅಳವಡಿಸಿಕೊಂಡು ವಾಹನ ರಿಪೇರಿಗೆ, ಸರ್ವೀಸ್ ಗೆ ಬಂದಲ್ಲಿ ಕೂಡಲೇ ಠಾಣೆಗೆ ಕರೆ ಮಾಡಲು ದ್ವಿಚಕ್ರ ವಾಹನಗಳ ಗ್ಯಾರೇಜ್ ಮತ್ತು ಶೊರೂಂ ನ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರಿಗೆ ಸೂಚಿಸಿದ್ದಾರೆ. ಇಂತಹ ವಾಹನಗಳು ಬಂದಾಗ ಪೊಲೀಸ್ ಠಾಣೆಗೆ ತಿಳಿಸದೇ ರಿಪೇರಿ ಮಾಡುವಾಗ ನಮ್ಮ ಸಿಬ್ಬಂದಿಯ ಕೈಗೆ ಸಿಕ್ಕಲ್ಲಿ ಅವರ ಮೇಲೂ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ವೇಳೆ ಸಿಬ್ಬಂದಿಗಳಾದ ಚಿದಾನಂದ ಸುರಗಿಹಳ್ಳಿ, ಯಾಸೀನ ಅತ್ತಾರ ಮತ್ತು ವಿರೇಶ ಹಾಲಗಂಗಾಧರಮಠ ಇದ್ದರು.
Subscribe to Updates
Get the latest creative news from FooBar about art, design and business.
ಕರ್ಕಶ ಶಬ್ಧದ ಸೈಲೆನ್ಸರ್ ಕಳಚಿಸಿ ದಂಡದ ಬಿಸಿ ಮುಟ್ಟಿಸಿದ ಪಿಎಸೈ
Related Posts
Add A Comment

