ಕೋರವಾರ ಗ್ರಾಮದಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತ್ಯೋತ್ಸವ
ದೇವರಹಿಪ್ಪರಗಿ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟು ವೀರ ಮರಣವನ್ನಪ್ಪಿದ ಮೈಸೂರ ಹುಲಿ ಟಿಪ್ಪುಸುಲ್ತಾನ್ ನಮಗೆಲ್ಲ ಮಾದರಿಯಾಗಿದ್ದಾರೆ. ಇವರ ಧೈರ್ಯ ಶೌರ್ಯ ದೇಶಪ್ರೇಮ, ಸಾಮಾಜಿಕ ಕಳಕಳಿ ನಮಗೆ ಮಾರ್ಗದರ್ಶನವಾಗಿದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.
ಸಮೀಪದ ಕೋರವಾರ ಗ್ರಾಮದಲ್ಲಿ ಹಮ್ಮಿಕೊಂಡ ಹಜರತ್ ಟಿಪ್ಪು ಸುಲ್ತಾನರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಮಡಿದವರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಸಮಾಜ ಸುಧಾರಣೆಯ ಜೊತೆಗೆ ಉತ್ತಮ ಆಡಳಿತ ನೀಡಿದ ಟಿಪ್ಪು ಸುಲ್ತಾನ ಅವರು ನಿತ್ಯ ಸ್ಮರಣಿಯರಾಗಿದ್ದಾರೆ. ಇವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಾಗೋಣ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಎಸ್‌ಎಸ್ ಪ್ರಮುಖ ವೈ ಸಿ ಮಯೂರ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಮಾತನಾಡಿದರು.
ಪಿಕೆಪಿಎಸ್ ಅಧ್ಯಕ್ಷ ಸಂಗಮೇಶ ಛಾಯಾಗೋಳ, ಜೆಡಿಎಸ್ ಪ್ರದಾನ ಕಾರ್ಯದರ್ಶಿ ಶೇಖರಗೌಡ ಪಾಟೀಲ ಸೇರಿದಂತೆ ಮತ್ತೀತರರು ಮಾತನಾಡಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ ಯಲಗಾರ, ಗ್ರಾಪಂ ಮಾಜಿ ಅಧ್ಯಕ್ಷ ರಾಜಶೇಖರ ಛಾಯಾಗೋಳ ದ್ವಜಾರೋಹಣ ನೆರವೇರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರಹಮ್ಮದ ಬೇಪಾರಿ ಮಾಲಾರ್ಪಣೆ ಮಾಡಿದರು. ಗ್ರಾಪಂ ಅಧ್ಯಕ್ಷ ರಫೀಕ ಬ್ಯಾಕೋಡ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಕಬೂಲ್ ಕೊಕಟನೂರ, ಮುಖಂಡರಾದ ಶ್ರೀನಾಥಗೌಡ ಪಾಟೀಲ, ಸಾಧಿಕ ಸುಂಬಡ, ಬಾಪುಗೌಡ ಬಿರಾದಾರ, ಭಿಮನಗೌಡ ಕುಳೆಕುಮಟಗಿ, ಚಿತ್ರಸೇನ ಆಲಗೂರ, ಕಲ್ಲನಗೌಡ ಸುಂಕದ, ಯುನೂಸ್ ನಾಯ್ಕೋಡಿ, ಸಂಗಮೇಶ ಮ್ಯಾಗೇರಿ, ಸುನೀಲಗೌಡ ಪಾಟೀಲ, ಮಹಾಂತಗೌಡ ಸುಂಬಡ, ಮಹಮ್ಮದರಫೀಕ ಮೊಮೀನ, ಮೈನು ಶೇಖ, ಅಯ್ಯೂಬ ತುರಕನಗೇರಿ, ನೂರಹಮ್ಮದ ನಂದ್ಯಾಳ, ಸಮೀರ ಸಿಂದಗಿ, ಕಾಶೀಂ ನಾಯ್ಕೋಡಿ, ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

