ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಸದ್ದು | ಚುನಾವಣೆ ಆಯೋಗದ ಎಚ್ಚರಿಕೆ
ಹೈದರಾಬಾದ: ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ ಹವಾ ಎಬ್ಬಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆಗಿದೆ. ಕರ್ನಾಟಕ ರಾಜ್ಯದ ಮಾದರಿಯಲ್ಲಿ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್, ಅದಕ್ಕೆ ಸಂಬಂಧಿಸಿಂತೆ ತೆಲುಗು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿತ್ತು. ಇದಕ್ಕೆ ಚುನಾವಣೆ ಆಯೋಗ ತಡೆ ನೀಡಿದ್ದಲ್ಲದೇ ಕಾಂಗ್ರೆಸ್ ಗೆ ಎಚ್ಚರಿಕೆ ಸಹ ನೀಡಿದೆ.
ಕರ್ನಾಟಕದಂತೆ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಆರು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಇದಕ್ಕೆ ಸಂಬಂಧಿಸಿದಂತೆ ತೆಲುಗಿನ ಸಾಕ್ಷಿ, ಆಂಧ್ರಜ್ಯೋತಿ, ಈ ನಾಡು ಪತ್ರಿಕೆಗಳಲ್ಲಿ ಮೊದಲ ಪೇಜಿನಲ್ಲಿ ದೊಡ್ಡ ಜಾಹೀರಾತುಗಳನ್ನು ನೀಡಿತ್ತು. ಕರ್ನಾಟಕದ ಹಣ ತೆಲಂಗಾಣದಲ್ಲಿ ಪೋಲಾಗುತ್ತಿದೆ ಎಂದು ಕಾಂಗ್ರೆಸ್ ನಡೆಯನ್ನು ಬಿಜೆಪಿ ವಿರೋಧಿಸಿತ್ತು.
ಕರ್ನಾಟಕ ರಾಜ್ಯದ ಸಚಿವರನ್ನು ತೆಲಂಗಾಣದಲ್ಲಿ ಚುನಾವಣೆಗಾಗಿ ನಿಯೋಜಿಸಿರುವ ಪಕ್ಷ ಮತ್ತು ಸಿಎಂ ಸಿದ್ದರಾಮಯ್ಯ ಅವರು, ಇದೀಗ ಇಲ್ಲಿನ ಜನರ ತೆರಿಗೆ ಹಣದಲ್ಲಿ ತೆಲುಗು ರಾಜ್ಯದಲ್ಲಿ ಜಾಹೀರಾತು ನೀಡಿವೆ. ಇದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದರು. ಜೊತೆಗೆ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರು ನೀಡಿತ್ತು.
ಇದೀಗ ಚುನಾವಣೆ ಆಯೋಗವು ಕಾಂಗ್ರೆಸ್ ತೆಲಂಗಾಣದ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡದಂತೆ ಕರ್ನಾಟಕ ಕಾಂಗ್ರೆಸ್‌ಗೆ ತಾಕೀತು ಮಾಡಿದೆ. ಸದ್ಯ ಸೋಮವಾರ ಇಡೀ ದಿನ ಕರ್ನಾಟಕ ಸರ್ಕಾರದ ಜಾಹೀರಾತಿನದ್ದೆ ಸುದ್ದಿ ಆಗಿತ್ತು. ಜಾಹೀರಾತು ನೀಡಿ ನಾವು ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಿದ್ದೇವೆ. ಆರೇ ತಿಂಗಳಲ್ಲಿ ನೀಡಿದ ಭರವಸೆ ಪೂರೈಸಿದ್ದೇವೆ ಎಂದು ಚುನಾವಣೆ ಗೆಲ್ಲುವ ತಂತ್ರ ಹೂಡಿದೆ.

