ಕೊಲ್ಹಾರ: ಹುಬ್ಬಳ್ಳಿ-ಹುಮನಾಬಾದ ರಾಷ್ಟೀಯ ಹೆದ್ದಾರಿ ೨೧೮ರ ರಸ್ತೆಯ ಮೂಲಕ ಹಲವಾರು ವಾಹನಗಳ ಸಂಚಾರ ದಟ್ಟಣೆ ದಿನನಿತ್ಯ ಅಧಿಕವಾಗುತ್ತಾ ಸಾಗುತ್ತಿದೆ.
ಈ ರಸ್ತೆಯ ಮಧ್ಯಭಾಗದಲ್ಲಿ ಕೊಲ್ಹಾರ ಎಂಬ ತಾಲೂಕು ಕೇಂದ್ರದ ಪಟ್ಟಣ ಪ್ರದೇಶವನ್ನು ಒಳಪ್ರವೇಶಿಸುವಾಗ ಅಥವಾ ಊರ ಜನರು ಹೆದ್ದಾರಿಯನ್ನು ಕೂಡಿಕೊಳ್ಳುವಾಗ ತಮ್ಮ ಪ್ರಾಣವನ್ನು ಕೈಯಲ್ಲಿಯೇ ಹಿಡಿದುಕೊಂಡು ಸಾಗುವ ಜನರಿಗೆ ನಿತ್ಯ ನರಕಯಾತನೆಯಾಗಿದೆ.
ಹುಬ್ಬಳ್ಳಿ ಮೂಲಕ ಬರುವಾಗ ಯುಕೆಪಿಯಿಂದ ಎರಡು ಕಿ.ಮೀ ಬಂದರೆ ವಿಜಯಪೂರದಿಂದ ಬರುವಾಗ ಉಪ್ಪಲದಿನ್ನಿ ಕ್ರಾಸ್‌ನಿಂದ ೧.೫ ಕಿ.ಮೀ ಬಂದರೆ ಕೊಲ್ಹಾರ ಪುರ ಪ್ರವೇಶದ ರಹದಾರಿ ಸಿಗುತ್ತದೆ.ಈ ದಾರಿಯ ಮೂಲಕ ಒಳಗಡೆ ಸಂಚಾರ ಮಾಡುವಾಗ ಜಾಗೃತೆಯಿಂದ ಮಾಡುವಂತಹ ಅನಿವಾರ್ಯ ಪರಿಸ್ಥಿತಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಿಸಿದ್ದಾರೆ. ಅಲ್ಲದೇ ಜನರ ಜೀವದ ಜೊತೆ ಚೆಲ್ಲಾಟವಾಡುವಂಥಹ ಪರಿಸ್ಥಿತಿ ತಂದೊಡ್ಡಿದ್ದಾರೆ ಇದಕ್ಕೆ ಪರಿಹಾರ ಯಾವಾಗ ಎನ್ನುವ ಯಕ್ಷ ಪ್ರಶ್ನೆ ಇಲ್ಲಿನ ನಾಗರಿಕರಲ್ಲಿ ಮೂಡತೊಡಗಿದೆ.
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ಈ ರಸ್ತೆಯ ಹೆದ್ದಾರಿ ನಿರ್ಮಾಣದ ಗುತ್ತಿಗೆದಾರ ರಾಜ್‌ಗ್ರುಪ್ ಕಂಪನಿಯ ವ್ಯವಸ್ಥಾಪಕ ಮಂಡಳಿಯವರು ಸ್ಥಳಿಯ ಯುವಕರು ಹೋರಾಟ ಮಾಡಿದಾಗ ಯುಕೆಪಿಯಿಂದ ಕೊಲ್ಹಾರ ಪಟ್ಟಣದವರೆಗೆ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆ ಭರವಸೆಗೆ ಹಲವು ವರ್ಷಗಳು ಕಳೆದರೂ ಭರವಸೆಯಾಗಿಯೇ ಉಳಿದಿದೆ. ಸರ್ವಿಸ್ ರಸ್ತೆಯ ಕನಸು ನನಸಾಗುವದು ಯಾವಾಗ ಎನ್ನುವುದಕ್ಕೆ ಅಧಿಕಾರಿಗಳು ಉತ್ತರಿಸದೇ ಮೂಕವಿಸ್ಮಿತರಾಗಿರುವುದು ಜನರನ್ನು ಅನುಮಾನ ಮೂಡಿಸಿದೆ.
ಕೊಲ್ಹಾರ ಪುರ ಪ್ರವೇಶ ಮಾಡುವಾಗ ದಕ್ಷಿಣ ಉತ್ತರ ಭಾಗಕ್ಕೆ ಪಶ್ಚಿಮ ಭಾಗದಿಂದ ಹಳೆಗ್ರಾಮಕ್ಕೆ ಮತ್ತು ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡಿಕೊಳ್ಳುತ್ತದೆ. ಪೂರ್ವ ಭಾಗದಿಂದ ಪಟ್ಟಣದ ಜನರು ತಮ್ಮ ದಿನನಿತ್ಯದ ಕೆಲಸಕ್ಕೆ ಹೊಲಗಳಿಗೆ ವಿವಿಧ ಊರುಗಳಿಗೆ ತಹಶೀಲ್ದಾರ & ಯುಕೆಪಿ ಕಚೇರಿಗೆ, ಹಳೆ ಗ್ರಾಮಕ್ಕೆ ಹೊಲಗಳಿಗೆ ತೆರಳಬೇಕಾದರೆ ಈ ಹೆದ್ದಾರಿ ರಸ್ತೆಯನ್ನು ದಾಟಿಕೊಂಡು ತೆರಳಬೇಕು ತೆರಳುವ ಸಮಯದಲ್ಲಿ ಸ್ವಲ್ಪ ಅಜಾಗರುಕತರಾದರೆ ರಾತ್ರಿ ಹೊತ್ತು ಬೆಳಕಿನ ಕಿರಣಗಳ ಪ್ರಖರತೆಯಿಂದ ಯಾಮಾರಿದರೆ ಜೀವಕ್ಕೆ ಕುತ್ತು ತಂದುಕೊಂಡಂತೆ ಆಗುತ್ತದೆ. ಇದಕ್ಕೆ ಪರಿಹಾರ ರಾಷ್ಟ್ರೀಯ ಹೆದ್ದಾರಿಗೆ ಪುರ ಪ್ರವೇಶದ ಹತ್ತಿರ ರೋಡ್ ಹಂಪ್ಸಗಳನ್ನು ಎರಡೂ ಬದಿಗೆ ನಿರ್ಮಾಣ ಮಾಡುವದರಿಂದ ಜನರ ಜೀವಗಳನ್ನು ಕಾಪಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನರು.
ರಾಷ್ಟೀಯ ಹೆದ್ದಾರಿ ೨೧೮ನ್ನು ದಾಟುವಾಗ ಒಂದೇ ವಾರದಲ್ಲಿ ಅನಾಮದೇಯ ಪಾದಯಾತ್ರಿಕನೊಬ್ಬ ಮತ್ತು ಪಟ್ಟಣದ ಮಹದೇವ ಯಲ್ಲಪ್ಪ ಗಣಿ ಎಂಬ ವ್ಯಕ್ತಿಗಳು ಅಪಘಾತಗಳಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇದರಂತೆ ಒಂದು ವರ್ಷಕ್ಕೆ ಕನಿಷ್ಟ ಏನಿಲ್ಲವೆಂದರೂ ೧೦ ರಿಂದ ೧೨ ಜನರ ಪ್ರಾಣ ಕೆಲವು ಜನರಿಗೆ ಗಾಯ, ಪ್ರಾಣಿಗಳ ಸಾವುಗಳನ್ನು ಕೇಳುವದು ತಪ್ಪುತ್ತಿಲ್ಲ ಸಂಬಂಧಪಟ್ಟ ಇಲಾಖೆಯವರು ಇದೇ ರಸ್ತೆಯ ಸುಣಗ ಕ್ರಾಸ್ ಹತ್ತಿರ ಹಾಕಿರುವ ತರಹ ಆಧುನಿಕ ತಂತ್ರಜ್ಞಾನದ ರಸ್ತೆ ಹಂಪ್ಸ್‌ಗಳನ್ನು ನಿರ್ಮಾಣ ಮಾಡಿ ಜನರ ಹಾಗೂ ಪ್ರಾಣಿಗಳ , ದನ ಕರುಗಳ ಜೀವವನ್ನು ಕಾಪಾಡಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರ ವರ್ಗದವರು ವಿಶೇಷ ಕಾಳಜಿ ವಹಿಸಿ ತಕ್ಷಣವೇ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಕೊಲ್ಹಾರ ತಾಲೂಕು ರಚನಾ ಹೋರಾಟ ಸಮೀತಿ ಅಧ್ಯಕ್ಷ ಈರಣಗೌಡ ಬ ಕೋಮಾರ, ನಾಮದೇವ ಪವಾರ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಹೆದ್ದಾರಿಯಿಂದ ಕೊಲ್ಹಾರ ಪ್ರವೇಶ ರಸ್ತೆಗೆ ಹಂಪ್ಸ್ ನಿರ್ಮಿಸಲು ಆಗ್ರಹ
Related Posts
Add A Comment

