ಆಲಮಟ್ಟಿ: ಕವನಗಳು ಕನ್ನಡದ ಕಳೆಯನ್ನು ಹೆಚ್ಚಿಸುತ್ತವೆ. ನೊಂದವರ ಪಾಲಿನ ಆಶಾದ್ವನಿಯಾಗಿರಬೇಕೆಂದು ನಿಡಗುಂದಿ ತಹಶೀಲ್ದಾರ ಎ.ಬಿ.ಅಮರವಾಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಆಲಮಟ್ಟಿಯ ಜವಾಹರ ನವೋದಯ ವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ನಿಡಗುಂದಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸತ್ತಂತಿರುವರನ್ನು ಬಡಿದೆಬ್ಬಿಸುವಂತಿರಬೇಕು. ಓದುವವರ ಮನಸ್ಸನ್ನು ಸೊರೆಗೊಳ್ಳುವಂತಿರಬೇಕು. ಮುಖ್ಯವಾಗಿ ಸಮಾಜಮುಖಿಯಾಗಿ ಮೌಲ್ಯವನ್ನು ಎತ್ತಿ ತೋರಿಸುವಂತಿರಬೇಕೆಂದರು.
ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ವಿ ಶಾಂತಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಕ್ಕಳು ಮಾತೃಭಾಷೆಯಲ್ಲಿ ಪಾಂಡಿತ್ಯ ಪಡೆಯಬೇಕು. ಮಾತು ವೈರಿಗಳ ಮುಂದೆ ಗತ್ತಿನಂತೀರಬೇಕು. ಹೆದರಿಸುವವರ ಮುಂದೆ ಕತ್ತಿಯಂತಿರಬೇಕು. ಆತ್ಮೀಯರ ಮುಂದೆ ಮುತ್ತಿನಂತಿರಬೇಕು. ಹಿರಿಯರ ಮುಂದೆ ಹತ್ತಿಯಂತಿರಬೇಕು. ಕವನಗಳ ಅಥ೯ ಎಲ್ಲರಿಗೂ ತಿಳಿಯುವ ಹಾಗಿರಬೇಕೆಂದರು.
ಮುಖ್ಯ ಅತಿಥಿಯಾದ ಗ್ರಾಮೀಣ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಿದ್ರಾಮಪ್ಪ ನಾಗಠಾಣ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಿರುತ್ತದೆ. ಆಡಳಿತ ಭಾಷೆಯಾಗಿರುತ್ತದೆ. ಜಾನಪದ ಕವಿಗಳು ವಿದ್ಯಾಭ್ಯಾಸ ಮಾಡದಿದ್ದರೂ ಅನುಭವ ಜ್ಞಾನ ಅಪಾರವಾಗಿತ್ತು ಎಂದರು.
ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕವನ ರಚಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ ಪ್ರತಿಭಾವಂತರು ಸಾಹಿತ್ಯ ಆಸಕ್ತರು ಕವನ ರಚಿಸುವಲ್ಲಿ ಕ್ರೀಯಾಶೀಲತೆ ಹೊಂದಿರುತ್ತಾರೆ. ಹಾಗೂ ಜಾನಪದ, ಸಾಂಸ್ಕೃತಿಕ, ಸಾಹಿತ್ಯಿಕ, ಚಟುವಟಿಕೆಗಳಿಂದ ಮಕ್ಕಳಲ್ಲಿರುವ ಸೂಕ್ತವಾದ ಪ್ರತಿಭೆಯನ್ನು ಗುರುತಿಸಿ ಅವರಿಗೂ ಕವನ ಬರೆಯುವ ಹವ್ಯಾಸ ಬಳೆಸಲು ಸ್ಪೂರ್ತಿ ನೀಡಿದಂತಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ನಿಡಗುಂದಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಕೆಂಭಾವಿ ಮಾತನಾಡಿದರು.
ಉಪ ಪ್ರಾಂಶುಪಾಲ ಡಿ ಪಿ ತ್ಯಾಡಿ, ರಾಜೇಸಾಬ ಶಿವನಗುತ್ತಿ, ಎಮ್ ಎಸ್ ಮೂಕಾತಿ೯ಹಾಳ,ಆರ್ ಎ ನದಾಫ, ಯಮನೂರಪ್ಪ ಗಂಗಶೆಟ್ಟಿ, ನಬಿರಸೂಲ ಬಾಣಕರ ವೇದಿಕೆಯ ಮೇಲಿದ್ದರು.
ನಿಡಗುಂದಿ ಕಸಾಪ ಪದಾಧಿಕಾರಿಗಳಾದ
ನಜೀರ ಗುಳೇದ, ಸಲೀಮ ದಡೇದ, ಸಂತೋಷ ಮಾಮನಿ, ಎಂ.ಎಂ. ಮುಲ್ಲಾ, ಮಮತಾ ಪಟ್ಟಣಶೆಟ್ಟಿ, ಸುರೇಶ ಸಣ್ಣಮನಿ, ರಾಜು ತೊರಗಲಮಠ, ಮಲ್ಲಯ್ಯಾ ಬೂದಿಹಾಳಮಠ, ಎಸ್ ಎಮ್ ಕಮತಗಿ, ಗಂಗಾಧರ ಕಾಳಗಿ,
ಕಲ್ಮೇಶ ಮಲಘಾಣ, ಬಸವರಾಜ ಸಬರದ, ಜಗದೀಶ ಪಾಟೀಲ, ಖಲೀಲ ಖಾಜಿ, ಪೂಜಾ ಮಾಣಸಗೇರಿ, ಮಂಜುನಾಥ ದಳವಾಯಿ, ಉಪಸ್ಥಿತರಿದ್ದರು.
*ಕವನ ವಾಚನದಲ್ಲಿ ಭಾಗವಹಿಸಿದ ಕವಿಗಳು*
ಅಂಬಿಕಾ ಕರಕಪ್ಪಗೋಳ, ಶೀವಲೀಲಾ ಕೋರಿ, ಲಕ್ಷ್ಮೀ ಕಲ್ಲನಗುಡ್ಡ, ರುಕ್ಮಿಣಿ ಅಗಸರ, ಜಗದೀಶ ಬಿರಾದಾರ, ಸಂಗೀತಾ ಕುಚನೂರ, ಶೋಭಾ ಹರಿಜನ, ಶಿವಾಜಿ ಮೋರೆ, ಶಾಂತಲಾ ಪಾಟೀಲ, ಶಿಲ್ಪಾ ಭಸ್ಮೆ, ಸಂಗಮೇಶ ಕೆರೆಪ್ಪಗೋಳ, ನಾನಾಗೌಡ ಪಾಟೀಲ, ಟಿ ಬಿ ಕರದಾನಿ, ಸಂಗಮೇಶ ರೂಡಗಿ, ಭೀಮರಾಯ ನಾಯಕರ, ಸುಧಾ ಬಿರಾದಾರ, ಡಾ ವಾಲಪ್ಪಾ ಲಮಾಣಿ, ಪೂಜಾ ಪಡಕನೂರ ಕವನ ವಾಚಿಸಿದರು
ಮೇಘಾ ನಾಡಗೀತೆ ಹಾಡಿದರು.
ಪೂಜಾ ಮಾಣಸಗಿ ಸ್ವಾಗತಿಸಿದರು. ಭಾಗ್ಯಶ್ರೀ ಬಸರಕೊಡ ನಿರೂಪಿಸಿದರು. ಸ್ಪೂರ್ತಿ ಯತ್ನಾಳ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

