Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ

ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮುಂಬೈನಿಂದ ಶಬರಿಮಲೆಗೆ ಉಪೇಂದ್ರಸ್ವಾಮಿ ಪಾದಯಾತ್ರೆ
(ರಾಜ್ಯ ) ಜಿಲ್ಲೆ

ಮುಂಬೈನಿಂದ ಶಬರಿಮಲೆಗೆ ಉಪೇಂದ್ರಸ್ವಾಮಿ ಪಾದಯಾತ್ರೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

೨೦೦೦ಕಿ.ಮೀ ದೂರ | ೫೫ ದಿನಗಳ ಪಯಣ | ಸತತ ೪೫ ವರ್ಷಗಳಿಂದ ಮಾಲೆಧಾರಣೆ | ೨೪ ವರ್ಷದಿಂದ ಪಾದಯಾತ್ರೆ


ಸಿಂದಗಿ: ನಿರಂತರವಾಗಿ ೨೪ ವರ್ಷಗಳಿಂದ ಸುಮಾರು ೨೦೦೦ಕಿ.ಮೀ ೫೫ ದಿನಗಳವರೆಗೆ ಬರಿಗಾಲಿನಲ್ಲಿ ಪಾದಯಾತ್ರೆಯ ಮೂಲಕ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದರುಶನ ಪಡೆಯುವ ಭಕ್ತರೊಬ್ಬರು ಸಿಂದಗಿ ನಗರಕ್ಕೆ ಗುರುವಾರ ಆಗಮಿಸಿದ್ದರು.
ಅವರನ್ನು ಪಟ್ಟಣದ ಎಪಿಎಂಸಿ ಯಾರ್ಡಿನ್ ಧರ್ಮಶಾಸ್ತಾ ಸನ್ನಿಧಾನಂನ ಅಯ್ಯಪ್ಪಸ್ವಾಮಿ ಮಾಲಾಧಾರಿ ಕಿರಣ ಶಿವಸಿಂಪಿ ಗುರುಸ್ವಾಮಿ ಹಾಗೂ ವ್ರತಧಾರಿಗಳು ಅವರನ್ನು ಸ್ವಾಗತಿಸಿ, ಭಕ್ತಿಪೂರ್ವಕವಾಗಿ ಬೀಳ್ಕೊಟ್ಟರು.
ಉಪೇಂದ್ರಸ್ವಾಮಿ ಪೂಜಾರಿ ಎಂಬುವವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿ. ಇವರೇ ಈ ಯಾತ್ರೆಯ ಭಕ್ತರು. ಹಲವು ವರ್ಷಗಳ ಹಿಂದಯೇ ಜೀವನೋಪಾಯಕ್ಕಾಗಿ ಉದ್ಯೋಗವನ್ನು ಅರಸಿಕೊಂಡು ದೂರದ ಮುಂಬೈ ಪಟ್ಟಣಕ್ಕೆ ತೆರಳಿದ್ದರು. ೧೯೮೯ರಲ್ಲಿ ಮುಂಬೈನಲ್ಲಿ ಯಾರೋ ಶಬರಿಮಲೆ ಸ್ವಾಮಿ ಅಯ್ಯಪ್ಪನ ವ್ರತ ಆಚರಣೆ ಮಾಡು, ಮಾಲೆ ಧರಿಸು ಎಂದು ಹೇಳಿದ್ದಕ್ಕಾಗಿ ಭಕ್ತಿಯಿಂದ ಮಾಲೆ ಧರಿಸಿ ಸು.೩-೪ ವರ್ಷಗಳವರೆಗೆ ಶಬರಿಗೆ ಹೋಗಿ ಬಂದಿದ್ದರು. ೪೫ ವರ್ಷಗಳಿಂದ ಅಯ್ಯಪ್ಪ ಸ್ವಾಮಿಯ ಮಾಲೆಯನ್ನು ಧರಿಸುತ್ತಲೇ ಬಂದಿದ್ದಾರೆ. ಇವರು ಶಬರಿಮಲೆಗೆ ಕಾಲ್ನಡಿಗೆಯ ಮುಖಾಂತರ ಬರುತ್ತೇನೆ ಎಂದು ೧೯೯೩ರಲ್ಲಿ ಹರಕೆಯನ್ನು ಹೋರುತ್ತಾರಂತೆ, ಅಂದಿನಿಂದ ೧೯೯೯ರಿಂದ ಈ ಅಯ್ಯಪ್ಪನ ಭಕ್ತ್ತ ಸತತವಾಗಿ ಪಾದಯಾತ್ರೆ ಮಾಡುತ್ತಿದ್ದು, ಪ್ರಸ್ತುತ ೨೪ ವರ್ಷಗಳಾಯಿತು. ಪ್ರತಿಬಾರಿಯೂ ಬರಿಗಾಲಿನಲ್ಲಿ ಮುಂಬೈನಿಂದ ಪ್ರಾರಂಭವಾಗುವ ಪಾದಯಾತ್ರೆಯು ಕರ್ನಾಟಕ, ಆಂಧ್ರ, ತಮಿಳುನಾಡು ಮುಖಾಂತರ ಕೇರಳದ ಶಬರಿಮಲೆಗೆ ಜನೆವರಿ ತಿಂಗಳ ಮಕರ ಸಂಕ್ರಮಣದಂದು ಕೊನೆಗೊಳ್ಳುತ್ತದೆ.
*ಸ್ಫೂರ್ತಿ ನೀಡುತ್ತಿರುವ ಪಾದಯಾತ್ರೆ*
ವಾಹನ ಸೌಲಭ್ಯಗಳಿಲ್ಲದ ಕಾಡು, ಪರ್ವತ, ಸರಿಯಾಗಿಲ್ಲದ ರಸ್ತೆ ಹಾಗೂ ತಗ್ಗು ದಿನ್ನೆಗಳ ಮದ್ಯೆದಲ್ಲಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವ ಈ ಭಕ್ತ ಹಲವಾರು ನಗರಗಳನ್ನು ಪ್ರವೇಶ ಮಾಡುತ್ತಿದ್ದಂತೆ ಆ ಪ್ರದೇಶದ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಭಕ್ತಿಭಾವದಿಂದ ಸ್ವಾಗತಿಸಿ, ಪ್ರಸಾದವನ್ನುಣಿಸಿ ತುಂಬು ಹೃದಯದಿಂದ ಬೀಳ್ಕೊಡುತ್ತಾರೆ. ವರ್ಷದಿಂದ ವರ್ಷಕ್ಕೆ ಇವರಿಗೆ ಹಲವಾರು ಅಯ್ಯಪ್ಪಸ್ವಾಮಿ ವ್ರತಧಾರಿಗಳು ಸ್ಪೂರ್ತಿ ನೀಡುತ್ತಿದ್ದಾರೆ.
ಸಿಂದಗಿ ತಾಲೂಕಿನ ಕೆರೂಟಗಿ ಗ್ರಾಮದ ಅರುಣಕುಮಾರ ಬಿರಾದಾರ ಎನ್ನುವ ವ್ರತಧಾರಿ ಎರಡನೆಯ ಬಾರಿ ಹಾಗೂ ಮೊದಲ ಬಾರಿಗೆ ಮುಂಬೈಯಿಂದ ಅವರ ಜೊತೆಯಾಗಿ ಪಾಂಡು ತಿಮ್ಮಪ್ಪ ಶೆಟ್ಟಿ ಇವರ ಪಾದಯಾತ್ರೆ ಸ್ಪೂರ್ತಿಯಾಗಿದ್ದು, ಉಪೇಂದ್ರಸ್ವಾಮಿ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
ನಗರವನ್ನು ಪ್ರವೇಶಿಸಿದ ಉಪೇಂದ್ರ ಸ್ವಾಮಿಯನ್ನು ಪಟ್ಟಣದ ಎಪಿಎಂಸಿ ಯಾರ್ಡಿನ ರೈತಭವನದಲ್ಲಿರುವ ಶ್ರೀ ಧರ್ಮಶಾಸ್ತಾ ಸನ್ನಿಧಾನಂ ಮಾಲಾಧಾರಿಗಳು ಕಿರಣ ಶಿವಸಿಂಪಿ ಗುರುಸ್ವಾಮಿಗಳು, ಆನಂದ ಮಲ್ಲೇದ, ಬಸವರಾಜ ನಾವಿ, ಪ್ರವೀಣ, ಅರವಿಂದ ವಸ್ತ್ರದ, ಹಣಮಂತ ಕುಂಬಾರ, ರಾಜು ಬಡಿಗೇರ, ರಾಜು ಉಪ್ಪಿನ, ಶಾಂತೂ ಬಿರಾದಾರ, ಶಿವಾನಂದ ಪರಸಪ್ಪಗೋಳ, ರಾಘವೇಂದ್ರ ಕುಂಬಾರ ಗುರುಸ್ವಾಮಿಗಳ ನೇತೃತ್ವದಲ್ಲಿನ ತಂಡದ ವ್ರತಧಾರಿಗಳು ಭಕ್ತಿಯಿಂದ ಸ್ವಾಗತಿಸಿ ನಗರದ ಪ್ರಮುಖ ರಸ್ತೆಗಳ ಮೂಲಕ ಭಕ್ತಿಯಿಂದ ಅಯ್ಯಪ್ಪಸ್ವಾಮಿಯ ಜಯಘೋಷದೊಂದಿಗೆ ಮುಂದಿನ ಪಯಣಕ್ಕೆ ಬೀಳ್ಕೊಟ್ಟರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ

ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ

ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಉದ್ಯೋಗದ ಬದುಕಿಗೆ ಬೇಕಿವೆ ಕೌಶಲ್ಯಗಳು

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮೇ.೪ರಿಂದ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ನಾಗೂರದಲ್ಲಿ ಗದ್ದೆಮ್ಮದೇವಿ ಜಾತ್ರಾ ಮಹೋತ್ಸವ ಸಡಗರ
    In (ರಾಜ್ಯ ) ಜಿಲ್ಲೆ
  • ರೈತ ಮುಖಂಡನ ಪುತ್ರ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ
    In (ರಾಜ್ಯ ) ಜಿಲ್ಲೆ
  • ಉದ್ಯೋಗದ ಬದುಕಿಗೆ ಬೇಕಿವೆ ಕೌಶಲ್ಯಗಳು
    In ವಿಶೇಷ ಲೇಖನ
  • ಮಣ್ಣಿನ ಆರೋಗ್ಯ ಕಾಪಾಡಲು ಸಾವಯವ ಕೃಷಿ ಅಗತ್ಯ :ಕನ್ನೇರಿ ಶ್ರೀ
    In (ರಾಜ್ಯ ) ಜಿಲ್ಲೆ
  • ಸಿದ್ದಾಪುರ ಪಿಕೆಪಿಎಸ್ ಚುನಾವಣೆಯಲ್ಲಿ ಸವದಿ ಗೆಲುವು
    In (ರಾಜ್ಯ ) ಜಿಲ್ಲೆ
  • ಹೊರ್ತಿ ರೇವಣಸಿದ್ದೇಶ್ವರ ದೇಗುಲಕ್ಕೆ ರಾಜ್ಯಪಾಲರ ಭೇಟಿ
    In (ರಾಜ್ಯ ) ಜಿಲ್ಲೆ
  • ಆದಿ ಶಂಕರಾಚಾರ್ಯರ ಜಯಂತಿ ಭಕ್ತಿಭಾವದಿಂದ ಆಚರಣೆ
    In (ರಾಜ್ಯ ) ಜಿಲ್ಲೆ
  • ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರು, ಸದಸ್ಯರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಏ.೨೪ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಹಾಗೂ ಗೀತ ಗಾಯನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.