ವಿಜಯಪುರ: ಬೆನ್ನುಹುರಿ ಅಪಘಾತ ವಿಕಲಚೇತನರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳಬಾರದು. ಸೂಕ್ತ ಚಿಕಿತ್ಸೆ ಪಡೆದು, ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅಲ್‌ಅಮಿನ್ ಮೆಡಿಕಲ್ ಕಾಲೇಜ್‌ನ ಡಾ.ಜಿಲಾನಿ ಅವಟಿ ಕರೆ ನೀಡಿದರು.
ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಎಪಿಸಿ ಸಂಸ್ಥೆ ವಿಜಯಪುರ ಎಚ್ ಸಿ ಎಲ್ ಫೌಂಡೇಶನ್ ಅಲ್ ಅಮಿನ್ ಮೆಡಿಕಲ್ ಕಾಲೇಜ್, ಬೆನ್ನು ಹುರು ಅಪಘಾತ ವಿಕಲಚೇತನರ ಸಂಘ ಹಾಗೂ ಅನೌಪಚಾರಿಕ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ೩ ದಿನಗಳ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ವ್ಯಾಯಾಮ ಮತ್ತು ಉದ್ಯಮಶೀಲತೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರದೊಂದಿಗೆ ಕೈ ಜೋಡಿಸಿ ಸಂಘ ಸಂಸ್ಥೆಗಳು ವಿಕಲಚೇತನರ ಶ್ರೇಯೋಭಿವೃಧಿಗೆ ಶ್ರಮಿಸುತ್ತಿರುವದು ಸ್ತುತ್ತ್ಯಾರ್ಹ. ಮೂರು ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಇಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ದೈಹಿಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ಧೈವಾಡಿ, ಪ್ಲಾಸ್ಟಿಕ್ ಸರ್ಜನ್ ಡಾ.ಅಜಿಜುಉಲ್ಲಾ, ಡಾ. ಶಾಹೀನ್ ಕುಡಚಿ, ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಸಕ ಫಾದರ ಡಿವೂಲ್ ಮಜಾದೊ, ಫಿಜಿಯೋಥೆರಪಿಸ್ಟ್ ಡಾ. ಶ್ರುತಿ ಗಚ್ಚಿ ಶಿಸ್ಟರ್ ಅಮೇಲಾ, ಭಾಗ್ಯಶ್ರೀ ಬೋರಗಿ, ಎನ್ ಪಾಲಸ್ವಾಮಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

