ಆಲಮಟ್ಟಿ: ಕ್ರಿಸ್ತಪೂರ್ವದಿಂದಲೂ ಅಸ್ತಿತ್ವದಲ್ಲಿದ್ದ ಸನಾತನ ಧರ್ಮದಲ್ಲಿ “ಮೇಲು-ಕೀಳು’ ಎಂಬ ಕೆಟ್ಟ ವ್ಯವಸ್ಥೆ ಇತ್ತು, ಮುಂದೆ ರಾಜರ ಕಾಲದಲ್ಲಿಯೂ ಒಂದೇ ಧರ್ಮ ಪೋಷಿಸಲ್ಪಟ್ಟಿತು, ಒಟ್ಟಾರೇ ಹಿಂದಿನ ಕಾಲದಲ್ಲಿ ದಲಿತ ಜನಾಂಗಕ್ಕೆ ಅತಿ ಹೆಚ್ಚಿನ ಅನ್ಯಾಯವಾಗಿದೆ, ಪ್ರಾಣಿಗಳಿಗಿಂತಲೂ ಕಡೆಯಾಗಿದ್ದು ಸುಳ್ಳಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.
ಇಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಸೈನ್ಯ ರಾಜ್ಯ ಸಮಿತಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೇಲು-ಕೀಳು ಎಂಬ ಭಾವನೆ ತೊರೆಯುವಲ್ಲಿ ಹಾಗೂ ನಾನಾ ಅನಿಷ್ಠ ಪದ್ಧತಿಗಳನ್ನು ತೊಡೆಯಲು ಶ್ರಮಿಸಿದ ಗೌತಮ ಬುದ್ಧ, ಅಣ್ಣ ಬಸವಣ್ಣ, ರಾಜಾರಾಮ ಮೋಹನರಾಯ್, ಮಹಾತ್ಮಾ ಗಾಂಧೀಜಿ, ಡಾ ಬಿ.ಆರ್. ಅಂಬೇಡ್ಕರ, ಜ್ಯೋತಿಬಾ ಫುಲೆ ಅವರ ಕಾರ್ಯ ಇತಿಹಾಸದಲ್ಲಿ ಚಿರಸ್ಥಾಯಿ. ಅಂತಹ ಮಹಾನ್ ವ್ಯಕ್ತಿಗಳ ಚಿಂತನೆ, ಹೋರಾಟದ ಫಲವಾಗಿ ದಲಿತರು ಕೂಡಾ ಸಹಬಾಳ್ವೆ, ಸಮಾನತೆಯಿಂದ ಬದುಕುತ್ತಿದ್ದಾರೆ ಎಂದರು.
ಬಿಜೆಪಿ ಎಂದೂ ಸಂವಿಧಾನದ ಬದಲಾವಣೆಯ ಚಿಂತನೆಯೂ ಮಾಡಿಲ್ಲ, ಯಾರೋ ಹೇಳಿದ್ದು, ಅದು ಅವರ ವೈಯಕ್ತಿಕ ಹೇಳಿಕೆ, ಅದು ಪಕ್ಷ, ಸರ್ಕಾರದ ಹೇಳಿಕೆಯೂ ಅಲ್ಲ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹಾಗೂ ಅಂಬೇಡ್ಕರ ಸೈನ್ಯದ ಜಿಲ್ಲಾ ಸಂಚಾಲಕರು ಆದ ಮರೆಪ್ಪ ಹೆಬ್ಬಾಳ ಮಾತನಾಡಿದರು.
ಬೀದರನ ಶ್ರೀ ಭಂತೆ ವರಜ್ಯೋತಿ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವನಾಗಿ ದೇವರು ಬುದ್ಧ ವಂದನೆ ಸಲ್ಲಿಸಿ ಸಂವಿಧಾನದ ಬಗ್ಗೆ ಮಾತನಾಡಿದರು.
ದಲಿತ ಮುಖಂಡರಾದ ಧಾರವಾಡದ ಶಂಕ್ರಪ್ಪ ದೊಡಮನಿ, ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಕಾಶ ದೊಡಮನಿ, ಸಂಘಟನಾ ಸಂಚಾಲಕ ಗ್ಯಾನಪ್ಪ ಬೇವೂರ, ಮಲ್ಲು ಬಿಜ್ಜೂರ, ಉಮೇಶ ಅಲಕಪುರ, ಮಹಿಳಾ ಘಟಕದ ರಾಜ್ಯ ಅಧ್ಯಕ್ಷ ಮಾಲಾಶ್ರೀ ಬಾಬಾನಗರ, ವಿಜಯಪುರ ಜಿಲ್ಲಾ ಮಹಿಳಾ ಅಧ್ಯಕ್ಷೆ ಸುನಿತಾ ಹೆಬ್ಬಾಳ, ರಸೂಲಬಿ ಹೆಬ್ಬಾಳ, ಯಲ್ಲವ್ವ ಮಾದರ, ಸುಲೋಚನಾ ಬಾಬಾನಗರ, ಹಣಮವ್ವ ಆಲಮಟ್ಟಿ, ರಾಜು ಅಡಿಯಾಳ, ಬಸವರಾಜ ಮಳಗಾವಿ, ವಿನೋದ ಮಳಗಾವಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

