ಮೋರಟಗಿ: ವಿದ್ಯುತ್ ಕಳ್ಳತನ ಮಹಾ ಅಪರಾಧ ಎಂದು ಹಲವಾರು ಬಾರಿ ಗ್ರಾಮದಲ್ಲಿ ಡಂಗುರ ಸಾರುವ ಮೂಲಕ ಜಾಗ್ರತಿ ಮೂಡಿಸಿದರೂ ಕೂಡಾ ರಾತ್ರಿವೇಳೆ ನೇರವಾಗಿ ಎಲ್ ಟಿ ಲೈನ್ ಗೆ ಹುಕ್ಕು ಹಾಕುತ್ತಿರುವ ಮಾಹಿತಿಗಳು ಕೇಳಿ ಬರುತ್ತಿವೆ ವಿದ್ಯುತ್ ಕಳ್ಳತನ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಖಾಧಿಕಾರಿ ಆನಂದ ಕವಲಗಿ ಹೇಳಿದರು.
ಗುರುವಾರ ಸಮೀಪದ ನಾಗಾವಿ, ಗೊರವಗುಂಡಗಿ, ಕೆರೂರ, ಬಂಟನೂರ, ಗುತ್ತರಗಿ, ಗ್ರಾಮಗಳಲ್ಲಿ ವಿದ್ಯುತ್ ಬಾಕಿ ವಸೂಲಿ ಹಾಗೂ ಅನಧಿಕೃತ ವಿದ್ಯುತ್ ಕಾರ್ಯಾಚರಣೆಯಲ್ಲಿ ಹೀಟರ್, ವೈಯರ್, ವಶಪಡಿಸಿಕೊಂಡು ಅವರು ಮಾತನಾಡಿದರು.
ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯುತ್ ಬಹಳಷ್ಟು ಅವಶ್ಯಕತೆ ಇದ್ದು ಅದನ್ನು ಮಿತವಾಗಿ ಬಳಸಿ ಅವಶ್ಯಕತೆ ಮಾತ್ರ ಉಪಯೋಗಿಸಿ ಅನವಶ್ಯಕವಾಗಿ ಹಗಲಿನಲ್ಲಿ ಬಲ್ಬ ಬಳಸುವುದು ನಿಲ್ಲಿಸಿ ಮತ್ತು ನಿಗದಿ ಪಡಿಸಿರುವ ದಿನಾಂಕದಂದು ವಿದ್ಯುತ್ ಬಾಕಿ ಹಣ ಸಂದಾಯ ಮಾಡಬೇಕು. ಮೆನ್ ಲೈನ್ ಅಥವಾ ಎಲ್ ಟಿ ಲೈನ್ ತಂತಿಗಳ ಹತ್ತಿರ ಗಿಡ ಮರ ಬೆಳೆಯದ ಹಾಗೆ ನೋಡಿಕೊಳ್ಳಬೇಕು. ಹಾಗೇನಾದರೂ ಗಿಡ ಮರಗಳು ತಂತಿಗೆ ತಗಲುವ ಹಂತದಲ್ಲಿ ಇದ್ದರೆ ಕೂಡಲೇ ನಮ್ಮ ಸಿಬ್ಬಂದಿಗಳ ಗಮನಕ್ಕೆ ತರಬೇಕು. ಮತ್ತು ವೈಯರ್ ಮೆನ್ ಜೊತೆ ಸಹಕಾರದಿಂದ ನಡೆದುಕೊಳ್ಳಬೇಕು. ತಮ್ಮ ಮನೆಯ ಮುಂಭಾಗ ಇರುವ ವಿದ್ಯುತ್ ಕಂಬಗಳಿಗೆ ದನಕರುಗಳನ್ನು ಕಟ್ಟಬಾರದು. ಹಾಗೂ ನಿಮ್ಮ ಮಕ್ಕಳನ್ನು ಕಂಬದ ಅಕ್ಕ ಪಕ್ಕ ಆಟವಾಡಲು ಬಿಡಬಾರದು ಎಂದು ಸಲಹೆ ನೀಡಿದರು.
ಅನಧಿಕೃತವಾಗಿ ಬಳಸುತ್ತಿರುವ ಮನೆಗಳ ಪಂಪಸೆಟ್ ಗಳ ಹಾಗೂ ವಿದ್ಯುತ್ ಬಾಕಿ ಇರುವ ವಾಯರ್ ಗಳನ್ನು ವಶಪಡಿಸಿಕೊಂಡರು.
ವಿದ್ಯುತ್ ಕಾರ್ಯಾಚರಣೆಯಲ್ಲಿ ಪವರ್ ಮ್ಯಾನಗಳಾಡ ನಬಿ ಪಟೇಲ ಗರಗುಂಡಗಿ, ಗೌತಮ್ ಸಿಂಗ್ ಕಿಲ್ಲೆದಾರ್, ಆಶಿಫ್ ಮನಿಯಾರ. ದೇವಿಂದ್ರ ಮಾಡಿವಾಲ್ಕರ್, ನಝೀರ್ ಮೊಕಾಶಿ, ಮಲ್ಲು ದೇಸಾಯಿ, ಗುರು ಅಗಸರ, ಹಣಮಂತರಾಯ ಪಾಟಿಲ್ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

