ಮೋರಟಗಿ: ಸುಪ್ರಸಿದ್ದ ಘತ್ತರಗಿ ಗ್ರಾಮಕ್ಕೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಪ್ರತಿ ಶುಕ್ರವಾರ ಸಹಸ್ರಾರು ಭಕ್ತಾದಿಗಳು ಹಾಗೂ ವ್ಯಾಪಾರ ವಹಿವಾಟು ಮಾಡುವ ಸಾರ್ವಜನಿಕರು ಸಂಚರಿಸುತ್ತಿದ್ದು, ಈ ಮಾರ್ಗದಲ್ಲಿ ಟ್ರಾಕ್ಟರ್ ಚಾಲಕರು ದ್ವಿಚಕ್ರ ಸವಾರರು ಹಾರ್ನ ಹಾಕಿದರೂ ಕೇಳದ ನಿಟ್ಟಿನಲ್ಲಿ ಮನಬಂದಂತೆ ಟೇಪಿನ ಸೌಂಡ್ ಹೆಚ್ಚಿಸಿ ಸುಮಾರು ವರ್ಷಗಳಿಂದ ಚಾಲನೆ ಮಾಡುತ್ತ ಬರುತಿದ್ದು ಇದರಿಂದ ಆಗಾಗ ಅಪಘಾತ ಆಗುತ್ತಲೇ ಬಂದಿವೆ. ಕೂಡಲೇ ಅಧಿಕಾರಿಗಳು ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿಗೆ ಸೂಚಿಸಿ ಶಬ್ದ ಮಾಲಿನ್ಯ ಕ್ಕೆ ಬ್ರೇಕ್ ಹಾಕಿ ಸಾರ್ವಜನಿಕರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾ ದಸಸ ಸಂಚಾಲಕ ಧರ್ಮರಾಜ ಯಂಟಮಾನ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ್ ತಾಲೂಕಿನ ಹಾವಳಗಾ ಶ್ರೀ ರೇಣುಕಾ ಶುಗರ್ ಖಾರ್ಖಾನೆ ಹಾಗೂ ಆಲಮೇಲ್ ತಾಲೂಕಿನ ಮನಾಲಿ ಶುಗರ್ ಖಾರ್ಖಾನೆ ಗೆ ಕಬ್ಬು ಸಾಗಿಸುವ ವಾಹನಗಳಿಂದ ಆಗುತ್ತಿರುವ ಅಪಘಾತ ಖಂಡಿಸಿ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಹಾಗೂ ರೈತರ ಹಲವಾರು ಬೇಡಿಕೆಗಳ ಕುರಿತು ಅಗ್ರಹಿಸಿ ದಲಿತ ಸಂಘರ್ಷ ಸಮೀತಿ ಹಾಗೂ ವಿವಿಧ ಜನಪರ ಸಂಘಟನೆಗಳು ಜಂಟಿಯಾಗಿ ಬಗಲೂರ ಗ್ರಾಮದ ಡಾ, ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿ ತಹಸೀಲ್ದಾರ್ ಮೂಲಕ ಘನ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಟ್ರಾಕ್ಟರ್ ಗಳ ಹಿಂದುಗಡೆ ರೇಡಿಯಂ ನಾಮ ಫಲಕ ಹಾಕದೆ ಇರುವುದರಿಂದ ರಾತ್ರಿ ವೇಳೆ ವಾಹನ ಸವಾರರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದರಿಂದ ಅದೆಷ್ಟೋ ಅಮಾಯಕರು ಅಪಘಾತದಲ್ಲಿ ಸಾವನ್ನಪ್ಪಿ ಕುಟುಂಬಸ್ಥರು ಸಾಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಕಳೆದ ವಾರ ರಾತ್ರಿ ವೇಳೆಯಲ್ಲಿ ಪಂಚೆರ್ ಆಗಿ ನಿಂತಿರುವ ಟ್ರಾಕ್ಟರ್ ಎರಡು ಬೈಕ್ ಸವಾರರ ಅಪಘಾತವಾಗಿ ಸ್ಥಳದಲ್ಲೇ ಒಬ್ಬ ಸವಾರ ಮೃತಪಟ್ಟು, ಇನ್ನೋರ್ವ ಆಸ್ಪತ್ರೆಯಲ್ಲಿ ಸಾವು ನೋವಿನ ಮದ್ಯದಲ್ಲಿ ಹೋರಾಡುತ್ತ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರಣ ಕೂಡಲೇ ಟ್ರಾಕ್ಟರ್ ವಾಹನಗಳಲ್ಲಿ ಟೇಪ್ ರಿಕಾರ್ಡರ್ ಸೌಂಡ್ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಬಗಲೂರ ಗ್ರಾ.ಪಂ.ಅಧ್ಯಕ್ಷ ಲವಕುಶ ಮೋರಟಗಿ, ಸಿದ್ದಣ್ಣ ಐರೊಡಗಿ, ನಿಂಗಣ್ಣ ವಾಲೀಕಾರ, ಹಾವಣ್ಣ ಕಕ್ಕಳಮೇಲಿ, ಟೀಪು ಅಧ್ಯಕ್ಷ ಸದ್ದಾಂ ಜಮಾದಾರ, ವಾಲ್ಮಿಕಿ ಸಂಘಟನೆ ಅಧ್ಯಕ್ಷ ಸುರೇಶ ವಾಲೀಕಾರ, ಕನಕಸೇನೆ ಅಧ್ಯಕ್ಷ ಮಾಣಿಕ ಮಾಗಣಗೇರಿ, ಭೋವಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಗೌಂಡಿ, ಭಾಗಣ್ಣ ಕಟ್ಟಿಮನಿ, ಶಿವಪ್ಪ ಮಾನೇಗಾರ, ಅಂಬ್ರೀಷ ದೇವರಮನಿ, ಬಸವರಾಜ ಯಂಟಮಾನ, ಮರಗಪ್ಪ ಮೂಕರ್ತಿಹಾಳ ಇದ್ದರು.
Subscribe to Updates
Get the latest creative news from FooBar about art, design and business.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿಎಸ್ಸೆಸ್ ಪ್ರತಿಭಟನೆ
Related Posts
Add A Comment

