ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಎನ್.ಟಿ ಅವರ ಮೇಲೆ ನಡೆದ ಹಲ್ಲೆ
ಮುದ್ದೇಬಿಹಾಳ: ಹೆಲ್ಮೆಟ್ ಧರಿಸದ ವಿಷಯವಾಗಿ ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಎನ್.ಟಿ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಇಲ್ಲಿನ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಮಂಗಳವಾರ ಕೋರ್ಟ ಕಲಾಪದಿಂದ ಹೊರಗುಳಿದು, ನ್ಯಾಯಾಲಯದಿಂದ ತಹಶೀಲ್ದಾರ ಕಚೇರಿಯವರೆಗೂ ಸಮವಸ್ತ್ರ ಸಹಿತವಾಗಿ ಘಟನೆಗೆ ಸಂಬಂಧಿಸಿದವರ ವಿರುದ್ಧ ಧಿಕ್ಕಾರ ಕೂಗುತ್ತ ಕಾಲ್ನಡಿಗೆಯ ಮೂಲಕ ತಹಶೀಲ್ದಾರ ಕಚೇರಿಯವರೆಗೂ ಸಾಗಿ, ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ, ಗೃಹ ಸಚೀವರಿಗೆ ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಕ್ರತ್ಯದಲ್ಲಿ ಭಾಗಿಯಾದ ೬ ಜನ ಪೊಲೀಸರ ಮೇಲೆ ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮಾತನಾಡಿ, ಸಮಾಧಾನದ ವಿಷಯಕ್ಕೆ ಪೊಲೀಸರು ಕಾನೂನನ್ನು ಕೈಗೆತ್ತಿಕೊಂಡಿದ್ದು ಅಕ್ಷಮ್ಯ ಅಪರಾಧ. ಇಲ್ಲಿ ಹೆಲ್ಮೆಟ್ ಧರಿಸದ ವಕೀಲ ಪ್ರೀತಂ ದಂಡ ಪಾವತಿಸೋಕೆ ಸಿದ್ಧವಾಗಿದ್ದರೂ ದಂಡ ಪಾವತಿಸಿಕೊಳ್ಳದೇ ದರ್ಪ ತೋರಿ, ಇವರು ಮಾಡಿದ್ದೇ ಸರಿ ಎನ್ನುವ ರೀತಿ ಬಿಂಬಿಸಿ ಪೈಪಿನಿಂದ, ಭರ್ಮಪ್ಪಾದಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡದ್ದಾರೆ. ತಪ್ಪಿತಸ್ಥರ ಮೇಲೆ ನ್ಯಾಯವಾದಿಗಳ ಸಂಘ ದೂರು ಸಲ್ಲಿಸಿದರೂ ಪೊಲೀಸರು ಮಾತ್ರ ತಮ್ಮ ಸಿಬ್ಬಂದಿ ಎಂದು ಉದಾಸೀನತೆ ತೋರಿ ತಪ್ಪಿತಸ್ಥರನ್ನು ಬಂಧಿಸಿಲ್ಲ. ಘಟನೆ ವಿಕೋಪಕ್ಕೆ ತಿರುಗಿದಾಗ ಕೇವಲ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದಾರೆ. ಇನ್ನುಳಿದ ಆರೋಪಿತರು ತಮ್ಮ ಮುಂದೆಯೇ ಇದ್ದರೂ ಬಂಧಿಸಲು ಮುಂದಾಗುತ್ತಿಲ್ಲ. ಇದಕ್ಕೆಲ್ಲ ಮೇಲಾಧಿಕಾರಿಗಳ ವೈಫಲ್ಯವೇ ಕಾರಣ. ಇದೆಲ್ಲವನ್ನು ನೋಡಲಾಗಿ ಪೊಲೀಸರೆ ಕಾನೂನು ಕೈಗೆತ್ತಿಕೊಂಡು ವಕೀಲರ ಮೇಲೆ ಹಲ್ಲೆ ನಡೆಸಲು ಮುಂದಾದರೆ ಜನಸಾಮಾನ್ಯರ ಗತಿ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಹಾಗಾಗಿ ವಕೀಲರಿಗೆ ಸೂಕ್ತ ಭದ್ರತೆ ಒದಗಿಸುವ ಕಾನೂನುನ್ನು ಕೂಡಲೇ ಜಾರಿ ಮಾಡುವ ಮೂಲಕ ಈ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಎಸ್.ಎಸ್.ಹೂಗಾರ, ಎಸ್.ಎಂ.ಕಿಣಗಿ, ಬಿ.ಎ.ನಾಡಗೌಡರ, ಎನ್.ಆಯ್.ಕೇಸಾಪೂರ, ಶ್ರೀದೇವಿ ರಾಜೂರ, ಎಸ್.ಆರ್.ಅಮರಣ್ಣವರ, ಆರ್.ಎಸ್.ತುಪ್ಪದ, ಎಸ್.ಸಿ.ಹಿರೇಮಠ, ಎನ್.ಆರ್.ಮೊಕಾಶಿ, ಪಿ.ಬಿ.ಗೌಡರ, ಚೇತನ ಶಿವಶಿಂಪಿ, ಶಬ್ಬೀರ ಬಾಗಲಕೋಟ, ಎಸ್.ಎಚ್.ಚಳ್ಳಗಿ, ಎನ್.ಬಿ.ಮುದ್ನಾಳ, ಎಲ್.ಎಸ್.ಮೇಟಿ, ಎಚ್.ಎ.ಮೇಟಿ, ಎಚ್.ವಾಯ್.ಪಾಟೀಲ, ಎಚ್.ಜಿ.ನಾಗೋಡ, ಬಿ.ಎಂ.ಮುಂದಿನಮನಿ, ಎಂ.ಬಿ.ಬಿರಾದಾರ, ಹಸೀನಾ ಅನಂತಪೂರ, ಮಹಾಂತಗೌಡ ಬಿರಾದಾರ, ಪಿ.ಬಿ.ಮಾತೀನ, ಮಹಾಂತಗೌಡ ಪಾಟೀಲ ಸೇರಿದಂತೆ ಮತ್ತಿತರ ನ್ಯಾಯವಾದಿಗಳು ಭಾಗಿಯಾಗಿದ್ದರು.

