ನಿಡಗುಂದಿ: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮ ಸಮಾಜವನ್ನು ನಿರ್ಮಿಸುವಲ್ಲಿ ನಾಟಕಗಳು ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯಪಟ್ಟರು.
ಪಟ್ಟಣದ ಆರಾಧ್ಯ ದೇವಿ ತಾಯಿ ಬನಶಂಕರಿ ದೇವಿ ಜಾತ್ರೆಯ ಅಂಗವಾಗಿ ಶನಿವಾರ ರಾತ್ರಿ ಬನಶಂಕರಿ ಯುವಕ ಮಂಡಳ ಹಮ್ಮಿಕೊಂಡಿದ್ದ “ತಾಳಿ ಹರಿಯಲಿಲ್ಲ, ಶೀಲ ಉಳಿಯಲಿಲ್ಲ’ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮ, ಶ್ರಮ ಸಂಸ್ಕೃತಿಯ ಹರಿಕಾರರು, ತಮ್ಮ ಬೆವರಿನ ಹನಿಯಿಂದಲೇ ಇಡೀ ಸಮಾಜದ ಜನರ ಮಾನ ಮುಚ್ಚುವ ಬಟ್ಟೆ ನೇಯ್ಗೆಯ ಕಾಯಕದ ದೇವಾಂಗ ಸಮಾಜದ ಕಾರ್ಯನಿಷ್ಠೆ ಶ್ಲಾಘನೀಯ ಎಂದರು. ಎರಡು ದಿನ ಪ್ರದರ್ಶನಗೊಳ್ಳುತ್ತಿರುವ ಈ ಸಾಮಾಜಿಕ ನಾಟಕದಲ್ಲಿ ಶಿಕ್ಷಕರೇ ಹೆಚ್ಚಿನ ಸಂಖ್ಯೆಯ ಪಾತ್ರಧಾರಿಯಾಗಿರುವುದು ಸಂತಸದ ಸಂಗತಿ ಎಂದರು.
ನಾಟಕಗಳು ಮನರಂಜನೆಯಲ್ಲ, ಅಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ, ಆಧುನಿಕ ನಾಟಕಕಾರಗಳು ಬರೆದಿರುವ ನಾಟಕಗಳು ಕೂಡಾ ಗ್ರಾಮೀಣ ಭಾಗದಲ್ಲಿ ಕಲಾ ಆಸಕ್ತರು ಪ್ರಸಾರ ಮಾಡಿ ಕನ್ನಡತನದ ಶಕ್ತಿ ಇನ್ನಷ್ಟು ಹೆಚ್ಚಿಸಬೇಕು ಎಂದರು.
ನಿಡಗುಂದಿಯ ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಿಕ್ಷಕ ಸಂಘಟನೆಯ ಮುಖಂಡರಾದ ಅರ್ಜುನ ಲಮಾಣಿ, ಹನುಮಂತ ಕೊಣದಿ, ಜಗದೀಶ ಬೋಳಸೂರ, ಸಿ.ಟಿ. ಜತ್ತಿ, ಅಲ್ಲಾಭಕ್ಷ ವಾಲೀಕಾರ, ಮಹಾಂತೇಶ ಮುಕಾರ್ತಿಹಾಳ, ಆರ್.ಎಸ್. ಕಮತ, ಎಂ.ಆರ್. ಮಕದಾನದಾರ್, ಆನಂದ ಗೌಡರ, ಸಲೀಂ ದಡೆದ, ಬಿ.ಐ. ಚಲ್ಮಿ, ಎಂ.ಎಂ. ಮುಲ್ಲಾ ಮತ್ತೀತರರು ನಾಟಕದ ಉದ್ಘಾಟನೆಯ ವಿವಿಧ ಕಾರ್ಯಕ್ರಮ ನೆರವೇರಿಸಿದರು.
ಮುಖಂಡರಾದ ಬಸವರಾಜ ಹಳೇಮನಿ, ಸಂಗಮೇಶ ಗೌಡರ, ಶಂಕರಲಿಂಗ ಗೌಡರ, ವಿರೂಪಾಕ್ಷಪ್ಪ ಅಂಕದ, ಪಟ್ಟಣ ಪಂಚಾಯ್ತಿ ಸದಸ್ಯರಾದ ಶಿವಾನಂದ ಮುಚ್ಚಂಡಿ, ಹಣಮಂತ ಗುಂಡಿನಮನಿ, ಗಣೇಶ ಕೂಚಬಾಳ, ಡಾ ಸಂಗಮೇಶ ಗೂಗಿಹಾಳ, ಡಾ ಸಂತೋಷ ಬಸರಕೋಡ, ಎಸ್.ಎಸ್. ಹುಬ್ಬಳ್ಳಿ, ವೆಂಕಟೇಶ ವಡ್ಡರ, ಬಸವರಾಜ ಸಕ್ರಿ ಮತ್ತೀತರರು ವೇದಿಕೆಯ ಮೇಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

